ವಾಷಿಂಗ್ಟನ್/ನವದೆಹಲಿ: ಇತ್ತೀಚಿನ ಕೆಲ ವಾರಗಳಲ್ಲಿ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಾಡಿದ ನಾಲ್ಕು ಫೋನ್ ಕರೆಗಳಿಗೆ ಪ್ರತಿಕ್ರಿಯಿಸಲು ಪ್ರಧಾನಮಂತ್ರಿ ನರೇಂದ್ರ ಮೋದಿ ನಿರಾಕರಿಸಿದ್ದಾರೆ ಎಂದು ವರದಿಯಾಗಿದೆ.

ರಷ್ಯಾದಿಂದ ತೈಲ ಖರೀದಿಸುವ ವಿಚಾರವಾಗಿ ಅಮೆರಿಕದ ಬೆದರಿಕೆಗೆ ಭಾರತ ಮಣಿಯದ ಕಾರಣ ಹೆಚ್ಚುವರಿಯಾಗಿ ಶೇ 25ರಷ್ಟು ಸುಂಕ ವಿಧಿಸುವುದಾಗಿ ಟ್ರಂಪ್ ಘೋಷಿಸಿದ್ದರು. ಹೆಚ್ಚುವರಿ ಸುಂಕದ ಹೊರೆ ತಪ್ಪಿಸಲಿಕ್ಕಾಗಿ ಒಪ್ಪಂದ ಮಾಡಿಕೊಳ್ಳಲು ಭಾರತಕ್ಕೆ 21 ದಿನಗಳ ಕಾಲಾವಕಾಶ ನೀಡಲಾಗಿತ್ತು. ಆದರೆ, ಯಾವುದೇ ಒಪ್ಪಂದ ಏರ್ಪಡದೇ ಇರುವುದರಿಂದ ಹೆಚ್ಚುವರಿ ಸುಂಕ ಸೇರಿ ಶೇ 50ರಷ್ಟು ಸುಂಕ ಜಾರಿಗೆ ಬಂದಿದೆ.
.ಟ್ರಂಪ್ ಜತೆಗಿನ ಅಲಾಸ್ಕ ಸಭೆ ಕುರಿತು ಪ್ರಧಾನಿ ಮೋದಿಗೆ ಮಾಹಿತಿ ನೀಡಿದ ಪುಟಿನ್.ರಷ್ಯಾದಿಂದ ತೈಲ ಖರೀದಿ: ಭಾರತಕ್ಕೆ 2ನೇ ಸುಂಕ ವಿಧಿಸದಿರಲು ಟ್ರಂಪ್ ಸರ್ಕಾರ ಸುಳಿವು.
ಟ್ರಂಪ್ ಅವರ ಈ ನಡೆಯಿಂದ ಪ್ರಧಾನಿ ಮೋದಿ ಕೋಪಗೊಂಡಿದ್ದು, ಮೋದಿ ಕರೆ ಸ್ವೀಕರಿಸದಿರುವುದು ಟ್ರಂಪ್ಗೆ ನೀಡಿದ ಎಚ್ಚರಿಕೆ ಹಾಗೂ ಪ್ರತಿಭಟನೆಯಾಗಿದೆ ಎಂದು ಜರ್ಮನ್ ದೇಶದ ಫ್ರಾಂಕ್ಫುಟರ್ ಆಲ್ಗಮೈನೆ ಝೈಟುಂಗ್ (FAZ) ಪತ್ರಿಕೆ ವರದಿ ಮಾಡಿದೆ.

ಪ್ರಧಾನಮಂತ್ರಿ ಮೋದಿ ಅವರ ಟ್ರಂಪ್ ಕರೆಗಳನ್ನು ಸ್ವೀಕರಿಸದಿರುವುದರಿಂದ ಟ್ರಂಪ್ ಅವರಿಗೆ ನಿರಾಸೆ ಮತ್ತಷ್ಟು ಹೆಚ್ಚಾಗಿದೆ ಎಂದು ಜಪಾನ್ನ ನಿಕ್ಕೈ ಏಷ್ಯಾ ಪತ್ರಿಕೆ ಹೇಳಿದೆ.

ಭಾರತೀಯ ವಸ್ತುಗಳ ಮೇಲೆ ಸುಂಕವನ್ನು ಟ್ರಂಪ್ ದ್ವಿಗುಣಗೊಳಿಸಿ ಶೇ. 50ಕ್ಕೆ ಹೆಚ್ಚಿಸಿರುವುದರಿಂದ ಉಭಯ ದೇಶಗಳ ನಡುವಿನ ಸಂಬಂಧ ಹಳಸಿದೆ. ಬ್ರೆಜಿಲ್ ಹೊರತುಪಡಿಸಿ ಬೇರೆ ಯಾವ ದೇಶಕ್ಕೂ ಇಷ್ಟೊಂದು ಹೆಚ್ಚಿನ ಸುಂಕ ವಿಧಿಸಲಾಗಿಲ್ಲ. ಇದರಲ್ಲಿ ರಷ್ಯಾದ ಕಚ್ಚಾ ತೈಲವನ್ನು ಭಾರತ ಖರೀದಿಸಿರುವುದಕ್ಕೆ ಶೇ. 25ರಷ್ಟು ಹೆಚ್ಚುವರಿ ಸುಂಕ ವಿಧಿಸಲಾಗಿದೆ.

ಭಾರತ ತನ್ನ ಹಿತಾಸಕ್ತಿಗಳ ವಿಚಾರದಲ್ಲಿ ಯಾವುದೇ ಒತ್ತಡಕ್ಕೆ ಜಗ್ಗುವುದಿಲ್ಲ, ನಮ್ಮ ರೈತರ ಹಿತಾಸಕ್ತಿ ಜೊತೆ ಎಂದಿಗೂ ರಾಜಿ ಮಾಡಿಕೊಳ್ಳುವುದಿಲ್ಲ ಎಂದು ಪ್ರಧಾನಿ ಮೋದಿ ಸ್ಪಷ್ಟಪಡಿಸಿದ್ದಾರೆ.
.ಟ್ರಂಪ್ ಸುಂಕ ಬೆದರಿಕೆ ಬೆನ್ನಲ್ಲೇ ಮೋದಿ–ಪುಟಿನ್ ಮಾತುಕತೆ: ಭಾರಿ ಕುತೂಹಲ.ಕಲಬುರಗಿ: ಟ್ರಂಪ್, ಮೋದಿ ಪ್ರತಿಕೃತಿ ದಹನ 13ರಂದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.