ಅಂಕರ: ಟರ್ಕಿಯ ಪೊಲಾಟ್ಲಿ ನಗರದ ಬಳಿ ಬಸ್‌ವೊಂದು ಶುಕ್ರವಾರ ಮೇಲ್ಸೇತುವೆಯ ಪಿಲ್ಲರ್‌ಗೆ ಡಿಕ್ಕಿ ಹೊಡೆದ ಪರಿಣಾಮ 9 ಪ್ರಯಾಣಿಕರು ಮೃತಪಟ್ಟಿದ್ದು, 26 ಮಂದಿ ಗಾಯಗೊಂಡಿದ್ದಾರೆ.
‘ಪಶ್ಚಿಮ ಟರ್ಕಿಯ ಇಝ್ಮಿರ್ ನಗರದಿಂದ ಅಗ್ರಿಗೆ ಪ್ರಯಾಣಿಸುತ್ತಿದ್ದ ಬಸ್ ಅಫಘಾತಕ್ಕೀಡಾಗಿದೆ’ ಎಂದು ರಾಜ್ಯಪಾಲ ವಸಿಪ್ ಸಾಹಿನ್ ಅವರು ತಿಳಿಸಿದ್ದಾರೆ.
‘ಘಟನೆಯ ಬಗ್ಗೆ ತನಿಖೆ ನಡೆಸಲು ಡೆಪ್ಯುಟಿ ಪ್ರಾಸಿಕ್ಯೂಟರ್ ಅವರನ್ನು ನಿಯೋಜಿಸಲಾಗಿದೆ. ರಸ್ತೆಯಲ್ಲಿ ಯಾವುದೇ ಅಪಘಾತದ ಗುರುತುಗಳಿಲ್ಲ. ಚಾಲಕ ಮಂಪರಿನಲ್ಲಿದ್ದ ಕಾರಣ ಅಪಘಾತ ನಡೆದಿರುವ ಸಾಧ್ಯತೆಗಳಿವೆ’ ಎಂದು ತಿಳಿಸಿದ್ದಾರೆ.
ಗಾಯಾಳುಗಳನ್ನು ಅಂಕಾರ ಮತ್ತು ಪೊಲಾಟ್ಲಿಯಲ್ಲಿನ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ.