ವೆನೆಜುವೆಲಾದಲ್ಲಿ ಪ್ರಜಾಪ್ರಭುತ್ವ ಹಕ್ಕುಗಳು ಮತ್ತು ಶಾಂತಿಯುತ ಪರಿವರ್ತನೆಯನ್ನು ಉತ್ತೇಜಿಸಿದ್ದಕ್ಕಾಗಿ 2025ನೇ ಸಾಲಿನ ನೊಬೆಲ್ ಶಾಂತಿ ಪ್ರಶಸ್ತಿ ಪಡೆದ ಮಾರಿಯಾ ಕೊರಿನಾ ಮಚಾದೊ ಅವರು ತಮ್ಮ ಪ್ರಶಸ್ತಿಯನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಹಸ್ತಾಂತರಿಸಿರುವುದಾಗಿ ತಿಳಿಸಿದ್ದಾರೆ.

ಈ ಬೆಳವಣಿಗೆಯ ಬಳಿಕ ನೊಬೆಲ್ ಪ್ರಶಸ್ತಿಯನ್ನು ಇನ್ನೊಬ್ಬರಿಗೆ ಹಸ್ತಾಂತರ ಮಾಡಬಹುದೇ? ಎಂಬುದರ ಕುರಿತು ಕೂಡ ಸಾಕಷ್ಟು ಪ್ರಶ್ನೆಗಳು ಎದ್ದಿವೆ. ಈ ಕುರಿತು ನೊಬೆಲ್ ಶಾಂತಿ ಪ್ರಶಸ್ತಿ ವಿತರಣಾ ಕೇಂದ್ರವು, ಪ್ರಶಸ್ತಿ ವರ್ಗಾಯಿಸುವ ನಿಯಮಗಳ ಕುರಿತಾದ ದೀರ್ಘ ಪೋಸ್ಟ್ ಅನ್ನು ಪ್ರಕಟಿಸಿದೆ.

ನೋಬೆಲ್ ಸಂಸ್ಥೆಯ ಪ್ರಕಾರ, ನೊಬೆಲ್ ಶಾಂತಿ ಪ್ರಶಸ್ತಿಯ ಪದಕವನ್ನು ಮಾತ್ರ, ವ್ಯಕ್ತಿಯಿಂದ ವ್ಯಕ್ತಿಗೆ ಹಸ್ತಾಂತರ ಮಾಡಬಹುದು.

‘ಉಕ್ರೇನ್ ಯುದ್ಧದ ಸಂದರ್ಭದಲ್ಲಿ ನಿರಾಶ್ರಿತರಾದವರಿಗೆ ನೆರವು ನೀಡುವ ಸಲುವಾಗಿ ಡಿಮಿಟ್ರಿ ಮುರಾಟೋವ್ ಅವರು ತಮಗೆ ಬಂದಿದ್ದ ನೋಬೆಲ್ ಶಾಂತಿ ಪ್ರಶಸ್ತಿಯನ್ನು 100 ಮಿಲಿಯನ್ ಯುಎಸ್ ಡಾಲರ್ಗೂ ಅಧಿಕ ಮೊತ್ತಕ್ಕೆ ಹರಾಜು ಹಾಕಿರುವುದು ಒಂದು ಪ್ರಮುಖ ಉದಾಹರಣೆಯಾಗಿದೆ’ ಎಂದು ನೋಬೆಲ್ ಸಂಸ್ಥೆ ತಿಳಿಸಿದೆ.
.Donald Trump: ಕೊನೆಗೂ ಟ್ರಂಪ್ ಕೈಸೇರಿತು ನೊಬೆಲ್ ಶಾಂತಿ ಪುರಸ್ಕಾರ.ನೊಬೆಲ್ ಶಾಂತಿ ಪ್ರಶಸ್ತಿಯನ್ನು ಟ್ರಂಪ್ಗೆ ಅರ್ಪಿಸುತ್ತೇನೆ: ಮಾರಿಯಾ ಪುನರುಚ್ಚಾರ.
ನೊಬೆಲ್ ಪ್ರಶಸ್ತಿಯನ್ನು ಹಂಚಿಕೊಳ್ಳಬಹುದಾ?

ನೊಬೆಲ್ ಪ್ರಶಸ್ತಿಯನ್ನು ಒಮ್ಮೆ ಪಡೆದ ಬಳಿಕ ಅದನ್ನು ಇನ್ನೊಬ್ಬರಿಗೆ ವರ್ಗಾಯಿಸಲು ಅಥವಾ ಹಂಚಿಕೊಳ್ಳಲು ಸಾಧ್ಯವಿಲ್ಲ. ಆದರೆ, ಪದಕವನ್ನು ಮಾತ್ರ ಬೇರೆಯವರಿಗೆ ನೀಡಬಹುದಾಗಿದೆ.

