ಬೈರೂತ್: ಹಮಾಸ್ನ ಪರಮೋಚ್ಚ ನಾಯಕ ಇಸ್ಮಾಯಿಲ್ ಹನಿಯೆ (61) ಅವರನ್ನು ಇರಾನ್ನಲ್ಲಿ ಹತ್ಯೆ ಮಾಡಲಾಗಿದೆ ಎಂದು ಇರಾನ್ ಮತ್ತು ಬಂಡುಕೋರರ ಗುಂಪು ಬುಧವಾರ ಖಚಿತಪಡಿಸಿವೆ.

ಪ್ಯಾಲೆಸ್ಟೀನ್ನ ಬಂಡುಕೋರ ಸಂಘಟನೆಯ ರಾಜಕೀಯ ಘಟಕದ ಮುಖ್ಯಸ್ಥ ಹನಿಯೆ ಅವರ ಸಾವಿಗೆ ಇಸ್ರೇಲ್ ನಡೆಸಿದ ವೈಮಾನಿಕ ದಾಳಿಯೇ ಕಾರಣ ಎಂದು ಹಮಾಸ್ ಆರೋಪಿಸಿದೆ. ‘ದಾಳಿಯ ಬಗ್ಗೆ ತನಿಖೆ ನಡೆಸಲಾಗುತ್ತಿದೆ’ ಎಂದು ಇರಾನ್ನ ಪ್ಯಾರಾ ಮಿಲಿಟರಿ ರೆವಲ್ಯೂಷನರಿ ಗಾರ್ಡ್ ತಿಳಿಸಿದೆ. ದಾಳಿ ಹೇಗೆ ನಡೆಯಿತು ಎಂಬ ಬಗ್ಗೆ ಅದು ಮಾಹಿತಿ ನೀಡಿಲ್ಲ.

ಕಳೆದ ವರ್ಷ ಅಕ್ಟೋಬರ್ 7ರಂದು ಹಮಾಸ್ ಬಂಡುಕೋರರು ಇಸ್ರೇಲ್ ಮೇಲೆ ಹಠಾತ್ ದಾಳಿ ನಡೆಸಿ 1,200 ಮಂದಿಯನ್ನು ಹತ್ಯೆಗೈದಿದ್ದರು. 250 ಮಂದಿಯನ್ನು ಒತ್ತೆಯಾಳಾಗಿ ಹೊತ್ತೊಯ್ದಿದ್ದರು. ನಂತರ ಹನಿಯೆ ಮತ್ತು ಇತರ ಹಮಾಸ್ ನಾಯಕರನ್ನು ಸದೆಬಡಿಯಲು ಇಸ್ರೇಲ್ ನಿರಂತರವಾಗಿ
ಪ್ರಯತ್ನಿಸುತ್ತಿದೆ.

ಹನಿಯೆ ಅವರ ಹತ್ಯೆ ವಿಚಾರವಾಗಿ ಇಸ್ರೇಲ್ ಈವರೆಗೆ ಪ್ರತಿಕ್ರಿಯೆ ನೀಡಿಲ್ಲ.

ಸಾವಿನ ಬೆನ್ನಲ್ಲೇ ಹೇಳಿಕೆ ಬಿಡುಗಡೆ ಮಾಡಿರುವ ಹಮಾಸ್, ‘ಇರಾನ್ನ ನೂತನ ಅಧ್ಯಕ್ಷರ ಪ್ರಮಾಣವಚನ ಸಮಾರಂಭದಲ್ಲಿ ಪಾಲ್ಗೊಂಡು ಮರಳಿದ ಬಳಿಕ ರಾಜಧಾನಿ ಟೆಹರಾನ್ನಲ್ಲಿರುವ ಅವರ ನಿವಾಸದಲ್ಲಿದ್ದ ಸಂದರ್ಭದಲ್ಲಿ ಹನಿಯೆ ಮತ್ತು ಇತರ
ಅಧಿಕಾರಿಗಳನ್ನು ಹತ್ಯೆ ಮಾಡಲಾಗಿದೆ’ ಎಂದು ತಿಳಿಸಿದೆ.

