ಬೆಂಗಳೂರು: ಸರ್ಕಾರಿ ಪದವಿಪೂರ್ವ ಕಾಲೇಜುಗಳಲ್ಲಿ ಶೈಕ್ಷಣಿಕ ಚಟುವಟಿಕೆಗಳ ಮಾಹಿತಿ ಸಂಗ್ರಹಿಸಲು ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯ (ಡಯಟ್) ಹಿರಿಯ ಉಪನ್ಯಾಸಕರನ್ನು ನಿಯೋಜನೆ ಮಾಡಿರುವ ಸುತ್ತೋಲೆಗೆ ಪದವಿಪೂರ್ವ ಕಾಲೇಜುಗಳ ಉಪನ್ಯಾಸಕರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಪದವಿ ಪೂರ್ವ ಶಿಕ್ಷಣದ ಗುಣಮಟ್ಟವನ್ನು ಅಳೆಯಲು ಪದವಿಪೂರ್ವ ಶಿಕ್ಷಣ ಇಲಾಖೆ ಪ್ರಶ್ನಾವಳಿಗಳನ್ನು ಸಿದ್ಧಪಡಿಸಿದೆ. ಡಯಟ್ ಉಪನ್ಯಾಸಕರು ಪ್ರತಿ ಕಾಲೇಜಿಗೂ ತೆರಳಿ ಈ ಪ್ರಶ್ನಾವಳಿಗಳ ಆಧಾರದಲ್ಲಿ ಶೈಕ್ಷಣಿಕ ಚಟುವಟಿಕೆಗಳ ಮಾಹಿತಿ ಸಂಗ್ರಹಿಸಿ, ಮೊಬೈಲ್ ಅಪ್ಲಿಕೇಷನ್ನಲ್ಲಿ ಅಪ್ಲೋಡ್ ಮಾಡಲಿದ್ದಾರೆ.

ಈ ಕುರಿತು ಶಾಲಾ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ, ಪದವಿಪೂರ್ವ ಶಿಕ್ಷಣ ಇಲಾಖೆಯ ನಿರ್ದೇಶಕರಿಗೆ ಪತ್ರ ಬರೆದಿರುವ ರಾಜ್ಯ ಪದವಿಪೂರ್ವ ಕಾಲೇಜುಗಳ ಉಪನ್ಯಾಸಕರ ಸಂಘ, ಪದವಿಪೂರ್ವ ಶಿಕ್ಷಣ ಇಲಾಖೆ ಹಾಗೂ ಡಿಎಸ್ಆರ್ಟಿ ಜಂಟಿಯಾಗಿ ಹೊರಡಿಸಿರುವ ಸುತ್ತೋಲೆಯನ್ನು ತಕ್ಷಣ ಹಿಂಪಡೆಯುವಂತೆ ಒತ್ತಾಯಿಸಿದೆ.

‘ಎರಡೂ ಇಲಾಖೆಗೂ ಹೊರಡಿಸಿರುವ ಈ ಆದೇಶ ಪದವಿ ಪೂರ್ವ ಶಿಕ್ಷಣದ ಅಸ್ಮಿತೆ, ಗೌರವದ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಎತ್ತಿದೆ. ಡಯಟ್ ಉಪನ್ಯಾಸಕರಿಗೆ ಪದವಿ ಪೂರ್ವ ಪಠ್ಯಕ್ರಮದ ವೈಜ್ಞಾನಿಕ ಹಿನ್ನೆಲೆ, ಎನ್ಸಿಇಆರ್ಟಿ ಆಧಾರಿತ ವಿಷಯದ ವ್ಯಾಪ್ತಿ ಹಾಗೂ ಆಳವಾದ ಅರಿವು ಇರುವುದಿಲ್ಲ. ಅವರನ್ನು ಪದವಿ ಪೂರ್ವ ಉಪನ್ಯಾಸಕರ ಕೆಲಸದ ಪರಿಶೀಲನೆಗೆ ನಿಯೋಜಿಸಿರುವುದು ಶಿಕ್ಷಣದ ತತ್ವಕ್ಕೆ ಅವಮಾನ. ವಿಷಯದ ಅರಿವಿಲ್ಲದವರು ಪದವಿ ಪೂರ್ವ ಕಾಲೇಜು ಉಪನ್ಯಾಸಕರ ಬೋಧನೆ, ಪ್ರಾಯೋಗಿಕತೆ ಹಾಗೂ ಪಠ್ಯಮೌಲ್ಯವನ್ನು ಹೇಗೆ ವಿಮರ್ಶಿಸಬಲ್ಲರು’ ಎಂದು ಸಂಘದ ಅಧ್ಯಕ್ಷ ಎ.ಎಚ್. ನಿಂಗೇಗೌಡ ಪ್ರಶ್ನಿಸಿದ್ದಾರೆ.

‘ಶಿಕ್ಷಣ ಇಲಾಖೆ ಇಂತಹ ನಿರ್ಧಾರಗಳಿಂದ ಶಿಕ್ಷಣ ವ್ಯವಸ್ಥೆಯ ವಿಶ್ವಾಸಾರ್ಹತೆ, ಶಿಕ್ಷಕರ ಗೌರವ ಮತ್ತು ವಿದ್ಯಾರ್ಥಿಗಳ ಭವಿಷ್ಯಕ್ಕೆ ತೀವ್ರ ಹಾನಿ ಉಂಟುಮಾಡುತ್ತಿದೆ. ಪದವಿ ಪೂರ್ವ ಶಿಕ್ಷಣವು ಶಾಲಾ ತರಬೇತಿಯ ವಿಸ್ತರಣೆ ಅಲ್ಲ. ವೈಜ್ಞಾನಿಕ, ಸ್ಪರ್ಧಾತ್ಮಕ ಹಾಗೂ ರಾಷ್ಟ್ರಮಟ್ಟದ ಪಠ್ಯಕ್ರಮ. ಈ ಸತ್ಯವನ್ನು ಅರಿಯದೇ ತೆಗೆದುಕೊಳ್ಳುವ ಕ್ರಮಗಳು ವಿದ್ಯಾರ್ಥಿಗಳ ಭವಿಷ್ಯವನ್ನೇ ಅಪಾಯಕ್ಕೆ ಒಡ್ಡುತ್ತವೆ’ ಎಂದು ಅವರು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.