‘ಒಂದು ಬಾರಿ ನೊಬೆಲ್ ಪ್ರಶಸ್ತಿ ಘೋಷಣೆಯಾದ ಬಳಿಕ ಅದನ್ನು ಹಿಂದಕ್ಕೆ ಪಡೆಯಲು, ಇತರರ ಜೊತೆ ಹಂಚಿಕೊಳ್ಳಲು ಅಥವಾ ಇತರರಿಗೆ ವರ್ಗಾಯಿಸಲು ಸಾಧ್ಯವಿಲ್ಲ. ಒಮ್ಮೆ ಪ್ರಶಸ್ತಿ ನೀಡಿದರೆ, ಆ ನಿರ್ಧಾರವು ಅಂತಿಮ ಮತ್ತು ಸಾರ್ವಕಾಲಿಕವಾಗಿ ಉಳಿಯಲಿದೆ’ ಎಂದು ನಾರ್ವೇಜಿಯನ್ ನೊಬೆಲ್ ಸಮಿತಿ ಹೇಳಿದೆ.

ಹಾಗಾಗಿ, ಮಚಾದೊ ಅವರು ಡೋನಾಲ್ಡ್ ಟ್ರಂಪ್ ಅವರಿಗೆ ಪದಕ ಹಸ್ತಾಂತರಿಸಬಹುದೇ ಹೊರತು ನೊಬೆಲ್ ಶಾಂತಿ ಪ್ರಶಸ್ತಿ ಪುರಸ್ಕೃತರು ಎಂಬ ಶೀರ್ಷಿಕೆಯನ್ನಲ್ಲ.

ಏನಿದು ನೋಬೆಲ್ ಪ್ರಶಸ್ತಿ?

ನೊಬೆಲ್ ಪ್ರಶಸ್ತಿ ಎಂಬುದು ಸ್ವೀಡಿಶ್ ವಿಜ್ಞಾನಿ, ಸಂಶೋಧಕ ಮತ್ತು ಕೈಗಾರಿಕೋದ್ಯಮಿಯಾಗಿದ್ದ ಆಲ್ಫ್ರೆಡ್ ನೊಬೆಲ್ ಅವರಿಂದ ಪ್ರಾರಂಭವಾಯಿತು. ಅವರು ಜಗತ್ತಿಗೆ ಡೈನಮೈಟ್ ಅನ್ನು ಪರಿಚಯಿಸಿದವರು. ಆದರೆ, ಅದರಿಂದ ಅವರ ಮೇಲೆ ಅನೇಕ ಟೀಕೆಗಳು ಕೇಳಿ ಬಂದಾಗ, ಅವರು ತಮ್ಮ ಬಳಿಯಿರುವ ಎಲ್ಲಾ ಸಂಪತ್ತನ್ನು ಬಳಸಿಕೊಂಡು ಮಾನವೀಯ ಕಾರ್ಯಗಳಲ್ಲಿ, ಜನರ ಅನುಕೂಲಕ್ಕೆ ಕೊಡಗೆ ನೀಡಿದವರಿಗೆ ಪ್ರಶಸ್ತಿ ರೂಪದಲ್ಲಿ ನೀಡಬೇಕೆಂದು ವಿಲ್ ಬರೆದಿದ್ದರು.

ಆಲ್ಫ್ರೆಡ್ ನೊಬೆಲ್ ಅವರ ವಿಲ್ ಆಧಾರದಲ್ಲಿ ವಿಜ್ಞಾನ, ಸಾಹಿತ್ಯ ಅಥವಾ ಶಾಂತಿ ಕ್ಷೇತ್ರದಲ್ಲಿ ಮಾನವೀಯತೆಗೆ ಶ್ರೇಷ್ಠ ಕೊಡುಗೆ ನೀಡಿದವರಿಗೆ ವಾರ್ಷಿಕವಾಗಿ ಪ್ರಶಸ್ತಿಗಳನ್ನು ನೀಡಲಾಗುತ್ತಿದೆ. ಈ ಪ್ರಶಸ್ತಿಯನ್ನು ಮೊದಲ ಬಾರಿಗೆ 1901 ರಲ್ಲಿ ನೀಡಲಾಯಿತು. ಅಂದಿನಿಂದ ಈ ಸಂಪ್ರದಾಯ ಮುಂದುವರೆದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.