‘ಹನಿಯೆ ಅವರು ಹುತಾತ್ಮರಾಗಿದ್ದಾರೆ’ ಎಂದೂ ಹಮಾಸ್ ಹೇಳಿಕೆಯಲ್ಲಿ ಘೋಷಣೆ ಮಾಡಿದೆ.

ಕಳೆದ ಏಪ್ರಿಲ್ನಲ್ಲಿ ಗಾಜಾ ಮೇಲೆ ಇಸ್ರೇಲ್ ನಡೆಸಿದ ವಾಯುದಾಳಿಯಲ್ಲಿ ಹನಿಯೆ ಅವರ ಮೂವರು ಮಕ್ಕಳು ಮತ್ತು ನಾಲ್ವರು ಮೊಮ್ಮಕ್ಕಳು ಮೃತಪಟ್ಟಿದ್ದರು.

‘ನಮ್ಮ ನಾಡನ್ನು ಸ್ವತಂತ್ರಗೊಳಿಸು ವವರೆಗೂ ಶತ್ರುಗಳೊಂದಿಗೆ ಹೋರಾಡುತ್ತಲೇ ಇರುತ್ತೇವೆ’ ಎಂದು ಹನಿಯೆ ಇತ್ತೀಚೆಗೆ ಹೇಳಿದ್ದರು.

ಅಮೆರಿಕದಿಂದ ಪ್ರತಿಕ್ರಿಯೆ ಇಲ್ಲ:

ಹನಿಯೆ ಅವರ ಹತ್ಯೆ ಬಗ್ಗೆ ಅಮೆರಿಕ ಈವರೆಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಹಮಾಸ್ ಮತ್ತು ಇಸ್ರೇಲ್ ಮಧ್ಯೆ ತಾತ್ಕಾಲಿಕ ಕದನ ವಿರಾಮ ಮತ್ತು ಪರಸ್ಪರ ಒತ್ತೆಯಾಳುಗಳ ಬಿಡುಗಡೆಗಾಗಿ ಅಮೆರಿಕ ಅಧ್ಯಕ್ಷ ಜೋ ಬೈಡನ್ ನೇತೃತ್ವದ ಸರ್ಕಾರ ಯತ್ನಿಸುತ್ತಿರುವ ಮಧ್ಯೆಯೇ ಈ ದಾಳಿ ನಡೆದಿದೆ.

ಹಮಾಸ್ ಗುಂಪಿನ ಅತ್ಯುನ್ನತ ನಾಯಕ ಯಹ್ಯಾ ಸಿನ್ವಾರ್. ಇವರೇ ಅಕ್ಟೋಬರ್ 7ರ ಇಸ್ರೇಲ್ ಮೇಲಿನ ದಾಳಿಯ ಮಾಸ್ಟರ್ಮೈಂಡ್ ಎಂದು ಹೇಳಲಾಗಿದೆ.

ಹಮಾಸ್ ವಿರುದ್ಧ ಇಸ್ರೇಲ್ ಯುದ್ಧ ಘೋಷಿಸಿದಾಗಿನಿಂದ ಈವರೆಗೆ 39,360 ಪ್ಯಾಲೆಸ್ಟೀನಿಯನ್ನರು ಮೃತಪಟ್ಟಿದ್ದಾರೆ ಮತ್ತು 90,900 ಮಂದಿ ಗಾಯಗೊಂಡಿದ್ದಾರೆ ಎಂದು ಗಾಜಾ ಆರೋಗ್ಯ ಸಚಿವಾಲಯ ತಿಳಿಸಿದೆ.

