ಮಕರ ಸಂಕ್ರಾಂತಿ ಹಬ್ಬದ ಪ್ರಯುಕ್ತ ಮೈಸೂರು ತಾಲ್ಲೂಕಿನ ಸಿದ್ಧಲಿಂಗಪುರದಲ್ಲಿ ಮಂಗಳವಾರ ರಾಸುಗಳನ್ನು ಕಿಚ್ಚು ಹಾಯಿಸಿದರು.
ಪ್ರಜಾವಾಣಿ ಚಿತ್ರ/ಅನೂಪ್ ರಾಘ.ಟಿ.
ADVERTISEMENT
ಯಾದಗಿರಿ ತಾಲ್ಲೂಕಿನ ಐತಿಹಾಸಿಕ ಮೈಲಾಪುರದ ಮೈಲಾರಲಿಂಗೇಶ್ವರ ಜಾತ್ರೆಯ ಅಂಗವಾಗಿ ಮಂಗಳವಾರ ಪಲ್ಲಕ್ಕಿ ಉತ್ಸವ ಅದ್ಧೂರಿಯಾಗಿ ನಡೆಯಿತು. ಹೊನ್ನಕೆರೆಗೆ ಉತ್ಸವ ಮೂರ್ತಿ ಮಲ್ಲಯ್ಯನನ್ನು ಪವಿತ್ರ ಸ್ನಾನಕ್ಕೆ ತೆಗೆದುಕೊಂಡು ಬರುವಾಗ ಸೇರಿದ್ದ ಅಪಾರ ಜನಸ್ತೋಮ
ಪ್ರಜಾವಾಣಿ ಚಿತ್ರ: ರಾಜಕುಮಾರ ನಳ್ಳಿಕರ್
ಸಂಕ್ರಾಂತಿ ನಿಮಿತ್ತ ಮಂಗಳವಾರ ಉತ್ತರ ಕನ್ನಡ ಜಿಲ್ಲೆಯ ಶಿವತಾಣವಾದ ಶಿರಸಿ ತಾಲ್ಲೂಕಿನ ಸಹಸ್ರಲಿಂಗದಲ್ಲಿ ಭಕ್ತರು ಶಾಲ್ಮಲಾ ನದಿಯಲ್ಲಿ ಪುಣ್ಯ ಸ್ನಾನ ಮಾಡಿದರು
ಉಡುಪಿಯ ಶ್ರೀಕೃಷ್ಣ ಮಠದಲ್ಲಿ ಸಪ್ತೋತ್ಸವದ ಅಂಗವಾಗಿ ಮಕರಸಂಕ್ರಾತಿ ದಿನವಾದ ಮಂಗಳವಾರ ಮಳೆಯ ನಡುವೆಯೇ ರಾತ್ರಿ ಮೂರು ರಥಗಳ ಉತ್ಸವ ನೆರವೇರಿತು
ಪ್ರಜಾವಾಣಿ ಚಿತ್ರ: ಉಮೇಶ್ ಮಾರ್ಪಳ್ಳಿ
ಗುಂಡ್ಲುಪೇಟೆ ತಾಲ್ಲೂಕಿನ ತೆರಕಣಾಂಬಿ ಸಮೀಪದ ಪ್ರಮುಖ ಧಾರ್ಮಿಕ ಕ್ಷೇತ್ರ ವೆಂಕಟರಮಣಸ್ವಾಮಿ ಬೆಟ್ಟದಲ್ಲಿ ವೆಂಕಟರಮಣಸ್ವಾಮಿ ರಥೋತ್ಸವ ವಿಜೃಂಭಣೆಯಿಂದ ಸಾವಿರಾರು ಭಕ್ತರ ಸಮ್ಮುಖದಲ್ಲಿ ನಡೆಯಿತು.
ಪ್ರಜಾವಾಣಿ ಚಿತ್ರ
ಶಿವಮೊಗ್ಗದ ತುಮರಿ ಸಮೀಪದ ಸಿಗಂದೂರು ಚೌಡೇಶ್ವರಿ ದೇವಸ್ಥಾನದಲ್ಲಿ ಸಂಕ್ರಾಂತಿ ಅಂಗವಾಗಿ ದೇವಿಯ ಜಾತ್ರೋತ್ಸವ ನಡೆಯುತ್ತಿದೆ. ಮಂಗಳವಾರ ದೇವಿಯ ಮೂಲ ಸ್ಥಾನ ಸೀಗೆ ಕಣಿವೆಯಿಂದ ಹೊರಟ ಜ್ಯೋತಿ ಮೆರವಣಿಗೆಯಲ್ಲಿ ನೂರಾರು ಮಹಿಳೆಯರು ಭಾಗವಹಿಸಿದ್ದರು.
ಪ್ರಜಾವಾಣಿ ಚಿತ್ರ: ಸುಕುಮಾರ್.ಎಂ
ಸಂಕ್ರಾಂತಿ ಪ್ರಯುಕ್ತ ಬಾಗಲಕೋಟೆ ಜಿಲ್ಲೆಯ ಬಾದಾಮಿ ಸಮೀಪದ ಮಹಾಕೂಟೇಶ್ವರ ಪುಷ್ಕರಣಿಯಲ್ಲಿ ಮಂಗಳವಾರ ಭಕ್ತರು ಪುಣ್ಯಸ್ನಾನ ಮಾಡಿದರು