ನವದೆಹಲಿ: ಕಂದಾಯ ಇಲಾಖೆಯ ಸ್ವಾಧೀನದಲ್ಲಿರುವ 'ಅರಣ್ಯ ಭೂಮಿ' ಎಂದು ದಾಖಲಾಗಿರುವ ಭೂಮಿಯನ್ನು ಅರಣ್ಯ ಇಲಾಖೆಗೆ ಹಸ್ತಾಂತರಿಸುವಂತೆ ಕರ್ನಾಟಕ ಸೇರಿದಂತೆ ಎಲ್ಲ ರಾಜ್ಯ ಸರ್ಕಾರಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಸುಪ್ರೀಂ ಕೋರ್ಟ್ ನಿರ್ದೇಶನ ನೀಡಿದೆ.

ಭಾರತದ ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಯಿ, ನ್ಯಾಯಮೂರ್ತಿಗಳಾದ ಆಗಸ್ಟೀನ್ ಜಾರ್ಜ್ ಮಸಿಹ್ ಮತ್ತು ಕೆ.ವಿನೋದ್ ಚಂದ್ರನ್ ಅವರ ಪೀಠವು, ವಾಣಿಜ್ಯ ಉದ್ದೇಶಗಳಿಗಾಗಿ ಅಮೂಲ್ಯವಾದ ಅರಣ್ಯವನ್ನು ಭೂ ಪರಿವರ್ತಿಸುವಲ್ಲಿ ಭಾಗಿಯಾಗುತ್ತಿರುವ ರಾಜಕಾರಣಿಗಳು, ಅಧಿಕಾರಿಗಳು ಮತ್ತು ಬಿಲ್ಡರ್ಗಳ ನಡುವಿನ ಅಪವಿತ್ರ ಮೈತ್ರಿಯನ್ನು ತೀವ್ರವಾಗಿ ಖಂಡಿಸಿದೆ.

ಸಾರ್ವಜನಿಕ ವಿಶ್ವಾಸದ ಸಿದ್ಧಾಂತದಡಿಯಲ್ಲಿ ಕಾರ್ಯನಿರ್ವಹಿಸುವ ಕಾರ್ಯಾಂಗವು ನೈಸರ್ಗಿಕ ಸಂಪನ್ಮೂಲಗಳನ್ನು ಬೇರೆಯವರಿಗೆ ನೀಡಲು ಮತ್ತು ಅವುಗಳನ್ನು ಖಾಸಗಿ ಮಾಲೀಕತ್ವಕ್ಕೆ ಅಥವಾ ವಾಣಿಜ್ಯ ಬಳಕೆಗೆ ಪರಿವರ್ತನೆ ಮಾಡಲು ಸಾಧ್ಯವಿಲ್ಲ ಎಂದು ಪೀಠವು ಒತ್ತಿ ಹೇಳಿತು.

’ಅರಣ್ಯೇತರ ಉದ್ದೇಶಗಳಿಗಾಗಿ ಅನೇಕ ಅರಣ್ಯ ಭೂಮಿಗಳನ್ನು ಖಾಸಗಿ ವ್ಯಕ್ತಿಗಳು/ಸಂಸ್ಥೆಗಳಿಗೆ ಹಂಚಿಕೆ ಮಾಡಲಾಗಿದೆ ಮತ್ತು 1996ರ ಡಿಸೆಂಬರ್ 12ರ ನಂತರದ ಯಾವುದೇ ಅಂತಹ ಹಂಚಿಕೆ ಕಾನೂನಿನಲ್ಲಿ ಸಮರ್ಥನೀಯವಲ್ಲ’ ಎಂದು ನ್ಯಾಯಪೀಠ ಹೇಳಿತು.

