ಪ್ರಿಸ್ಟಿನಾ: ಸಾರ್ವಜನಿಕ ಕೆಲಸಗಳು, ಅಭಿವೃದ್ಧಿ ಕಾಮಗಾರಿಗಳು, ಟೆಂಡರ್ ಹೀಗೇ ಸರ್ಕಾರದ ಕಾರ್ಯಕ್ರಮಗಳು ಭ್ರಷ್ಟಾಚಾರ ಮುಕ್ತವಾಗಿರಲು ಅಲ್ಬೇನಿಯಾ ಸರ್ಕಾರವು ಕೃತಕ ಬುದ್ಧಿಮತ್ತೆಯನ್ನೇ (AI) ಸಚಿವೆಯನ್ನಾಗಿ ನೇಮಿಸಿದೆ.

ನಾಲ್ಕನೇ ಅವಧಿಗೆ ಎದಿ ರಾಮ ಅವರು ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡಿದ್ದಾರೆ. ಇದೇ ಅವಧಿಯಲ್ಲಿ ಲಂಚ, ಬೆದರಿಕೆ ಅಥವಾ ಸ್ವಜನ ಪಕ್ಷಪಾತವನ್ನು ತಡೆಯುವ ನಿಟ್ಟಿನಲ್ಲಿ ‘ಡೀಲ್ಲಾ’ ಅರ್ಥಾತ್ ಸೂರ್ಯ ಎಂಬ ಕೃತಕ ಬುದ್ಧಿಮತ್ತೆಯನ್ನೇ ಸಚಿವೆಯನ್ನಾಗಿ ನೇಮಿಸಿದ್ದಾರೆ. ಸಾರ್ವಜನಿಕ ಟೆಂಡರ್, ಸರ್ಕಾರಿ ಗುತ್ತಿಗೆಗಳು, ಖಾಸಗಿ ಕಂಪನಿಗಳ ವಿವಿಧ ಯೋಜನೆಗಳನ್ನು ಇದು ನಿರ್ವಹಿಸಲಿದೆ.

‘ವೈಯಕ್ತಿಕವಾಗಿ ಕಚೇರಿಯಲ್ಲಿ ಲಭ್ಯವಿರದ ಆದರೆ ವರ್ಚುವಲ್ ಆಗಿ ಲಭ್ಯವಿರುವ ಮೊದಲ ಸಂಪುಟ ದರ್ಜೆ ಸಚಿವೆ ಡೀಲ್ಲಾ. ಸಾರ್ವಜನಿಕ ಟೆಂಡರ್ಗಳು ಶೇ 100ರಷ್ಟು ಭ್ರಷ್ಟಾಚಾರ ರಹಿತವಿರುವ ಅಲ್ಬೇನಿಯಾ ಸರ್ಕಾರಕ್ಕೆ ಡೀಲ್ಲಾ ನೆರವಾಗಲಿದೆ’ ಎಂದು ಪ್ರಧಾನಿ ಎದಿ ತಿಳಿಸಿದ್ದಾರೆ.

ಅಲ್ಬೇನಿಯಾದಲ್ಲಿ ಮಾದಕದ್ರವ್ಯ, ಶಸ್ತ್ರಾಸ್ತ್ರಗಳ ಕಳ್ಳಸಾಗಣೆ ನಡೆಸುವ ಗ್ಯಾಂಗ್ಗಳು ನಿರಂತರವಾಗಿ ಭ್ರಷ್ಟಾಚಾರ ನಡೆಸುತ್ತಿವೆ. ಈ ಗ್ಯಾಂಗ್ಗಳು ಈಗ ಸರ್ಕಾರದ ಪಡಸಾಲೆವರೆಗೂ ತಲುಪಿವೆ. ಇದನ್ನು ನಿಯಂತ್ರಿಸಲು ಮುಂದಾಗಿರುವ ಪ್ರಧಾನಿ ‘ಡೀಲ್ಲಾ’ ರನ್ನು ಸಚಿವರನ್ನಾಗಿ ನೇಮಿಸಿದೆ ಎಂದೆನ್ನಲಾಗಿದೆ.

ಅಲ್ಬೇನಿಯಾದ ಸದ್ಯದ ಆಡಳಿತ ಪರಿಸ್ಥಿತಿಯಿಂದಾಗಿ ಐರೋಪ್ಯ ಒಕ್ಕೂಟಗಳು ಆ ರಾಷ್ಟ್ರವನ್ನು ದೂರವಿಟ್ಟಿವೆ. ಆದರೆ 2030ರ ಹೊತ್ತಿಗೆ ದೇಶದ ಚಿತ್ರಣವನ್ನೇ ಬದಲಿಸುವ ನಿರ್ಣಯವನ್ನು ಪ್ರಧಾನಿ ರಾಮ ತೆಗೆದುಕೊಂಡಿದ್ದಾರೆ ಎಂದೆನ್ನಲಾಗಿದೆ.

ಡೀಲ್ಲಾ ಮೇಲ್ವಿಚಾರಣೆಯನ್ನು ಯಾರು ಮಾಡಲಿದ್ದಾರೆ ಎಂಬ ಮಾಹಿತಿಯನ್ನು ಸರ್ಕಾರ ನೀಡಿಲ್ಲ. ಕೃತಕ ಬುದ್ಧಿಮತ್ತೆಯನ್ನೇ ಯಾರಾದರು ಯಾಮಾರಿಸಿದರೆ ಮುಂದೇನು ಎಂಬುದನ್ನೂ ತಿಳಿಸಿಲ್ಲ.

ಇದೇ ವರ್ಷದ ಆರಂಭದಲ್ಲಿ ನಾಗರಿಕರ ಸೇವೆಗಾಗಿ ಕೃತಕ ಬುದ್ಧಿಮತ್ತೆ ಆಧಾರಿತ ಡೀಲ್ಲಾನನ್ನು ಲೋಕಾರ್ಪಣೆಗೊಳಿಸಲಾಗಿತ್ತು. ನಾಗರಿಕರಿಗೆ, ವ್ಯಾಪಾರಸ್ಥರಿಗೆ ಅವರಿಗೆ ಅಗತ್ಯವಿರುವ ದಾಖಲೆಗಳನ್ನು ನೀಡುವಲ್ಲಿ ಇದು ನೆರವಾಗುತ್ತಿತ್ತು. ಅಲ್ಬೇನಿಯಾದ ಸಾಂಪ್ರದಾಯಿಕ ಉಡುಪಿನಲ್ಲಿರುವ ಡೀಲ್ಲಾ, ಧ್ವನಿ ಮೂಲಕ ಪ್ರಶ್ನೆಗಳನ್ನು ಪಡೆದು ಮಾಹಿತಿ ನೀಡುವ ಸಾಮರ್ಥ್ಯ ಹೊಂದಿದೆ. ದಾಖಲೆಗಳು, ಎಲೆಕ್ಟ್ರಾನಿಕ್ ಸ್ಟಾಂಪ್ಗಳನ್ನು ನೀಡುತ್ತಿತ್ತು. ಆ ಮೂಲಕ ಕಚೇರಿಯಲ್ಲಾಗುತ್ತಿದ್ದ ವಿಳಂಬವನ್ನು ತಪ್ಪಿಸಿತ್ತು.

ಡೀಲ್ಲಾ ನೇಮಕಕ್ಕೆ ಕೆಲವರು ಅಪಸ್ವರ ಎತ್ತಿದ್ದಾರೆ. ‘ಅಲ್ಬೇನಿಯಾದಲ್ಲಿ ಡೀಲ್ಲಾ ಕೂಡಾ ಭ್ರಷ್ಟವಾಗಲಿದೆ’ ಎಂದು ಫೇಸ್ಬುಕ್ನಲ್ಲಿ ಒಬ್ಬರು ಬರೆದುಕೊಂಡಿದ್ದಾರೆ. ‘ಲೂಟಿ ಮುಂದುವರಿಯಲಿದೆ. ಅದರ ಆರೋಪವನ್ನು ಡೀಲ್ಲಾ ಮೇಲೆ ಹಾಕಲಿದ್ದಾರೆ’ ಎಂದು ಮತ್ತೊಬ್ಬರು ಬರೆದುಕೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.