ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಜುನಾಥ್ ರಾಜಕಾರಣ ಪ್ರವೇಶಿಸಿದ್ದು ದುರದೃಷ್ಟಕರ: ನಾಗತಿಹಳ್ಳಿ ಚಂದ್ರಶೇಖರ್

Published 16 ಮಾರ್ಚ್ 2024, 3:12 IST
Last Updated 16 ಮಾರ್ಚ್ 2024, 3:12 IST
ಅಕ್ಷರ ಗಾತ್ರ

ಬೆಂಗಳೂರು: ಬೆಂಗಳೂರಿನ ಜಯದೇವ ಹೃದ್ರೋಗ ಆಸ್ಪತ್ರೆಯ ನಿವೃತ್ತ ನಿರ್ದೇಶಕರಾದ ಡಾ. ಸಿ.ಎನ್. ಮಂಜುನಾಥ್ ಅವರು ರಾಜಕಾರಣ ಪ್ರವೇಶಿಸಿದ್ದು ದುರದೃಷ್ಟಕರ ಎಂದು ಚಿತ್ರ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಹೇಳಿದ್ದಾರೆ.

‘ನಮ್ಮ ಪ್ರೀತಿಯ ವೈದ್ಯ ಡಾ. ಸಿ.ಎನ್. ಮಂಜುನಾಥ್ ರಾಜಕಾರಣ ಪ್ರವೇಶಿಸಿದ್ದು ದುರದೃಷ್ಟಕರ. ಕಾರಣ ಏನೇ ಇರಲಿ. ಇಲ್ಲಿ ಪಡೆದುದನ್ನು ಅಲ್ಲಿ ಕಳೆದುಕೊಳ್ಳಬಹುದೇನೋ. ಜನರ ಸೇವೆ ಮಾಡಲು ರಾಜಕಾರಣ ಒಂದೇ ದಾರಿ ಅಂತ ಯಾವ ಮೂರ್ಖ ಹೇಳಿದ? ಸಮಾಜವನ್ನು ಕಟ್ಟಲು ಸಾವಿರ ದಾರಿಗಳಿವೆ. ಮಂಜುನಾಥ್ ಇದು ನಿಮಗೆ ಬೇಕಿತ್ತೆ?’ ಎಂದು ಚಂದ್ರಶೇಖರ್ ಅವರು ‘ಎಕ್ಸ್‌’ನಲ್ಲಿ ಪೋಸ್ಟ್ ಮಾಡಿದ್ದಾರೆ.

ನಾಗತಿಹಳ್ಳಿ ಚಂದ್ರಶೇಖರ್ ಅವರ ಪೋಸ್ಟ್‌ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದ್ದು, ಪರ –ವಿರೋಧದ ಚರ್ಚೆಗೆ ಗ್ರಾಸವಾಗಿದೆ.

ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ–ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿ ಡಾ. ಸಿ.ಎನ್. ಮಂಜುನಾಥ್ ಅವರು ಬಿಜೆಪಿಯಿಂದ ಕಣಕ್ಕಿಳಿಯಲಿದ್ದಾರೆ. ಇತ್ತೀಚೆಗೆ ಬಿಜೆಪಿ ಬಿಡುಗಡೆ ಮಾಡಿರುವ ಪಟ್ಟಿಯಲ್ಲಿ ಕ್ಷೇತ್ರದ ಅಭ್ಯರ್ಥಿಯಾಗಿ ಮಂಜುನಾಥ್ ಹೆಸರನ್ನು ಘೋಷಿಸಲಾಗಿದೆ.

ರಾಜ್ಯದ ಏಕೈಕ ಕಾಂಗ್ರೆಸ್ ಸಂಸದರಾಗಿರುವ ಡಿ.ಕೆ. ಸುರೇಶ್ ಪ್ರತಿನಿಧಿಸುವ ಕ್ಷೇತ್ರವು ಇದೇ ಆಗಿದೆ. ಹಾಗಾಗಿ ಈ ಬಾರಿ ಹೆಚ್ಚು ಪೈಪೋಟಿ ನಿರೀಕ್ಷಿಸಲಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT