ಬೆಂಗಳೂರು: ರಾಜ್ಯ ಕೋಟಾದಲ್ಲಿ ವೈದ್ಯಕೀಯ ಸೀಟು ಪಡೆದ 774 ಅಭ್ಯರ್ಥಿಗಳು ಅಖಿಲ ಭಾರತ ಕೋಟಾದಲ್ಲೂ ಆಯ್ಕೆಯಾಗಿದ್ದಾರೆ. ಅವರಿಗೆ ಹೊರಹೋಗಲು ಅವಕಾಶ ನೀಡಲಾಗಿದ್ದು, ಉಳಿಕೆ ಸೀಟುಗಳನ್ನು ಪರಿಗಣಿಸಿ, ಸೆ.23ರಂದು ಮರು ಹಂಚಿಕೆ ಫಲಿತಾಂಶ ಪ್ರಕಟಿಸಲಾಗುತ್ತದೆ.

ವೈದ್ಯಕೀಯ, ದಂತ ವೈದ್ಯಕೀಯ ಕೋರ್ಸ್ಗಳ ಎರಡು ಹಾಗೂ ಆಯುಷ್ ಕೋರ್ಸ್ಗಳ ಮೂರನೇ ಸುತ್ತಿನ ಸೀಟು ಹಂಚಿಕೆಯ ಅಂತಿಮ ಫಲಿತಾಂಶ ಪ್ರಕಟವಾಗಲಿದ್ದು, ಸೆ.26ರ ಒಳಗೆ ಶುಲ್ಕ ಪಾವತಿಸಿ ಸೀಟು ಖಾತರಿ ಚೀಟಿ ಡೌನ್ಲೋಡ್ ಮಾಡಿಕೊಳ್ಳಬೇಕು. ಸೆ.28ರ ಒಳಗೆ ಕಾಲೇಜುಗಳಿಗೆ ಪ್ರವೇಶ ಪಡೆಯಬೇಕು ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಕಾರ್ಯನಿರ್ವಾಹಕ ನಿರ್ದೇಶಕ ಎಚ್.ಪ್ರಸನ್ನ ಹೇಳಿದ್ದಾರೆ.

ಕೆಇಎ ಮೊದಲ ಸುತ್ತಿನಲ್ಲಿ ಸೀಟು ಹಂಚಿಕೆಯಾಗಿ ಕಾಲೇಜಿಗೆ ಸೇರಿದ್ದ ಅಭ್ಯರ್ಥಿಗಳಿಗೆ ಎಂಸಿಸಿಯಲ್ಲಿ ಸೀಟು ಸಿಕ್ಕ ನಂತರ ರಾಜ್ಯ ಕೋಟಾದ ಸೀಟು ರದ್ದುಪಡಿಸಿಕೊಳ್ಳಲು ಅವಕಾಶ ನೀಡಲಾಗಿತ್ತು. ಆ ಸೀಟುಗಳನ್ನು ಕೂಡ ಎರಡನೇ ಸುತ್ತಿಗೆ ಪರಿಗಣಿಸಲಾಗಿದೆ.

ವಿವಿಧ ಕಾರಣಗಳಿಂದ ವೈದ್ಯಕೀಯ ಕೋರ್ಸ್ಗಳಿಗೆ ಇದುವರೆಗೂ ಅರ್ಜಿಯನ್ನೇ ಸಲ್ಲಿಸದವವರಿಗೆ ಹೊಸದಾಗಿ ನೋಂದಣಿ ಮಾಡಿಕೊಳ್ಳಲು ಸೆ.25ರಿಂದ 29ರವರೆಗೆ ಅವಕಾಶ ನೀಡಲಾಗುವುದು. ಸಿಇಟಿಗೆ ಅರ್ಜಿ ಸಲ್ಲಿಸಿ, ಕೆಇಎ ಪೋರ್ಟಲ್ನಲ್ಲಿ ನೀಟ್ ರೋಲ್ ನಂಬರ್ ನಮೂದಿಸಲು ಸೆ.29ರಿಂದ ಅ.3ರವರೆಗೆ ಅವಕಾಶ ನೀಡಲಾಗುವುದು ಎಂದು ವಿವರಿಸಿದ್ದಾರೆ.

ಮಾಪ್ಅಪ್ ಸುತ್ತಿನಲ್ಲಿ ಭಾಗವಹಿಸುವ ಎಲ್ಲ ಅಭ್ಯರ್ಥಿಗಳಿಗೂ ಹೊಸದಾಗಿಯೇ ಆಪ್ಷನ್ಸ್ ದಾಖಲಿಸಲು ಅವಕಾಶ ನೀಡಲಾಗುತ್ತದೆ. ಲಭ್ಯ ಸೀಟುಗಳನ್ನು ಗಮನದಲ್ಲಿಟ್ಟುಕೊಂಡು ಪ್ರಕ್ರಿಯೆಯಲ್ಲಿ ಭಾಗವಹಿಸಲು ಅನುಕೂಲವಾಗುತ್ತದೆ ಎಂದು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.