ಕಂದಾಯ ಇಲಾಖೆಯ ಸ್ವಾಧೀನದಲ್ಲಿರುವ ಯಾವುದೇ ಮೀಸಲು ಅರಣ್ಯ ಭೂಮಿಯನ್ನು ಅರಣ್ಯ ಉದ್ದೇಶಕ್ಕೆ ಹೊರತುಪಡಿಸಿ ಯಾವುದೇ ಖಾಸಗಿ ವ್ಯಕ್ತಿಗಳು/ಸಂಸ್ಥೆಗಳಿಗೆ ಹಂಚಿಕೆ ಮಾಡಲಾಗಿದೆಯೇ ಎಂಬುದನ್ನು ಪರಿಶೀಲಿಸಲು ಎಲ್ಲ ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳು ಮತ್ತು ಎಲ್ಲ ಕೇಂದ್ರಾಡಳಿತ ಪ್ರದೇಶಗಳ ಆಡಳಿತಾಧಿಕಾರಿಗಳು ವಿಶೇಷ ತನಿಖಾ ತಂಡಗಳನ್ನು ರಚಿಸಬೇಕು ಎಂದು ನ್ಯಾಯಪೀಠ ಸೂಚಿಸಿತು.

ಈ ಪ್ರಕ್ರಿಯೆಯನ್ನು ಒಂದು ವರ್ಷದೊಳಗೆ ನಡೆಸಬೇಕು ಎಂದು ಪೀಠ ತಾಕೀತು ಮಾಡಿತು. ಜತೆಗೆ, ಅಂತಹ ಭೂಮಿಯನ್ನು ಅರಣ್ಯೀಕರಣದ ಉದ್ದೇಶಕ್ಕಾಗಿ ಮಾತ್ರ ಬಳಸಬೇಕು ಎಂದು ಹೇಳಿತು.

ಪುಣೆಯ ಮೀಸಲು ಅರಣ್ಯ ಭೂಮಿಗೆ ಸಂಬಂಧಿಸಿದಂತೆ ಪೀಠವು 88 ಪುಟಗಳ ತೀರ್ಪನ್ನು ಪ್ರಕಟಿಸಿದೆ.

1988ರ ಆಗಸ್ಟ್ 28 ರಂದು ಪುಣೆ ಜಿಲ್ಲೆಯ ಕೊಂಧ್ವಾ ಬುದ್ರುಕ್ನಲ್ಲಿ 11.89 ಹೆಕ್ಟೇರ್ ಮೀಸಲು ಅರಣ್ಯ ಭೂಮಿಯನ್ನು ಕೃಷಿ ಉದ್ದೇಶಗಳಿಗಾಗಿ ಹಂಚಿಕೆ ಮಾಡಲಾಗಿತ್ತು. ನಂತರ 1999ರ ಅಕ್ಟೋಬರ್ 30ರಂದು ಆರ್ಆರ್ಸಿಎಚ್ಎಸ್ ಪರವಾಗಿ ಅದನ್ನು ಮಾರಾಟ ಮಾಡಲು ಅನುಮತಿ ನೀಡಲಾಗಿತ್ತು. ಇದು ಸಂಪೂರ್ಣವಾಗಿ ಕಾನೂನುಬಾಹಿರವಾಗಿದೆ ಎಂದು ಪೀಠ ಅಭಿಪ್ರಾಯಪಟ್ಟಿತು.

ಜೊತೆಗೆ, 2007ರ ಜುಲೈ 3ರಂದು ಆರ್ಆರ್ಸಿಎಚ್ಎಸ್ಗೆ ಅರಣ್ಯ ಸಚಿವಾಲಯ ನೀಡಿದ್ದ ಪರಿಸರ ನಿರಾಕ್ಷೇಪಣಾ ಪತ್ರವನ್ನು ಕೂಡ ಪೀಠ ವಜಾಗೊಳಿಸಿತು.

