ಜೆರುಸಲೇಂ: ಕಳೆದ ಒಂದೂವರೆ ವರ್ಷಗಳಿಂದ ಯುದ್ಧದಿಂದ ಜರ್ಜರಿತಗೊಂಡಿರುವ ಗಾಜಾ ಪಟ್ಟಿಗೆ ಸೇನೆಯನ್ನು ಕಳುಹಿಸುವ ಪ್ರಸ್ತಾಪವನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಳ್ಳಿ ಹಾಕಿದ ಬೆನ್ನಲ್ಲೇ, ಸ್ವಯಂ ಪ್ರೇರಿತರಾಗಿ ಗಾಜಾ ತೊರೆಯುವವರ ನಿರ್ಗಮನಕ್ಕೆ ವ್ಯವಸ್ಥೆ ಮಾಡಿಕೊಡಬೇಕು ಎಂದು ಇಸ್ರೇಲ್ ರಕ್ಷಣಾ ಸಚಿವ ತಮ್ಮ ಸೇನೆಗೆ ಸೂಚಿಸಿದ್ದಾರೆ.
.ಲೆಬನಾನ್ನಿಂದ ಇಸ್ರೇಲ್ ಸೈನ್ಯ ವಾಪಸ್: ಗಡುವು ವಿಸ್ತರಣೆ.
‘ಗಾಜಾ ನಿವಾಸಿಗಳು ಸ್ವಯಂ ಪ್ರೇರಿತರಾಗಿ ತೊರೆಯುವುದಿದ್ದರೆ ಅವರಿಗಾಗಿ ಯೋಜನೆಯನ್ನು ಸಿದ್ಧಪಡಿಸಬೇಕು ಎಂದು ಸೇನೆಗೆ ನಾನು ಸೂಚಿಸಿದ್ದೇನೆ. ಅವರನ್ನು ಒಪ್ಪಿಕೊಳ್ಳುವ ಯಾರ ರಾಷ್ಟ್ರಕ್ಕೆ ಬೇಕಾದರೂ ಅವರು ತೆರಳಬಹುದು’ ಎಂದು ಇಸ್ರೇಲ್ ಕಾಟ್ಜ್ ಹೇಳಿದ್ದಾರೆ.

ಇದಕ್ಕೂ ಮುನ್ನ ಪ್ಯಾಲೆಸ್ಟೀನಿಯನ್ನರನ್ನು ಗಾಜಾದಿಂದ ಸ್ಥಳಾಂತರಿಸುವ ಬಗ್ಗೆ ಟ್ರಂಪ್ ಮಾತನಾಡಿದ್ದರು. ಇದು ಮಧ್ಯ ಪ್ರಾಚ್ಯ ಸೇರಿ ಜಾಗತಿಕ ನಾಯಕರ ಟೀಕೆಗೆ ಗುರಿಯಾಗಿತ್ತು. ಪ್ಯಾಲೆಸ್ಟೀನಿಯನ್ನರ ಬಲವಂತದ ಸ್ಥಳಾಂತರ ಜನಾಂಗೀಯ ಶುದ್ಧೀಕರಣಕ್ಕೆ ಸಮ ಎಂದು ವಿಶ್ವಸಂಸ್ಥೆ ಎಚ್ಚರಿಕೆ ನೀಡಿತ್ತು.
.ಅಮೆರಿಕ ಸುಪರ್ದಿಗೆ ಗಾಜಾ ಪಟ್ಟಿ, ಸಮಗ್ರ ಅಭಿವೃದ್ಧಿ: ಡೊನಾಲ್ಡ್ ಟ್ರಂಪ್ ಘೋಷಣೆ.
ಪ್ಯಾಲೆಸ್ಟೀನಿಯನ್ನರನ್ನು ಗಾಜಾದಿಂದ ಸ್ಥಳಾಂತರಿಸುವ ತಮ್ಮ ಯೋಜನೆಗೆ ಎಲ್ಲರ ಸಹಮತ ಇದೆ ಎಂದಿದ್ದ ಟ್ರಂಪ್, ಇದು ಗಾಜಾವನ್ನು ಅಮೆರಿಕ ಸ್ವಾಧೀನ ಪಡಿಸುವ ಯೋಜನೆಯೂ ಇದೆ ಎಂದು ಹೇಳಿದ್ದರು. ಬಳಿಕ ಇದರಿಂದ ಹಿಂದೆ ಸರಿದಿದ್ದ ಅಮೆರಿಕ, ಗಾಜಾದಿಂದ ಜನರ ಸ್ಥಳಾಂತರ ತಾತ್ಕಾಲಿಕವಷ್ಟೇ ಎಂದು ಹೇಳಿತ್ತು.

ಅದಾಗ್ಯೂ ಗಾಜಾವನ್ನು ಸ್ವಾಧೀನ ಪಡಿಸಿಕೊಳ್ಳುವ ಬಗ್ಗೆ ಗುರುವಾರವೂ ಟ್ರಂಪ್ ಪುನರುಚ್ಛರಿಸಿದ್ದಾರೆ. ‘ಯುದ್ಧ ಮುಗಿದ ಬಳಿಕ ಗಾಜಾವನ್ನು ಇಸ್ರೇಲ್ ಅಮೆರಿಕಗೆ ಒಪ್ಪಿಸಲಿದೆ’ ಎಂದು ಅವರು ತಮ್ಮ ಸಾಮಾಜಿಕ ಜಾಲತಾಣ ‘ಟ್ರುಥ್’ನಲ್ಲಿ ಬರೆದುಕೊಂಡಿದ್ದಾರೆ.

‘ಅಲ್ಲಿ ಅಮೆರಿಕ ಸೈನ್ಯದ ಅಗತ್ಯವಿಲ್ಲ. ಪ್ರದೇಶದಲ್ಲಿ ಸ್ಥಿರತೆ ಮರುಸ್ಥಾಪನೆಯಾಗಲಿದೆ’ ಎಂದು ಹೇಳಿದ್ದಾರೆ.

(ವಿವಿಧ ಮೂಲಗಳನ್ನು ಉಲ್ಲೇಖಿಸಿ ಬರೆದ ಸುದ್ದಿ)
.ಗಾಜಾ ಪ್ರದೇಶ ಸ್ವಚ್ಛಗೊಳಿಸಲು ಟ್ರಂಪ್ ಪ್ರಸ್ತಾವ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.