ಜೈಕಾರ–ಬಣಗಳ ಶಕ್ತಿ ಪ್ರದರ್ಶನ
ಕೆ.ಸಿ.ವೇಣುಗೋಪಾಲ್ ಬಜಪೆಯ ವಿಮಾನನಿಲ್ದಾಣದಿಂದ ಹೊರಬರುತ್ತಿದ್ದಂತೆಯೇ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮಿಥುನ್ ರೈ ನೇತೃತ್ವದ ಗುಂಪು ಡಿ.ಕೆ.ಶಿವಕುಮಾರ್ ಅವರಿಗೆ ಜೈಕಾರ ಹಾಕಿ ‘ಡಿಕೆಶಿ ಮುಖ್ಯಮಂತ್ರಿಯಾಗಲಿ’ ಎಂದು ಘೋಷಣೆ ಕೂಗಿತು. ವೇಣುಗೋಪಾಲ್ ನಿರ್ಗಮಿಸಿದ ಕೆಲ ಹೊತ್ತಿನ ಬಳಿಕ ಬಂದ ಸಿದ್ದರಾಮಯ್ಯ ಅವರು ವಿಮಾನದಲ್ಲಿ ನಿಲ್ದಾಣದಿಂದ ಹೊರುತ್ತಿದ್ದಂತೆ ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ನೇತೃತ್ವದ ಬಣದವರು ಸಿದ್ದರಾಮಯ್ಯಗೆ ಜೈಕಾರ ಹಾಕಿ ‘ಸಿದ್ದರಾಮಯ್ಯ ಪೂರ್ಣಾವಧಿ ಮುಖ್ಯಮಂತ್ರಿ’ ಎಂದು ಘೋಷಣೆ ಕೂಗಿದರು. ಘೋಷಣೆ ರಾಜಕೀಯ ಬಗ್ಗೆ ಪ್ರತಿಕ್ರಿಯಿಸಿದ ಸತೀಶ ಜಾರಕಿಹೊಳಿ ‘ಈ ರೀತಿ ಜೈಕಾರ ಹಾಕುವುದರಿಂದ ಏನೂ ಪ್ರಯೋಜನ ಆಗುವುದಿಲ್ಲ’ ಎಂದರು.