ಚೀನಾ ಆತಂಕ:

ಈ ಹತ್ಯೆ ಪ್ರಕರಣದಿಂದಾಗಿ ಮಧ್ಯಪ್ರಾಚ್ಯದಲ್ಲಿ ಸಮಸ್ಯೆ ಇನ್ನಷ್ಟು ಉಲ್ಬಣಿಸಲಿದೆ ಎಂದು ಚೀನಾ ಪ್ರತಿಕ್ರಿಯಿಸಿದೆ.

ಯಾರೀ ಹನಿಯೆ?

1963ರ ಜನವರಿ 29ರಂದು ಗಾಜಾದಲ್ಲಿ ಜನಿಸಿದ ಹನಿಯೆ ಅವರು 1987ರಲ್ಲಿ ಹಮಾಸ್ ಬಂಡುಕೋರ ಸಂಘಟನೆ ಸೇರಿದ್ದರು. ಸಂಸ್ಥಾಪಕ ಅಹ್ಮದ್ ಯಾಸಿನ್ ಅವರ ಸಹಾಯಕನಾಗಿ ಕೆಲಸ ಮಾಡಿದ್ದರು. ನಂತರ ಸಂಘಟನೆಯಲ್ಲಿ ವಿವಿಧ ಶ್ರೇಣಿಗಳಲ್ಲಿ ಕೆಲಸ ಮಾಡಿ 2017ರಲ್ಲಿ ಹಮಾಸ್ನ ಅತ್ಯುನ್ನತ ರಾಜಕೀಯ ನಾಯಕ ಹುದ್ದೆಗೇರಿದ್ದರು.
ಆಸ್ತಿಕರಾಗಿದ್ದ ಹನಿಯೆ ಅತ್ಯುತ್ತಮ ವಾಗ್ಮಿಯೂ ಹೌದು. ಗಾಜಾದಲ್ಲಿ ಪ್ರಧಾನಮಂತ್ರಿ ಯಾಗಿದ್ದ ಸಂದರ್ಭದಲ್ಲಿ ಬೆಂಬಲಿಗರನ್ನು ಉದ್ದೇಶಿಸಿ ಸುದೀರ್ಘ ಭಾಷಣ ಮಾಡುತ್ತಿದ್ದರು.

2019ರಲ್ಲಿ ಗಾಜಾ ತೊರೆದು ಸ್ವಯಂಪ್ರೇರಿತರಾಗಿ ಗಡೀಪಾರಾಗಿ ಕತಾರ್ನಲ್ಲಿ ನೆಲೆಸಿದ್ದರು. ಜೀವ ಬೆದರಿಕೆಗಳು ಇದ್ದರೂ ಟರ್ಕಿ ಮತ್ತು ಇರಾನ್ಗೆ ಆಗಾಗ
ಪ್ರಯಾಣಿಸುತ್ತಿದ್ದರು.

‘ಹಮಾಸ್ ಗುಂಪಿನ ವಿದೇಶಾಂಗ ನೀತಿ ಮತ್ತು ರಾಜತಾಂತ್ರಿಕತೆ ಕುರಿತ ನೀತಿ ರೂಪಿಸುವಲ್ಲಿ ಹನಿಯೆ ಮುಖ್ಯ ಪಾತ್ರ ವಹಿಸಿದ್ದರು’ ಎಂದು ಹಮಾಸ್ ತಜ್ಞ ಮೈಕೆಲ್ ಮಿಲ್ಶ್ತೀನ್ ತಿಳಿಸಿದ್ದಾರೆ.

ಈ ಹತ್ಯೆಯನ್ನು ಖಂಡಿಸುತ್ತೇನೆ. ಇದು ಹೇಡಿಗಳ ಕೃತ್ಯ ಮತ್ತು ಅಪಾಯಕಾರಿ ಬೆಳವಣಿಗೆ
ಮಹಮ್ಮದ್ ಅಬ್ಬಾಸ್, ಪ್ಯಾಲೆಸ್ಟೀನ್ ಅಧ್ಯಕ್ಷ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.