ಟೆಲ್ ಅವಿವ್: ಅಮೆರಿಕ ಪ್ರಸ್ತಾಪಿಸಿದ ಕದನ ವಿರಾಮ ಯೋಜನೆಯ ಭಾಗವಾಗಿ ಒತ್ತೆಯಾಳುಗಳನ್ನು ಬಿಡುಗಡೆ ಮಾಡಲು ಹಮಾಸ್ ಒಪ್ಪಿದೆ. ಈ ಬೆಳವಣಿಗೆ ಬೆನ್ನಲೇ ಗಾಜಾ ಪಟ್ಟಿಯ ಮೇಲಿನ ಬಾಂಬ್ ದಾಳಿಯನ್ನು ತಕ್ಷಣ ನಿಲಿಸುವಂತೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇಸ್ರೇಲ್ಗೆ ಸೂಚನೆ ನೀಡಿದ್ದಾರೆ.

ಗಾಜಾದಲ್ಲಿ ಶಾಂತಿ ಸ್ಪಾಪಿಸಲು ಟ್ರಂಪ್ ಪ್ರಸ್ತಾಪಿಸಿದ 20 ಅಂಶಗಳ ಯೋಜನೆಯ ಇತರ ಅಂಶಗಳ ಬಗ್ಗೆ, ಮುಖ್ಯವಾಗಿ ಪ್ಯಾಲೆಸ್ಟೀನಿಯನ್ನರ ಹಕ್ಕುಗಳ ಬಗ್ಗೆ ಮಾತುಕತೆ ನಡೆಸಲು ಬಯಸುವುದಾಗಿಯೂ ಹಮಾಸ್ ಹೇಳಿದೆ. ಈ ಬಗ್ಗೆ ಇಸ್ರೇಲ್ ಸರ್ಕಾರದಿಂದ ತಕ್ಷಣಕ್ಕೆ ಯಾವುದೇ ಪ್ರತಿಕ್ರಿಯೆ ಬಂದಿಲ್ಲ.

ಶಾಂತಿ ಒಪ್ಪಂದಕ್ಕೆ ಬಾರದಿದ್ದರೆ ಯಾರೂ ಹಿಂದೆಂದೂ ನೋಡಿರದ ರೀತಿಯಲ್ಲಿ ಹಮಾಸ್ ನರಕ ದರ್ಶನವಾಗಲಿದೆ ಎಂದು ಟ್ರಂಪ್ ಗಡುವು ನೀಡಿದ ಕೆಲವೇ ಗಂಟೆಗಳ ನಂತರ ಈ ಘೋಷಣೆ ಹೊರಬಿದ್ದಿದೆ.

ಗಾಜಾಪಟ್ಟಿಯಲ್ಲಿ ಶಾಶ್ವತ ಶಾಂತಿ ಸ್ಥಾಪನೆಗೆ ಹಮಾಸ್ ಸಿದ್ಧವಾಗಿದೆ ಎಂದು ನಂಬುವುದಾಗಿ ಟ್ರಂಪ್, ಸಾಮಾಜಿಕ ಜಾಲತಾಣ ಟ್ರುತ್ನಲ್ಲಿ ತಿಳಿಸಿದ್ದಾರೆ. ಹೀಗಾಗಿ, ಒತ್ತೆಯಾಳುಗಳನ್ನು ಸುರಕ್ಷಿತವಾಗಿ ಹೊರತರಲು ಸಾಧ್ಯವಾಗುವಂತೆ, ಇಸ್ರೇಲ್ ತಕ್ಷಣವೇ ಗಾಜಾ ಮೇಲಿನ ಬಾಂಬ್ ದಾಳಿಯನ್ನು ನಿಲ್ಲಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.
.Gaza Deal | ಒಪ್ಪಂದಕ್ಕೆ ಬಾರದಿದ್ದರೆ ನರಕ ದರ್ಶನ: ಹಮಾಸ್ಗೆ ಟ್ರಂಪ್ ಎಚ್ಚರಿಕೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.