ಬೆಂಗಳೂರು: ಬುದ್ಧ, ಬಸವ ಮತ್ತು ಅಂಬೇಡ್ಕರ್ ಮಾಡಲಾಗದ್ದನ್ನು ಮೊಬೈಲ್ ಫೋನ್ಗಳು ಮಾಡಿವೆ!

‘ಅಂತರ್ಜಾತಿ ವಿವಾಹ ಹೆಚ್ಚು ಹೆಚ್ಚು ಆಗಬೇಕು. ಇದರಿಂದ ಜಾತಿ ವ್ಯವಸ್ಥೆ ಅಳಿದು ಹೋಗುತ್ತದೆ ಎಂದು ಅಂಬೇಡ್ಕರ್ ಹೇಳಿದ್ದರು. ಅದು ಸಾಧ್ಯವಾಗಿದ್ದು ಮೊಬೈಲ್ ಫೋನ್ಗಳಿಂದ. ಮೊಬೈಲ್ ಫೋನ್ ಬಂದ ಮೇಲೆ ಲಕ್ಷಾಂತರ ಅಂತರ್ಜಾತಿ ವಿವಾಹಗಳು ನಡೆ
ದಿವೆ’ ಎಂದು ವಿಧಾನಸಭೆಯಲ್ಲಿ ಕಾಂಗ್ರೆಸ್ನ ನಾರಾಯಣರಾವ್ ಹೇಳಿದರು.

ಸಂವಿಧಾನದ ಮೇಲಿನ ಚರ್ಚೆಯಲ್ಲಿ ಭಾಗವಹಿಸಿದ ಅವರು ಮೊಬೈಲ್ ಫೋನ್ಗಳು ಅಂತರ್ಜಾತಿ ವಿವಾಹದ ಕ್ರಾಂತಿ ಸೃಷ್ಟಿಸುತ್ತಿರುವುದನ್ನು ಸ್ವಾರಸ್ಯಕರವಾಗಿ ವಿವರಿಸಿದರು.

ಅಂಬೇಡ್ಕರ್ ಅವರು ಸಂವಿಧಾನಸಭೆಗೆ ಆಯ್ಕೆ ಆಗಿ ಬರಲು ಅವರನ್ನು ಬೆಂಬಲಿಸಿದ ಮುಸ್ಲಿಂ ಲೀಗ್ ಕಾರಣ. ಈ ದೇಶದಲ್ಲಿ ದೇವಸ್ಥಾನಗಳಲ್ಲಿ ದಲಿತರಿಗೆ ಪ್ರವೇಶ ನೀಡಲಿಲ್ಲ. ಆದರೆ, ಮುಸ್ಲಿಮರು ದರ್ಗಾಗಳಲ್ಲಿ ಮುಕ್ತಾವಕಾಶ ನೀಡಿದರು. ಮೊಹರಂ ಅನ್ನು
ದಲಿತರು, ಹಿಂದುಳಿದವರು ಈಗಲೂ ಶ್ರದ್ಧಾಭಕ್ತಿಯಿಂದ ಆಚರಿಸುತ್ತಾರೆ. ಆದ್ದರಿಂದ ಹಿಂದೂ–ಮುಸ್ಲಿಮರ ಹೃದಯವನ್ನು ಒಡೆಯುವ ಪೌರತ್ವ ಕಾಯ್ದೆ ಜಾರಿ ಮಾಡಿದ್ದು ಸರಿಯಲ್ಲ ಎಂದರು.

‘ಅಂಬೇಡ್ಕರ್ ಅವರು ಈ ದೇಶದಲ್ಲಿ ಜನ್ಮ ತಳೆಯದೇ ಇದಿದ್ದರೆ. ನಾವು ಈ ಸದನಕ್ಕೆ ಬರಲು ಸಾಧ್ಯವಿರಲಿಲ್ಲ. ತುಳಿತಕ್ಕೆ ಒಳಗಾದವರ ಜೀವನ ಹಸನಾಗಲು ಅಂಬೇಡ್ಕರ್ ಅವರು ನೀಡಿದ ಸಂವಿಧಾನವೇ ಕಾರಣ’ ಎಂದು ನಾರಾಯಣರಾವ್ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.