ತ್ರಿಸದಸ್ಯ ಪೀಠದಲ್ಲಿ ಒಬ್ಬರಾದ ಮುಖ್ಯ ನ್ಯಾಯಮೂರ್ತಿಯವರು, ‘ರಾಜಕಾರಣಿಗಳು, ಅಧಿಕಾರಿಗಳು ಮತ್ತು ಬಿಲ್ಡರ್ಗಳ ನಡುವಿನ ಅಪವಿತ್ರ ಸಂಬಂಧದ ಮೂಲಕ ಹಿಂದುಳಿದ ವರ್ಗಗಳ ಪುನರ್ವಸತಿ ಹೆಸರಿನಲ್ಲಿ ಅಮೂಲ್ಯ ಅರಣ್ಯ ಭೂಮಿಯನ್ನು ಹೇಗೆ ವಾಣಿಜ್ಯ ಉದ್ದೇಶಕ್ಕೆ ಪರಿವರ್ತನೆ ಮಾಡಲಾಗುತ್ತದೆ ಎಂಬುದಕ್ಕೆ ಪ್ರಸ್ತುತ ಪ್ರಕರಣವು ಒಂದು ಅತ್ಯುತ್ತಮ ಉದಾಹರಣೆಯಾಗಿದೆ’ ಎಂದು ಅಭಿಪ್ರಾಯಪಟ್ಟರು.

‘ಮಹಾರಾಷ್ಟ್ರದ ಆಗಿನ ಕಂದಾಯ ಸಚಿವರು ಮತ್ತು ಆಗಿನ ಜಿಲ್ಲಾಧಿಕಾರಿಯು ಸಾರ್ವಜನಿಕರ ವಿಶ್ವಾಸಕ್ಕೆ ತಿಲಾಂಜಲಿ ಇಟ್ಟಂತೆ ಕಾಣುತ್ತಿದೆ. ಇದು ದಾಖಲೆಗಳಲ್ಲಿ ಎದ್ದು ಕಾಣುತ್ತಿದೆ’ ಎಂದು ಪೀಠ ಅಭಿಪ್ರಾಯ ವ್ಯಕ್ತಪಡಿಸಿತು.

ಈ ಪ್ರಕರಣದಲ್ಲಿ, ಅರಣ್ಯ ಭೂಮಿಯಾಗಿ ಮೀಸಲಾಗಿರುವ, ಕಂದಾಯ ಇಲಾಖೆಯ ಸ್ವಾಧೀನದಲ್ಲಿರುವ ಭೂಮಿಯನ್ನು ಮೂರು ತಿಂಗಳ ಅವಧಿಯೊಳಗೆ ಅರಣ್ಯ ಇಲಾಖೆಗೆ ಹಸ್ತಾಂತರಿಸಬೇಕು ಎಂದು ನ್ಯಾಯಾಲಯ ನಿರ್ದೇಶನ ನೀಡಿತು. ಪ್ರಸ್ತುತ ಭೂಮಿಯನ್ನು 'ಚವಾಣ್ ಕುಟುಂಬ'ಕ್ಕೆ ಹಂಚಿಕೆ ಮಾಡಲು ಅನುಮೋದನೆ ನೀಡಿರುವ 1988ರ ಆಗಸ್ಟ್ 4ರ ಸಂವಹನವನ್ನು ಹಿಂಪಡೆಯುವ ಮಹಾರಾಷ್ಟ್ರ ಸರ್ಕಾರದ ನಿರ್ಧಾರವನ್ನು ನ್ಯಾಯಾಲಯ ಎತ್ತಿಹಿಡಿದಿತು.

ವನ್ಯಜೀವಿ ಕಾಯ್ದೆ ಉಲ್ಲಂಘನೆ: ಸರ್ಕಾರ ವಿರುದ್ಧ ಕ್ರಮದ ಎಚ್ಚರಿಕೆ

ವನ್ಯಜೀವಿ (ಸಂರಕ್ಷಣೆ) ಕಾಯ್ದೆಯಡಿಯಲ್ಲಿ ನಡೆಯುವ ಅಪರಾಧಗಳಿಗೆ ಸಂಬಂಧಪಟ್ಟ ಸರ್ಕಾರ ಮತ್ತು ಅಧಿಕಾರಿಗಳ ವಿರುದ್ಧ ಕಠಿಣ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಸುಪ್ರೀಂಕೋರ್ಟ್ ಎಚ್ಚರಿಸಿದೆ.

