ಶನಿವಾರ, 15 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿ.ಡಿ.ಪ್ರಕರಣ: ಕಾಂಗ್ರೆಸ್‌ನ ಯುವ‌ ಮುಖಂಡ ನಲಪಾಡ್ ಆಪ್ತನ‌ ಕಾರಿನಲ್ಲಿ ಸಂತ್ರಸ್ತೆ

Last Updated 31 ಮಾರ್ಚ್ 2021, 10:30 IST
ಅಕ್ಷರ ಗಾತ್ರ

ಬೆಂಗಳೂರು: ಸಿ.ಡಿ. ಪ್ರಕರಣದಲ್ಲಿ‌ ನ್ಯಾಯಾಲಯಕ್ಕೆ‌ ಹೇಳಿಕೆ ನೀಡಲು ಸಂತ್ರಸ್ತೆ, ಕಾಂಗ್ರೆಸ್ ಯುವ‌ ಮುಖಂಡ ಮೊಹಮ್ಮದ್ ನಲಪಾಡ್ ಅವರ ಆಪ್ತ ನಫಿ ಕಾರಿನಲ್ಲಿ ಬಂದಿದ್ದರು ಎಂಬ ಮಾಹಿತಿ ಹೊರಬಿದ್ದಿದೆ.

ಸಿಆರ್‌ಪಿಸಿ 164ರಡಿ ಹೇಳಿಕೆ‌ ದಾಖಲಿಸಲು ಸಂತ್ರಸ್ತೆ ‌ಪರ‌‌ ವಕೀಲ ಕೆ.ಎನ್. ಜಗದೀಶ್ ಕುಮಾರ್ ಅರ್ಜಿ ಸಲ್ಲಿಸಿದ್ದರು. ನ್ಯಾಯಾಲಯದ ಒಪ್ಪಿಗೆ ಸಿಗುತ್ತಿದ್ದಂತೆ ಯುವತಿ ನ್ಯಾಯಾಲಯಕ್ಕೆ ಹಾಜರಾದರು.

ಹೊರರಾಜ್ಯದಲ್ಲಿ ತಲೆಮರೆಸಿಕೊಂಡಿದ್ದ ಸಂತ್ರಸ್ತೆ, ಸೋಮವಾರ ಮಧ್ಯಾಹ್ನವೇ ವಿಮಾನದಲ್ಲಿ‌ ನಗರಕ್ಕೆ ಬಂದಿದ್ದರು.
ಆದರೆ, ಹೇಳಿಕೆ ನೀಡಲು ಸೋಮವಾರ ಅನುಮತಿ‌ ಸಿಕ್ಕಿರಲಿಲ್ಲ. ಹೀಗಾಗಿ, ಅವರು ದೇವನಹಳ್ಳಿ‌ ಬಳಿಯ ಸ್ಥಳವೊಂದರಲ್ಲಿ ಉಳಿದುಕೊಂಡಿದ್ದರು.

ಮಂಗಳವಾರ ಮಧ್ಯಾಹ್ನ ನ್ಯಾಯಾಲಯಕ್ಕೆ ಹಾಜರಾಗಲು ಅನುಮತಿ ಸಿಕ್ಕಿತ್ತು. ಅವಾಗಲೇ ನಫಿ‌ ಕಾರಿನಲ್ಲಿ (ಕೆಎ 51 ಎಂಬಿ 7634) ಸಂತ್ರಸ್ತೆ, ವಸಂತನಗರದ ವಿಶೇಷ ನ್ಯಾಯಾಲಯಕ್ಕೆ ಬಂದಿಳಿದರು.

ಹೇಳಿಕೆ‌‌‌ ದಾಖಲು ನಂತರ ಅದೇ ಕಾರಿನಲ್ಲಿ ಯುವತಿ, ಆಡುಗೋಡಿಯಲ್ಲಿರುವ ಸಿಸಿಬಿ ತಾಂತ್ರಿಕ ವಿಭಾಗಕ್ಕೆ‌ ಹೋಗಿ ಧ್ವನಿ ಮಾದರಿ ನೀಡಿದರು. ತನಿಖಾಧಿಕಾರಿ ಕವಿತಾ ಅವರ ವಿಚಾರಣೆ ‌ಎದುರಿಸಿದರು. ವಿಚಾರಣೆ ‌ಮುಗಿದ‌ ನಂತರ‌ ನಫಿ ಕಾರಿನಲ್ಲೇ ಯುವತಿ ಹೊರಟು ಹೋದರು.

ನ್ಯಾಯಾಲಯಕ್ಕೆ ಬಂದಿದ್ದ ನಲಪಾಡ್: ಯುವತಿ ಹಾಜರು‌ ಸುದ್ದಿ ಹಾರಿದಾಡುತ್ತಿದ್ದಂತೆ ಮೊಹಮ್ಮದ್ ನಲಪಾಡ್ ಅವರು ಮ್ಯಾಜಿಸ್ಟ್ರೇಟ್ ನ್ಯಾಯಾಲಯದ ಎದುರು ಬಂದಿದ್ದರು.

‘ಯುವತಿಗೆ ನೈತಿಕ ಸ್ಥೈರ್ಯ ನೀಡಲು ನ್ಯಾಯಾಲಯಕ್ಕೆ ಬಂದಿದ್ದೇನೆ. ಅನ್ಯಾಯಕ್ಕೊಳಗಾದ ಯುವತಿ‌ ಪರ‌ ನಾವಿದ್ದೇವೆ’ ಎಂದೂ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದರು.

ಇವನ್ನೂ ಓದಿ...

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT