ಟುನಿಸ್: ವಲಸೆ ಹೊರಟ ಎರಡು ಪ್ರಯಾಣಿಕ ದೋಣಿಗಳು ಮೆಡಿಟರೇನಿಯನ್ ಸಮುದ್ರದ ಟ್ಯುನೀಷ್ಯಾದ ತೀರದ ಬಳಿ ಮುಳುಗಿದ ಪರಿಣಾಮ ಆಫ್ರಿಕಾದ 27 ಜನರು ಮೃತಪಟ್ಟಿದ್ದಾರೆ. ತಕ್ಷಣ ಕಾರ್ಯಾಚರಣೆ ನಡೆಸಿದ ಕಡಲು ರಕ್ಷಣಾ ಪಡೆ, ಕೆಲವರನ್ನು ರಕ್ಷಿಸಿದೆ.

ಸಫಾಕ್ಸ್ ಬಳಿ ದೋಣಿಗಳು ಮುಳುಗಿವೆ. ಕಳೆದ ಡಿಸೆಂಬರ್ನಲ್ಲಿ ನಡೆದ ಇಂಥದ್ದೇ ದೋಣಿ ದುರಂತದಲ್ಲಿ ಮೃತಪಟ್ಟ ಆಫ್ರಿಕಾದ 30 ಜನರ ಮೃತದೇಹವನ್ನು ಕಡಲು ರಕ್ಷಣಾ ಪಡೆಯು ಹೊರತೆಗೆದಿತ್ತು.

ವಲಸೆ ಹೊರಟವರು ಯುರೋಪ್ ಕಡೆ ಪ್ರಯಾಣಿಸುತ್ತಿದ್ದರು. ಗುರುವಾರ ಒಟ್ಟು 87 ಜನರನ್ನು ರಕ್ಷಿಸಲಾಗಿದೆ. ಇವರೆಲ್ಲರೂ ಮುಳುಗಿದ ದೋಣಿಯಲ್ಲಿದ್ದವರು ಎಂದು ರಾಷ್ಟ್ರೀಯ ಕಡಲು ರಕ್ಷಣಾ ಪಡೆ ತಿಳಿಸಿದೆ.

ಐರೋಪ್ಯ ರಾಷ್ಟ್ರಗಳಲ್ಲಿ ಉತ್ತಮ ಬದುಕು ಕಂಡುಕೊಳ್ಳುವ ಉದ್ದೇಶದೊಂದಿಗೆ ಟ್ಯೂನೀಷ್ಯಾ ಹಾಗೂ ಆಫ್ರಿಕಾದ ಹಲವು ರಾಷ್ಟ್ರಗಳ ಜನರು ವಲಸೆ ಹೋಗುವ ಪ್ರಕ್ರಿಯೆ ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿದ್ದು, ಇವರು ಲಿಬಿಯಾವನ್ನು ತಮ್ಮ ನಿರ್ಗಮನ ಕೇಂದ್ರವನ್ನಾಗಿ ಮಾಡಿಕೊಂಡಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.