‘ಸದನದಿಂದ ಬಿಸಾಕಬೇಕಾಗುತ್ತದೆ’
‘ಇಷ್ಟವಿಲ್ಲದಿದ್ದರೆ ಸದನದಿಂದ ಹೊರ ನಡೆಯಿರಿ. ಇಲ್ಲದಿದ್ದರೆ ತೆಗೆದು ಬಿಸಾಕಬೇಕಾಗುತ್ತದೆ’ ಎಂದು ಯು.ಟಿ. ಖಾದರ್ ಅವರು ಸದಸ್ಯರಿಗೆ ಎಚ್ಚರಿಕೆ ನೀಡಿದರು. ಅಂಬೇಡ್ಕರ್ ಅವರ ವಿಷಯದಲ್ಲಿ ಸದನದಲ್ಲಿ ದೀರ್ಘ ಕಾಲ ಗದ್ದಲ ಮುಂದುವರಿಯಿತು. ವಿರೋಧ ಮತ್ತು ಆಡಳಿತ ಪಕ್ಷದ ಸದಸ್ಯ ಮಾತಿನ ಚಕಮಕಿ ಜೋರಾಯಿತು. ಗದ್ದಲ ನಿಯಂತ್ರಣಕ್ಕೆ ಬಾರದಿದ್ದಾಗ ಸಿಟ್ಟಾದ ಖಾದರ್ ಮೇಲಿನಂತೆ ಎಚ್ಚರಿಕೆ ನೀಡಿದರು. ಸ್ಪೀಕರ್ ಮಾತನ್ನೂ ಬಿಜೆಪಿಯವರು ಆಕ್ಷೇಪಿಸಿದರು. ಕೆಲ ಸಮಯದ ಬಳಿಕ ಪರಿಸ್ಥಿತಿ ತಿಳಿಯಾಯಿತು.