ಜಕಾರ್ತಾ: ಇಂಡೊನೇಷ್ಯಾದ ಉನ್ನತ ಮುಸ್ಲಿಂ ಧಾರ್ಮಿಕ ಸಂಸ್ಥೆಯು ಚೀನಾ ಮೂಲದ ಸೈನೋವಾಕ್ ಬಯೋಟೆಕ್ ಅಭಿವೃದ್ಧಿಪಡಿಸಿದ ಪ್ರಾಯೋಗಿಕ ಕೋವಿಡ್ ಲಸಿಕೆಗೆ ಹಲಾಲ್ ಪ್ರಮಾಣೀಕರಣವನ್ನು ನೀಡುವ ಸಾಧ್ಯತೆಯಿದೆ.

ಇಂಡೊನೇಷ್ಯಾದಲ್ಲಿ ಲಸಿಕೆ ಬಳಕೆಗೆ ಅನುಮೋದನೆ ಪಡೆಯಬೇಕಾದರೆ ಈ ಪ್ರಮಾಣೀಕರಣ ಅಗತ್ಯ.

ಇಂಡೋನೇಷ್ಯಾದ ಉಲೆಮಾ ಕೌನ್ಸಿಲ್, ಹಲಾಲ್ ಉತ್ಪನ್ನ ಖಾತರಿ ಸಂಸ್ಥೆಯು ಫತ್ವಾ ಮತ್ತು ಹಲಾಲ್ ಪ್ರಮಾಣೀಕರಣಕ್ಕಾಗಿ ಬೇಕಾದ ಎಲ್ಲಾ ದಾಖಲೆಗಳನ್ನು ಸಿದ್ದಪಡಿಸಿ, ಸಮಿತಿಗೆ ಸಲ್ಲಿಸಿದೆ ಎಂದು ಮಾನವ ಅಭಿವೃದ್ಧಿ ಮತ್ತು ಸಂಸ್ಕೃತಿ ಸಚಿವ ಮುಹಾಜಿರ್ ಎಫೆಂಡಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಸೈನೋವಾಕ್ ಬಯೋಟೆಕ್ ಅಭಿವೃದ್ಧಿಪಡಿಸಿದ ಪ್ರಾಯೋಗಿಕ ಕೋವಿಡ್ ಲಸಿಕೆಯ 10 ಲಕ್ಷ ಡೋಸ್ ಭಾನುವಾರಇಂಡೋನೇಷ್ಯಾಗೆ ಬಂದಿಳಿದಿದೆ. ಈವರೆಗೆ ಸರ್ಕಾರ ಲಸಿಕೆ ವಿತರಣೆ ದಿನಾಂಕವನ್ನು ನಿಗದಿಪಡಿಸಿಲ್ಲ.

‘ಮೂರನೇ ಹಂತದ ಕ್ಲಿನಿಕಲ್ ಪ್ರಯೋಗದಲ್ಲಿ ಸಫಲತೆ ಸಿಕ್ಕ ಬಳಿಕವೇ ಪ್ರಜೆಗಳಿಗೆ ಪ್ರಾಯೋಗಿಕ ಲಸಿಕೆಯನ್ನು ವಿತರಿಸಲಾಗುವುದು. ವಿಶ್ವ ಆರೋಗ್ಯ ಸಂಸ್ಥೆಯ ಶಿಫಾರಸುಗಳ ಅಡಿಯಲ್ಲಿ ಮೂರು ಕ್ಲಿನಿಕಲ್ ಟ್ರಯಲ್‌ಗಳಲ್ಲಿ ಸುರಕ್ಷಿತವೆಂದು ಸಾಬೀತಾದ ಲಸಿಕೆಯನ್ನು ಮಾತ್ರ ಜನರಿಗೆ ನೀಡಲಾಗುತ್ತದೆ’ ಎಂದು ಆರೋಗ್ಯ ಸಚಿವ ಟೆರಾವಾನ್ ಅಗಸ್ ಪುತ್ರಾಂಟೊ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.