ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಇಸ್ರೇಲ್‌ ರಾಯಭಾರ ಕಚೇರಿಗಳು ಸುರಕ್ಷಿತವಲ್ಲ: ಇರಾನ್‌ ಎಚ್ಚರಿಕೆ

Published 7 ಏಪ್ರಿಲ್ 2024, 16:03 IST
Last Updated 7 ಏಪ್ರಿಲ್ 2024, 16:03 IST
ಅಕ್ಷರ ಗಾತ್ರ

ಟೆಹ್ರಾನ್‌: ‘ಇಸ್ರೇಲ್‌ನ ರಾಯಭಾರ ಕಚೇರಿಗಳು ಇನ್ನುಮುಂದೆ ಸುರಕ್ಷಿತವಾಗಿರುವುದಿಲ್ಲ’ ಎಂದು ಇರಾನ್‌ನ ಪರಮೋಚ್ಛ ನಾಯಕ ಅಯತುಲ್ಲಾ ಅಲಿ ಖಮೇನಿ ಅವರ ಹಿರಿಯ ಸಲಹೆಗಾರ ಯಾಹ್ಯಾ ರಹೀಂ ಸಫಾವಿ ಭಾನುವಾರ ಎಚ್ಚರಿಕೆ ನೀಡಿದ್ದಾರೆ.

‘ಡಮಾಸ್ಕಸ್‌ನ ನಮ್ಮ ರಾಯಭಾರ ಕಚೇರಿ ಮೇಲೆ ಇಸ್ರೇಲ್‌ ದಾಳಿ ನಡೆಸಿ, ಕಾನ್ಸುಲರ್‌ ಅನೆಕ್ಸ್‌ಅನ್ನು ನೆಲಸಮಗೊಳಿಸಿದೆ ಎಂದು ಇರಾನ್‌ ಆರೋಪಿಸಿ, ಈ ಎಚ್ಚರಿಕೆ ನೀಡಿದೆ’ ಎಂದು ಐಎಸ್‌ಎನ್‌ಎ ಸುದ್ದಿಸಂಸ್ಥೆ ವರದಿ ಮಾಡಿದೆ.

‘ದಾಳಿಯಿಂದಾಗಿ ಇಸ್ಲಾಮಿಕ್‌ ರೆವುಲ್ಯುಷನರಿ ಗಾರ್ಡ್‌ ಕಾರ್ಪ್ಸ್‌ನ (ಐಆರ್‌ಜಿಸಿ) ಏಳು ಮಂದಿ ಸಿಬ್ಬಂದಿ ಮತ್ತು ಇಬ್ಬರು ಸಾರ್ವಜನಿಕರು ಮೃತಪಟ್ಟಿದ್ದರು. ಇದಕ್ಕೆ ಸೇಡು ತೀರಿಸಿಕೊಳ್ಳುವುದಾಗಿ ಟೆಹ್ರಾನ್‌ ಶಪಥ ಮಾಡಿದೆ’ ಎಂದೂ ಅದು ಹೇಳಿದೆ.

‘ದಾಳಿ ನಡೆಸುವುದಕ್ಕೆ ನಮ್ಮ ಪಡೆಗಳು ಸಿದ್ಧವಾಗಿವೆ. ಅವು ಹೇಗಿರುತ್ತವೆ ಎಂಬುದನ್ನು ನೀವು ಕಾದು ನೋಡಬೇಕು. ಕ್ರೂರ ಇಸ್ರೇಲ್‌ ದೇಶವನ್ನು ಎದುರಿಸುವುದು ಶಾಸನಬದ್ಧ ಮತ್ತು ನ್ಯಾಯಸಮ್ಮತ ಹಕ್ಕಾಗಿದೆ. ನಮ್ಮ ಸುತ್ತಮುತ್ತಲ ಪ್ರಾಂತ್ಯಗಳ ಇಸ್ರೇಲ್ ರಾಯಭಾರ ಕಚೇರಿಗಳನ್ನು ಪ್ರಸ್ತುತ ಮುಚ್ಚಲಾಗಿದೆ’ ಎಂದು ಯಾಹ್ಯಾ ತಿಳಿಸಿದ್ದಾರೆ.

ಇರಾನ್‌ನ ಎಚ್ಚರಿಕೆಗೆ ಇಸ್ರೇಲ್‌ ಯಾವುದೇ ರೀತಿಯ ತಕ್ಷಣದ ಪ್ರತಿಕ್ರಿಯೆ ನೀಡಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT