ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಪಾನ್‌: ತಾಂತ್ರಿಕ ದೋಷದಿಂದ ಸಮುದ್ರದಲ್ಲಿ ಮುಳುಗಿದ ಹಡಗು; 24 ಮೀನುಗಾರರ ರಕ್ಷಣೆ

Published 4 ಮಾರ್ಚ್ 2024, 13:51 IST
Last Updated 4 ಮಾರ್ಚ್ 2024, 13:51 IST
ಅಕ್ಷರ ಗಾತ್ರ

ಟೋಕಿಯೊ: ಜಪಾನ್ ರಾಜಧಾನಿ ಟೋಕಿಯೊದ ನೈರುತ್ಯ ಭಾಗದ ದ್ವೀಪ ಪ್ರದೇಶದ ಸಮುದ್ರದಲ್ಲಿ ಬೃಹತ್ ಅಲೆಗಳು ಎದ್ದಿದ್ದರಿಂದ ನೀರಿನಲ್ಲಿ ಮುಳುಗುತ್ತಿದ್ದ ಹಡಗಿನಲ್ಲಿ ಸಿಲುಕಿದ್ದ 24 ಮೀನುಗಾರರನ್ನು ಜಪಾನ್‌ನ ಕರಾವಳಿ ಕಾವಲು ಪಡೆಯು ಹೆಲಿಕಾಪ್ಟರ್ ಮೂಲಕ ರಕ್ಷಣೆ ಮಾಡಿದೆ. ಈ ರಕ್ಷಣಾಕಾರ್ಯದಲ್ಲಿ ಹಡಗಿನ ಸಿಬ್ಬಂದಿಯೊಬ್ಬರು ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. 

ಜಪಾನ್‌ನ ಯೈಝು ಬಂದರು ಪ್ರದೇಶದಿಂದ ಫುಕುಯಿ ಮಾರು–8 ಹೆಸರಿನ ಹಡಗು ಮೀನುಗಾರರನ್ನು ಹೊತ್ತು ದಕ್ಷಿಣ ಅಮೆರಿಕಕ್ಕೆ ತೆರಳುತ್ತಿತ್ತು. ಈ ವೇಳೆ ಹಡಗಿನ ಎಂಜಿನ್‌ನಲ್ಲಿ ದೋಷ ಕಂಡುಬಂದಿತ್ತು. ಇದರಿಂದಾಗಿ ಪೆಸಿಫಿಕ್‌ ಸಾಗರದಲ್ಲಿ ಬೀಸಿದ ಬೃಹತ್ ಗಾಳಿಯಿಂದಾಗಿ ಹಡಗು ದಾರಿ ತಪ್ಪಿತ್ತು. ಈ ಕುರಿತು ಕರಾವಳಿ ಕಾವಲು ಪಡೆಗೆ ಹಡಗಿನ ಕ್ಯಾಪ್ಟನ್ ಮಾಹಿತಿ ನೀಡಿದ್ದರು. ಹೀಗಾಗಿ ಮೀನುಗಾರರ ರಕ್ಷಣೆಗಾಗಿ ಮೂರು ಗಸ್ತು ಹಡಗುಗಳು, ವಿಶೇಷ ರಕ್ಷಣಾ ತಂಡಗಳನ್ನು ಒಳಗೊಂಡ ಮೂರು ಹೆಲಿಕಾಪ್ಟರ್‌ಗಳನ್ನು ಘಟನಾ ಸ್ಥಳಕ್ಕೆ ರವಾನಿಸಲಾಗಿತ್ತು. ಆದರೆ, ಈ ತಂಡ ಬರುವ ಮುನ್ನವೇ ಹಡಗಿನ ಸಿಬ್ಬಂದಿಯೊಬ್ಬರು ಮೃತಪಟ್ಟಿದ್ದಾರೆ ಎಂದು ಗೊತ್ತಾಗಿದೆ. 

ಈ ಹಡಗಿನಲ್ಲಿ ಇಂಡೊನೇಷ್ಯಾದ 20 ಸಿಬ್ಬಂದಿ, ಕರಾವಳಿ ಕಾವಲು ಪಡೆಯ ಸಿಬ್ಬಂದಿ, ಹಾಗೂ ಕ್ಯಾಪ್ಟನ್ ಸೇರಿದಂತೆ ಜಪಾನ್‌ನ ಐವರು ಪ್ರಜೆಗಳು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT