ವಾಷಿಂಗ್ಟನ್: ವಿಶ್ವ ಆರೋಗ್ಯ ಸಂಸ್ಥೆಯನ್ನು (ಡಬ್ಲ್ಯುಎಚ್‌ಒ) ಚೀನಾದ ‘ಕೈಗೊಂಬೆ’ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಟೀಕಿಸಿದ್ದಾರೆ. ಇದರೊಂದಿಗೆ ಅಮೆರಿಕ ಡಬ್ಲ್ಯುಎಚ್‌ಒಗೆ ನೀಡುತ್ತಿದ್ದ ಅನುದಾನ ಕಡಿತಗೊಳಿಸಲಾಗುವುದು ಎಂಬುದನ್ನೂ ಖಚಿತಪಡಿಸಿದ್ದಾರೆ.

ಶ್ವೇತಭವನದಲ್ಲಿ ಮಾತನಾಡಿರುವ ಟ್ರಂಪ್, ‘ಅದು (ಡಬ್ಲ್ಯುಎಚ್‌ಒ) ಚೀನಾದ ಕೈಗೊಂಬೆಯಾಗಿದೆ. ಅವರು ಚೀನಾ ಪರವಾಗಿ ಮಾತಾಡುತ್ತಿದ್ದಾರೆ’ ಎಂದು ಆರೋಪಿಸಿದ್ದಾರೆ.

ಅಮೆರಿಕವು ಡಬ್ಲ್ಯುಎಚ್‌ಒಗೆ ವಾರ್ಷಿಕ ₹ 3.4 ಸಾವಿರ ಕೋಟಿ (450 ಮಿಲಿಯನ್ ಡಾಲರ್) ಅನುದಾನ ನೀಡುತ್ತಿದೆ. ಇದು ವಿಶ್ವದ ಯಾವುದೇ ರಾಷ್ಟ್ರ ನೀಡುವುದಕ್ಕಿಂತ ಅಧಿಕ. ಆದರೆ, ಅದು ನಮಗೆ ಸರಿಯಾಗಿ ಸ್ಪಂದಿಸುತ್ತಿಲ್ಲ ಹಾಗಾಗಿ ಅನುದಾನ ಕಡಿತಗೊಳಿಸಲು ಯೋಜನೆ ರೂಪಿಸಲಾಗಿದೆ ಎಂದಿದ್ದಾರೆ.

‘ಡಬ್ಲ್ಯುಎಚ್‌ಒದವರು ನಮಗೆ ಸಾಕಷ್ಟು ಕೆಟ್ಟ ಉಪದೇಶ ನೀಡಿದ್ದಾರೆ’ ಎಂದೂ ಕಿಡಿಕಾರಿದ್ದಾರೆ.

ಮೊದಲು ಚೀನಾದಲ್ಲಿ ಕಾಣಿಸಿಕೊಂಡ ಕೋವಿಡ್–19 ಸೋಂಕು ಜಗತ್ತಿನಾದ್ಯಂತ ವ್ಯಾಪಿಸಿದ ನಂತರ ಡಬ್ಲ್ಯುಎಚ್‌ಒ ತನ್ನ ಮೊದಲ ವಾರ್ಷಿಕ ಸಭೆ ನಡೆಸಿದೆ. ಸೋಂಕಿನಿಂದಾಗಿ ವಿಶ್ವದಾದ್ಯಂತ 3.16 ಲಕ್ಷ ಜನರು ಮೃತಪಟ್ಟಿದ್ದಾರೆ. ಅಪಾರ ಆರ್ಥಿಕ ಹಿನ್ನಡೆ ಎಂದು ಆರೋಪಿಸಿದ್ದಾರೆ.

ಮುಂದುವರಿದು, ‘ಚೀನಾ ವಾರ್ಷಿಕ ಕೇವಲ ₹ 300 ಕೋಟಿ (40 ಮಿಲಿಯನ್ ಡಾಲರ್) ನೀಡುತ್ತಿದೆ. ನಾವು ನೀಡುತ್ತಿರುವ ಅನುದಾನವನ್ನು ₹ 300 ಕೋಟಿಗೆ (40 ಮಿಲಿಯನ್ ಡಾಲರ್‌ಗೆ) ಇಳಿಸುವ ಯೋಜನೆಯಲ್ಲಿದ್ದೇವೆ’ ಎಂದು ಹೇಳಿದ್ದಾರೆ. ಆದರೆ, ಕೆಲವರು ‘ಇದು ಅತಿಯಾಯಿತು ಎಂದು ಭಾವಿಸಿದ್ದಾರೆ’ ಎಂದೂ ಅಭಿಪ್ರಾಯಪಟ್ಟಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.