ಭಾನುವಾರ, 14 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ನಕ್ಸಲ್‌ ಮಾದರಿ ಹೋರಾಟಕ್ಕೆ ಸಿದ್ಧ: ಸ್ವಾಮಿರಾವ್

Last Updated 26 ಜೂನ್ 2018, 20:13 IST
ಅಕ್ಷರ ಗಾತ್ರ

ಹೊಸನಗರ: ಶರಾವತಿ ನೀರು ಬೆಂಗಳೂರಿಗೆ ಸರಬರಾಜು ಯೋಜನೆ ಜಾರಿಯಾದರೆ ನಕ್ಸಲ್ ಮಾದರಿ ಹೋರಾಟ ನಡೆಸಲಾಗುವುದು ಎಂದು ಮಾಜಿ ಶಾಸಕ ಬಿ.ಸ್ವಾಮಿರಾವ್ ಎಚ್ಚರಿಕೆ ನೀಡಿದರು.

‘ಪಶ್ಚಿಮಘಟ್ಟದ ಜೀವ ವೈವಿಧ್ಯ, ಮಲೆನಾಡಿನ ಸಮೃದ್ಧ ಸಂಪತ್ತಿನ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವ ಸರ್ಕಾರದ ಅವೈಜ್ಞಾನಿಕ ಯೋಜನೆ ಅನುಷ್ಠಾನ ವಿರೋಧಿಸಿ ಯಾವುದೇ ಬಗೆಯ ಹೋರಾಟಕ್ಕೆ ನಾನು ಸಿದ್ಧ’ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

‘ಸುಮಾರು 425 ಕಿ.ಮೀ ದೂರದ, ಲಿಂಗನಮಕ್ಕಿ ಅಣೆಕಟ್ಟಿನಿಂದ 1 ಸಾವಿರ ಅಡಿ ಎತ್ತರದಲ್ಲಿರುವ ಬೆಂಗಳೂರಿಗೆ ನೀರು ಸರಬರಾಜು ಮಾಡುವ ಯೋಜನೆಯು ಜನರ ತೆರಿಗೆ, ಕಂದಾಯದ ಹಣವನ್ನು ಲೂಟಿ ಮಾಡುವ ತಲೆಕೆಟ್ಟ ಸರ್ಕಾರದ ಕೆಲಸ’ ಎಂದು ದೂರಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT