ಯುದ್ಧವು ತೀವ್ರಗೊಳ್ಳುತ್ತಿದೆ. ಹೊರ್ಮುಜ್ ಜಲಸಂಧಿಯನ್ನು ಬಂದ್ ಮಾಡುವ ಇರಾನ್‌ನ ನಿರ್ಧಾರವು ತೀವ್ರ ಭಯಾನಕವಾಗಿ ಪರಿಣಮಿಸಬಹುದು. ಇದು ಯಾರಿಗೂ ಒಳ್ಳೆಯದಲ್ಲ
ಕಾಜಾ ಕಲ್ಲಾಸ್, ಐರೋಪ್ಯ ಒಕ್ಕೂಟದ ಹಿರಿಯ ಅಧಿಕಾರಿ
ಇರಾನ್ ಮತ್ತು ಇಸ್ರೇಲ್‌ನ ಯುದ್ಧದ ಪರಿಣಾಮವು ಆಯಾ ದೇಶಗಳಿಗೆ ಅಷ್ಟೇ ಅಲ್ಲದೇ, ಇತರೆ ದೇಶಗಳಿಗೂ ಹರಡದಂತೆ ಆಗಬೇಕು. ತಕ್ಷಣವೇ ಕದನ ವಿರಾಮ ಘೋಷಿಸಬೇಕು. ಅಂತರರಾಷ್ಟ್ರೀಯ ಸಮುದಾಯವು ಈ ಬಗ್ಗೆ ಹೆಚ್ಚಿನ ಯತ್ನ ಮಾಡಬೇಕು. ಈ ಯುದ್ಧದಿಂದ ವಿಶ್ವದ ಆರ್ಥಿಕತೆ ಮೇಲೆ ತೀವ್ರ ಪ್ರಭಾವ ಬೀರಲಿದೆ