ಪ್ರತ್ಯೇಕ ಪ್ರಕರಣವೊಂದರಲ್ಲಿ ಆದೇಶ ನೀಡಿರುವ ಪೀಠವು ‘ತ್ವರಿತ ನಗರೀಕರಣ ವಸಾಹತುಶಾಯಿ ಉದ್ಯಮ ಮತ್ತು ವಿವಿಧ ವಾಣಿಜ್ಯ ಉದ್ದೇಶಗಳಿಗೆ ಭೂಮಿ ಬಳಕೆ ಹೆಚ್ಚಳದಿಂದ ವನ್ಯಜೀವ ಪರಿಸರ ದಿನದಿಂದ ದಿನಕ್ಕೆ ಕಡಿಮೆಯಾಗುತ್ತಿದ್ದು ಅದು ವನ್ಯಜೀವಿ ಮರ–ಗಿಡಗಳಿಗೆ ಅಪಾಯಕಾರಿಯಾಗಿದೆ. ಮುಂದೊಂದು ದಿನ ಇವುಗಳು ಅವನತಿ ಹೊಂದುವುದು ಕೂಡ ಸತ್ಯವಾಗುತ್ತದೆ’ ಎಂದು ಆತಂಕ ವ್ಯಕ್ತಪಡಿಸಿದೆ.

ವನ್ಯಜೀವಿಗಳ ಚರ್ಮ ಮತ್ತು ಮೂಳೆಯ ಜಪ್ತಿ ಪ್ರಕರಣದಲ್ಲಿ ಇಬ್ಬರು ಅಪರಾಧಿಗಳ ಶಿಕ್ಷೆಯನ್ನು ಪೀಠ ಈ ಪ್ರಕರಣದಲ್ಲಿ ಎತ್ತಿಹಿಡಿದಿತ್ತು.

’1978ರ ಪೂರ್ವದ ಅತಿಕ್ರಮಣಕಾರರಿಗೆ ಆತಂಕ’

‘ಸುಪ್ರೀಂ ಕೋರ್ಟ್ ಆದೇಶದಿಂದ ಹಂಗಾಮಿ ಮತ್ತು 1978ರ ಪೂರ್ವದ ಅತಿಕ್ರಮಣಕಾರರು ಹಾಗೂ ಇನ್ನಿತರ ಉದ್ದೇಶಕ್ಕೆ ಅರಣ್ಯ ಭೂಮಿ ಅವಲಂಬಿತರಾಗಿರುವ ಅರಣ್ಯವಾಸಿಗಳು ಆತಂಕಕ್ಕೆ ಒಳಗಾಗಿದ್ದಾರೆ’ ಎಂದು ಎಂದು ರಾಜ್ಯ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ಅಧ್ಯಕ್ಷ ರವೀಂದ್ರ ನಾಯ್ಕ ಹೇಳಿದರು.

‘ಅರಣ್ಯ ಸಂರಕ್ಷಣಾ ಕಾಯ್ದೆ ಜಾರಿಗೆ ಬಂದ ನಂತರ 1978ರ ಪೂರ್ವದಲ್ಲಿ ಕರ್ನಾಟಕದಲ್ಲಿ 19348 ಪ್ರಕರಣಗಳಿಗೆ ಸಂಬಂಧಿಸಿ 14848 ಹೆಕ್ಟೇರ್ ಪ್ರದೇಶ ಗುರುತಿಸಲಾಗಿತ್ತು. ಅದರಂತೆ 3 ಸಾವಿರಕ್ಕೂ ಮಿಕ್ಕಿ ಹಂಗಾಮಿ ಲಾಗಣಿದಾರರು ವಾರ್ಷಿಕ ಗುತ್ತಿಗೆ ಹಣ ನೀಡಿ ನವೀಕರಣ ಮಾಡಿಲ್ಲ. ಕೇಂದ್ರ ಸರ್ಕಾರದ ಪರವಾನಗಿ ಪಡೆಯದೇ 8 ಸಾವಿರ ಕುಟುಂಬಗಳಿಗೆ ವಸತಿಗಾಗಿ ಆಶ್ರಯ ಪಟ್ಟವನ್ನು ಕಂದಾಯ ಇಲಾಖೆಯು ಅರಣ್ಯ ಭೂಮಿಯನ್ನು ವರ್ಗಿಕರಣ ಮಾಡಿದೆ. ಸುಪ್ರೀಂ ಕೋರ್ಟ್ನ ಈ ಆದೇಶದಿಂದ ಅರಣ್ಯವಾಸಿಗಳು ಮುಂದಿನ ಕಾನೂನಾತ್ಮಕ ಸಮಸ್ಯೆಗಳ ಕುರಿತು ಆತಂಕಕ್ಕೆ ಒಳಗಾಗಲು ಕಾರಣವಾಗಿದೆ’ ಎಂದು ಅವರು ತಿಳಿಸಿದರು.

‘ನಯಾಪೈಸೆ ಗುತ್ತಿಗೆ ಪಾವತಿಸದ ಪ್ರಕರಣಗಳು ರಾಜ್ಯದಲ್ಲಿವೆ’

ಸುಪ್ರೀಂಕೋರ್ಟ್ನ ಈ ತೀರ್ಪು ತುಂಬಾ ಮುಖ್ಯವಾದುದು. ಕರ್ನಾಟಕದಲ್ಲಿ ಮೀಸಲು ಅರಣ್ಯ ಮಂಜೂರು ಮಾಡುವ ಕಂದಾಯ ಇಲಾಖೆಯ ನಿರ್ಧಾರದಿಂದ ಕಾರಿಡಾರ್ಗಳ ನಾಶ ಸೇರಿದಂತೆ ದೊಡ್ಡ ಪ್ರಮಾಣದ ಹಾನಿ ಉಂಟಾಗಿದೆ. ಇದರಿಂದ ಮಾನವ–ಪ್ರಾಣಿ ಸಂಘರ್ಷ ಕೂಡ ಹೆಚ್ಚಾಗಿದೆ.

ಈ ತೀರ್ಪು ನಾಗರಹೊಳೆ ಹುಲಿ ಅಭಿಯಾರಣ್ಯದಲ್ಲಿನ ಎಕ್ಸಾಲಿ ಗುತ್ತಿಗೆಯನ್ನು ಉಲ್ಲೇಖಿಸುತ್ತದೆ. ಕಾಕನಕೊಟೆ ರಾಜ್ಯ ಅರಣ್ಯದೊಳಗೆ 405 ಎಕರೆ ಭೂಮಿಯನ್ನು ಮೂರು ರೂಪಾಯಿ 67 ಪೈಸೆ ವಾರ್ಷಿಕ ಗುತ್ತಿಗೆ ಬಾಡಿಗೆಯ ಆಧಾರದ ಮೇಲೆ ಎಕ್ಸಾಲಿ ಗುತ್ತಿಗೆ ನೀಡಲಾಗಿತ್ತು. ಪ್ರಮುಖ ಅರಣ್ಯ ಪ್ರದೇಶಗಳಲ್ಲಿ ಗುತ್ತಿಗೆ ಬಾಡಿಗೆ ಪಾವತಿಸದೆ ಎಸ್ಟೇಟ್ಗಳು ರಬ್ಬರ್ ತೋಟಗಳು ಮತ್ತು ಕಂಪನಿಗಳು ಗುತ್ತಿಗೆ ಪಡೆದಿರುವ ಇನ್ನೂ ಅನೇಕ ಪ್ರಕರಣಗಳಿವೆ.

ಇವುಗಳನ್ನು ವಿಶೇಷ ತನಿಖಾ ತಂಡದ ಮೂಲಕ ಪರಿಶೀಲಿಸಬೇಕಿದೆ. ಇಂತಹ ಪ್ರಕರಣಗಳು ನ್ಯಾಯಾಲಯವು ಎತ್ತಿಹಿಡಿದಿರುವ ಸಾರ್ವಜನಿಕ ವಿಶ್ವಾಸ ಸಿದ್ಧಾಂತಕ್ಕೆ ವಿರುದ್ಧವಾಗಿದೆ.

– ಪ್ರವೀಣ್ ಭಾರ್ಗವ್, ವೈಲ್ಡ್ಲೈಫ್ ಫಸ್ಟ್ ಟ್ರಸ್ಟಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.