ಶುಕ್ರವಾರ, 12 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

KPCC ಪದಾಧಿಕಾರಿ ಪಟ್ಟಿ ಪರಿಷ್ಕರಣೆ: ಸುಶ್ರುತ, ಭವ್ಯಾ ನರಸಿಂಹಮೂರ್ತಿಗೆ ಅವಕಾಶ

Published 3 ಏಪ್ರಿಲ್ 2024, 16:24 IST
Last Updated 3 ಏಪ್ರಿಲ್ 2024, 16:24 IST
ಅಕ್ಷರ ಗಾತ್ರ

ಬೆಂಗಳೂರು: ಕೆಪಿಸಿಸಿ ಪದಾಧಿಕಾರಿಗಳ ಪಟ್ಟಿಯನ್ನು ಪರಿಷ್ಕರಿಸಿ ಎಐಸಿಸಿ ಬುಧವಾರ ಪ್ರಕಟಿಸಿದೆ. ಏಪ್ರಿಲ್‌ 1ರಂದು ಪ್ರಕಟವಾಗಿದ್ದ 43 ಉಪಾಧ್ಯಕ್ಷರು, 138 ಪ್ರಧಾನ ಕಾರ್ಯದರ್ಶಿಗಳ ಪಟ್ಟಿಗೆ ಕೆಲವು ಶಾಸಕರು, ಹಿರಿಯ ನಾಯಕರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರು. ಹೀಗಾಗಿ ಕೆಲವು ಹೆಸರುಗಳನ್ನು ಕೈಬಿಟ್ಟು, ಕೆಲವು ಹೆಸರುಗಳನ್ನು ಸೇರಿಸಿ ಮತ್ತೆ ಪ್ರಕಟಿಸಲಾಗಿದೆ ಎಂದು ಕಾಂಗ್ರೆಸ್‌ ಮೂಲಗಳು ತಿಳಿಸಿವೆ.

ಹೊಸ ಪಟ್ಟಿಯಲ್ಲಿ ಉಪಾಧ್ಯಕ್ಷರ ಸಂಖ್ಯೆಯನ್ನು 44ಕ್ಕೆ ಹೆಚ್ಚಿಸಲಾಗಿದೆ. ಪ್ರಧಾನ ಕಾರ್ಯದರ್ಶಿಗಳ ಸಂಖ್ಯೆಯನ್ನು 144ಕ್ಕೆ ಹೆಚ್ಚಿಸಲಾಗಿದೆ. ಹೊಸ ಪಟ್ಟಿಯಲ್ಲಿ ಬಿ.ಆರ್‌. ನಾಯ್ಡು, ಡಾ. ಸುಶ್ರುತ ಗೌಡ, ಭವ್ಯಾ ನರಸಿಂಹಮೂರ್ತಿ ಹೆಸರು ಸೇರಿಸಲಾಗಿದೆ.

ತಾವು ಶಿಫಾರಸು ಮಾಡಿದ್ದ ಕೆಲವು ಹೆಸರುಗಳನ್ನು ಕೈಬಿಟ್ಟಿರುವುದಕ್ಕೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಕೂಡಾ ಬೇಸರಗೊಂಡಿದ್ದರು. ಹೀಗಾಗಿ ಕೆಲವರನ್ನು ಪಟ್ಟಿಗೆ ಎಐಸಿಸಿ ಹೊಸತಾಗಿ ಸೇರಿಸಿದೆ ಎಂದೂ ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT