ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪುನರಾಯ್ಕೆಯಾಗುತ್ತಿರುವ ರಾಜ್ಯದ 6 ಸಂಸದರ ಆಸ್ತಿ ಹಲವು ಪಟ್ಟು ಜಿಗಿತ!

ನಾಲ್ಕು ಅವಧಿಗೆ ಪುನರಾಯ್ಕೆಗೊಂಡ 23 ಸಂಸದರ ಆಸ್ತಿ ವಿಶ್ಲೇಷಿಸಿದ ಎಡಿಆರ್
Published 23 ಫೆಬ್ರುವರಿ 2024, 0:06 IST
Last Updated 23 ಫೆಬ್ರುವರಿ 2024, 0:06 IST
ಅಕ್ಷರ ಗಾತ್ರ

ನವದೆಹಲಿ: ಕರ್ನಾಟಕದಿಂದ ಪುನರಾಯ್ಕೆಯಾಗುತ್ತಿರುವ ಆರು ಸಂಸದರ ಆಸ್ತಿ 15 ವರ್ಷಗಳಲ್ಲೇ ಹಲವು ಪಟ್ಟು ಏರಿಕೆಯಾಗಿದೆ. ಈ ಎಲ್ಲ ಸಂಸದರು ಬಿಜೆಪಿಗೆ ಸೇರಿದವರು.

ಈ ಸಂಸದರ ಒಟ್ಟಾರೆ ಆಸ್ತಿಯು ₹35 ಕೋಟಿಯಿಂದ ₹402 ಕೋಟಿಗೆ ಜಿಗಿದಿದೆ ಎಂದು ಅಸೋಸಿಯೇಷನ್‌ ಫಾರ್‌ ಡೆಮಾಕ್ರೆಟಿಕ್‌ ರಿಫಾರ್ಮ್ಸ್‌ (ಎಡಿಆರ್‌) ವರದಿ ತಿಳಿಸಿದೆ.

ಈ ಸಂಸದರ ಅಪರಾಧ ಹಿನ್ನೆಲೆ, ಹಣಕಾಸು ಹಾಗೂ ಇತರ ವಿಷಯಗಳ ಬಗ್ಗೆ ವಿಶ್ಲೇಷಣೆ ನಡೆಸಿ ಸಂಸ್ಥೆಯು ಗುರುವಾರ ವರದಿ ಪ್ರಕಟಿಸಿದೆ. ನಾಮಪತ್ರ ಸಲ್ಲಿಕೆ ಸಂದರ್ಭದಲ್ಲಿ ಅಭ್ಯರ್ಥಿಗಳು ಚುನಾವಣಾ ಆಯೋಗಕ್ಕೆ ಸಲ್ಲಿಸಿದ ಪ್ರಮಾಣಪತ್ರಗಳನ್ನು ವಿಶ್ಲೇಷಣೆ ನಡೆಸಿ ಈ ವರದಿ ಸಿದ್ಧಪಡಿಸಲಾಗಿದೆ. 

ವಿಜಯಪುರದ ಸಂಸದ ರಮೇಶ ಜಿಗಜಿಗಣಿ ಅವರ ಆಸ್ತಿ ₹49.86 ಕೋಟಿ ಹೆಚ್ಚಾಗಿದೆ. ಅಂದರೆ ಶೇ 9,098ರಷ್ಟು ಜಾಸ್ತಿಯಾಗಿದೆ. 23 ಸಂಸದರಲ್ಲಿ ಅತಿ ಹೆಚ್ಚು ಆಸ್ತಿ ಏರಿಕೆ ಆಗಿರುವುದು ಇವರದ್ದೇ. 

ದಾವಣಗೆರೆಯ ಜಿ.ಎಂ. ಸಿದ್ದೇಶ್ವರ (ಶೇ 656), ಬೆಂಗಳೂರು ಉತ್ತರದ ಡಿ.ವಿ.ಸದಾನಂದ ಗೌಡ (ಶೇ 4,413), ಧಾರವಾಡದ ಸಂಸದರಾಗಿರುವ ಕೇಂದ್ರ ಸಚಿವ ಪ್ರಲ್ಹಾದ ಜೋಶಿ (ಶೇ 1,335), ಉತ್ತರ ಕನ್ನಡದ ಅನಂತಕುಮಾರ ಹೆಗಡೆ (ಶೇ 6,928) ಹಾಗೂ ಬಾಗಲಕೋಟೆಯ ಪಿ.ಸಿ.ಗದ್ದಿಗೌಡರ (ಶೇ 718) ಆಸ್ತಿ ಗಣನೀಯವಾಗಿ ಏರಿಕೆಯಾಗಿದೆ ಎಂದು ವರದಿ ಬಹಿರಂಗಪಡಿಸಿದೆ. 

ರಾಹುಲ್‌ ಗಾಂಧಿ ಆಸ್ತಿ 2004ರಲ್ಲಿ ₹55.38 ಲಕ್ಷ ಇತ್ತು. 2009ರಲ್ಲಿ ₹2.32 ಕೋಟಿಗೆ, 2014ರಲ್ಲಿ ₹9.4 ಕೋಟಿಗೆ ಹಾಗೂ 2019ರಲ್ಲಿ ₹15.88 ಕೋಟಿಗೆ ಜಿಗಿದಿದೆ. 15 ವರ್ಷಗಳಲ್ಲಿ ಅವರ ಆಸ್ತಿ ಶೇ 2,769 ಏರಿಕೆಯಾಗಿದೆ. ಸೋನಿಯಾ ಗಾಂಧಿ ಆಸ್ತಿ ₹85.68 ಲಕ್ಷದಿಂದ ₹11.82 ಕೋಟಿಗೆ (ಶೇ 1,280 ಹೆಚ್ಚಳ) ಹೆಚ್ಚಿದೆ. 

ದೇಶದಲ್ಲಿ 2004ರಿಂದ 2019ರ ಅವಧಿಯಲ್ಲಿ ಸೋನಿಯಾ ಗಾಂಧಿ, ರಾಹುಲ್‌ ಗಾಂಧಿ, ಮೇನಕಾ ಗಾಂಧಿ ಸೇರಿದಂತೆ 23 ಸಂಸದರು ಪುನರಾಯ್ಕೆಯಾಗಿದ್ದಾರೆ. 

ಒಂಬತ್ತು ಸಂಸದರ ವಿರುದ್ಧ ಗಂಭೀರ ಕ್ರಿಮಿನಲ್ ಆರೋಪಗಳಿವೆ. ಅದರಲ್ಲಿ ಸೋನಿಯಾ, ಮೇನಕಾ ಹಾಗೂ ಶಿವಸೇನಾದ ಭಾವನಾ ಗಾವ್ಲಿ ಸೇರಿದ್ದಾರೆ ಎಂದು ವರದಿ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT