ನವದೆಹಲಿ: ಕನ್ನಡದ ಹೆಸರಾಂತ ಕಾದಂಬರಿಕಾರ ಎಸ್. ಎಲ್. ಭೈರಪ್ಪ ಅವರಿಗೆ ಸಾಹಿತ್ಯ ಅಕಾಡೆಮಿಯಲ್ಲಿ ಶ್ರದ್ಧಾಂಜಲಿ ಸಲ್ಲಿಸಲಾಯಿತು.

ಅಕಾಡೆಮಿಯ ಕೇಂದ್ರ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಅಕಾಡೆಮಿಯ ಅಧ್ಯಕ್ಷ ಮಾಧವ ಕೌಶಿಕ್, ಕಾರ್ಯದರ್ಶಿ ಕೆ. ಶ್ರೀನಿವಾಸ ರಾವ್, ಕರ್ನಾಟಕದ ಸದಸ್ಯರಾದ ಬಸವರಾಜ ಸಾದರ, ಮನು ಬಳಿಗಾರ ಹಾಗೂ ಅಕಾಡೆಮಿಯ ಸದಸ್ಯರು ಪಾಲ್ಗೊಂಡಿದ್ದರು.

ಈ ಸಂದರ್ಭದಲ್ಲಿ ಮಾತನಾಡಿದ ಬಸವರಾಜ ಸಾದರ ಅವರು ಭೈರಪ್ಪ ಅವರ ಬಾಲ್ಯದ ಕಷ್ಟದ ಬದುಕು, ವಾರಾನ್ನ ಉಂಡು ವಿದ್ಯಾಭ್ಯಾಸ ಮಾಡಿದ ದಿನಗಳು, ಸಿನಿಮಾ ಥಿಯೇಟರ್ನ ಗೇಟ್ ಕೀಪರ್ ಆಗಿದ್ದು, ನಾಟಕ ಕಂಪನಿಯ ಲೆಕ್ಕ ಬರೆಯುವ ಕೆಲಸ ಮಾಡಿದ್ದು, ರೈಲು ನಿಲ್ದಾಣದಲ್ಲಿ ಕೂಲಿ ಮಾಡಿದ್ದು ಇವೆಲ್ಲ ಸಂದರ್ಭಗಳನ್ನು ಪ್ರಸ್ತಾಪಿಸಿದರು. ಕಷ್ಟಗಳನ್ನೂ ಅನುಭವಿಸಿದ ಅವರು ಓದುವ ಹಂಬಲವೊಂದನ್ನೇ ಇಟ್ಟುಕೊಂಡ ಕಾರಣಕ್ಕಾಗಿ ಮಹತ್ವದ ಸಾಧಕರಾಗಿ ಹಾಗೂ ಕನ್ನಡದ ಶ್ರೇಷ್ಠ ಕಾದಂಬರಿಕಾರರಾಗಿ ಬೆಳೆದರು ಎಂದು ಹೇಳಿದರು.

ಮನು ಬಳಿಗಾರ ಅವರು ಭೈರಪ್ಪ ಅವರ ಜತೆಗಿನ ಒಡನಾಟವನ್ನು ಸ್ಮರಿಸಿಕೊಂಡರು.

ಅಕಾಡೆಮಿ ಅಧ್ಯಕ್ಷ ಮಾಧವ ಕೌಶಿಕ್ ಮಾತನಾಡಿ, ‘ಭೈರಪ್ಪ ಅವರು ಭಾರತದ ಮಹಾನ್ ಕಾದಂಬರಿಕಾರರು’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.