ಬೆಂಗಳೂರು: ಸಚಿವ ಶಿವಾನಂದ ಪಾಟೀಲ ಅವರ ಷರತ್ತುಬದ್ಧ ರಾಜೀನಾಮೆ ಮನವಿಯನ್ನು ವಿಧಾನಸಭಾಧ್ಯಕ್ಷ ಯು.ಟಿ.ಖಾದರ್ ಅವರು ತಿರಸ್ಕರಿಸಿದ ಕುರಿತು ವ್ಯಂಗ್ಯವಾಡಿರುವ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಅವರ, 'ಉತ್ತರನ ಪೌರುಷ ಒಲೆಯ ಮುಂದೆ' ಎಂದು ಕಾಲೆಳೆದಿದ್ದಾರೆ.

ಸಚಿವರನ್ನು ಉದ್ದೇಶಿಸಿ ಇತ್ತೀಚೆಗೆ ಮಾತನಾಡಿದ್ದ ಯತ್ನಾಳ, ಶಿವಾನಂದ ಪಾಟೀಲ 'ಪಾಟೀಲರೇ ಅಲ್ಲ. ಪಾಟೀಲ ಎಂದು ಉಪನಾಮ ಸೇರಿಸಿಕೊಂಡಿರುವುದು ರಾಜಕೀಯಕ್ಕಾಗಿ. ಅಪ್ಪನಿಗೆ ಹುಟ್ಟಿದವ ಆದರೆ ಶುಕ್ರವಾರದೊಳಗೆ ರಾಜೀನಾಮೆ ನೀಡಿ ಚುನಾವಣೆಯಲ್ಲಿ ನನ್ನ ಮುಂದೆ ಸ್ಪರ್ಧಿಸಲಿ' ಎಂದು ಸವಾಲು ಹಾಕಿದ್ದರು.

ಆ ಸವಾಲನ್ನು ಸ್ವೀಕರಿಸಿರುವ ಶಿವಾನಂದ ಪಾಟೀಲ, ಯು.ಟಿ.ಖಾದರ್ ಅವರಿಗೆ ಇಂದು (ಶುಕ್ರವಾರ) ರಾಜೀನಾಮೆ ಪತ್ರ ನೀಡಿದ್ದರು. ಆದರೆ, ಯತ್ನಾಳ ರಾಜೀನಾಮೆ ನೀಡಿದ ನಂತರ, ತಮ್ಮ ರಾಜೀನಾಮೆ ಅಂಗೀಕರಿಸುವಂತೆ ತಮ್ಮ ಪತ್ರದಲ್ಲಿ ಕೋರಿದ್ದರು.

ಯತ್ನಾಳ್ ಅವರು ರಾಜೀನಾಮೆ ಸಲ್ಲಿಸದ ಕಾರಣ ಶಿವಾನಂದ ಪಾಟೀಲರ ರಾಜೀನಾಮೆಯನ್ನು ಅಂಗೀಕರಿಸಿಲ್ಲ ಎಂದು ಖಾದರ್ ನಂತರ ಸ್ಪಷ್ಟಪಡಿಸಿದ್ದರು.
.ಯತ್ನಾಳ ಸವಾಲು ಸ್ವೀಕರಿಸಿ ಶಾಸಕ ಸ್ಥಾನಕ್ಕೆ ಸಚಿವ ಶಿವಾನಂದ ಪಾಟೀಲ ರಾಜೀನಾಮೆ.ಯತ್ನಾಳ್ ರಾಜೀನಾಮೆ ಬಂದಿಲ್ಲ; ಪಾಟೀಲರ ಮನವಿ ಅಂಗೀಕರಿಸಿಲ್ಲ: ಯು.ಟಿ.ಖಾದರ್.
ಇದನ್ನಿಟ್ಟುಕೊಂಡು ಟ್ವೀಟ್ ಮಾಡಿರುವ ಶಾಸಕ ಯತ್ನಾಳ, 'ರಾಜೀನಾಮೆ ಅಂಗೀಕಾರ ಆಗೋದಿಲ್ಲ ಅಂತ ಗೊತ್ತಿದ್ದರೂ ಪುಕ್ಕಟೆ ಪ್ರಚಾರಕ್ಕೆ ರಾಜೀನಾಮೆ ಕೊಡುವ ಪ್ರಭೃತಿಗಳು ಇದ್ದಾರೆ ಎಂಬುದೇ ಸೋಜಿಗದ ಸಂಗತಿ. ಶಾಸಕರು ರಾಜೀನಾಮೆ ಕೊಡುವುದಕ್ಕೆ ರೀತಿ ರಿವಾಜು ಇರುತ್ತೆ ಎಂಬುದು ಇವರಿಗೆ ಗೊತ್ತಿಲ್ಲವೇ' ಎಂದು ಪ್ರಶ್ನಿಸಿದ್ದಾರೆ.

'ಇವರು ರಾಜೀನಾಮೆ ಕೊಡುವುದು, ಅದನ್ನು ಸಭಾಧ್ಯಕ್ಷರು ತಿರಸ್ಕರಿಸುವ ಮೂಲಕ ಬೃಹನ್ನಾಟಕ ಸಂಪನ್ನವಾಯಿತು. ಸಭಾಧ್ಯಕ್ಷರಾದ ಖಾದರ್ ಅವರು ಈ ರೀತಿಯಾದ ರಾಜೀನಾಮೆ ಸ್ವೀಕೃತವಾಗುವುದಿಲ್ಲ ಎಂಬುದನ್ನು ಅವರಿಗೆ ತಿಳಿಸಬೇಕಾಗಿತ್ತು' ಎಂದಿದ್ದಾರೆ.

'ಸಚಿವ ಸಂಪುಟದ ಹಿರಿಯ ಸಚಿವರೊಬ್ಬರು ಈ ರೀತಿಯಾದ ರಾಜಕೀಯ ನಾಟಕವಾಡುತ್ತಿರುವುದು ಹಾಸ್ಯಾಸ್ಪದ. ರಾಜೀನಾಮೆ ಸರಿಯಾದ ವಿಧಾನದಲ್ಲಿಲ್ಲ ಎಂದು ಸ್ವೀಕರಿಸುವ ವೇಳೆಯಲ್ಲೇ ಖಾದರ್ ಅವರು ಹೇಳಬೇಕಾಗಿತ್ತು. ನೀವು ಮಾಡುತ್ತಿರುವ ನಾಟಕವನ್ನು ಪ್ರಜ್ಞಾವಂತ ಮತದಾರರು, ಕ್ಷೇತ್ರದ ಜನತೆ ಗಮನಿಸಿ ಛೀಮಾರಿ ಹಾಕುತ್ತಿದ್ದಾರೆ ಎಂಬುದನ್ನು ಮರೆಯದಿರಿ' ಎಂದು ಎಚ್ಚರಿಸಿದ್ದಾರೆ.

ಹಾಗೆಯೇ, 'ನಿಜಕ್ಕೂ ತಾಕತ್ತಿದ್ದರೆ ಸರಿಯಾದ ರೀತಿಯಲ್ಲಿ ರಾಜೀನಾಮೆ ಕೊಟ್ಟು ಅಸಲಿ ಹೋರಾಟಕ್ಕೆ ಸಜ್ಜಾಗಲಿ' ಎಂದು ಮತ್ತೊಮ್ಮೆ ಸವಾಲು ಎಸೆದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.