ಭಾನುವಾರ, 15 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಗಾಜಾದ ಖಾನ್ ಯೂನಿಸ್ ನಗರದ ಮೇಲೆ ಇಸ್ರೇಲ್ ದಾಳಿ: ಕನಿಷ್ಠ 16 ಸಾವು

Published : 12 ಆಗಸ್ಟ್ 2024, 13:08 IST
Last Updated : 12 ಆಗಸ್ಟ್ 2024, 13:08 IST
ಫಾಲೋ ಮಾಡಿ
Comments

ಕೈರೊ: ಪ್ಯಾಲೆಸ್ಟೀನ್ ಮೇಲೆ ಇಸ್ರೇಲ್ ಆಕ್ರಮಣ ಮುಂದುವರಿದಿದ್ದು, ಗಾಜಾ ಪಟ್ಟಿಯ ದಕ್ಷಿಣ ಭಾಗದಲ್ಲಿರುವ ಖಾನ್ ಯೂನಿಸ್ ನಗರದ ಮೇಲೆ ಸೋಮವಾರ ದಾಳಿ ನಡೆಸಿದೆ.

ಖಾನ್ ಯೂನಿಸ್‌ನ ಹಲವು ಪ್ರದೇಶಗಳ ಮೇಲೆ ಇಸ್ರೇಲಿ ಪಡೆಗಳು ಸೋಮವಾರ ದಾಳಿ ನಡೆಸಿದ್ದು, ಕನಿಷ್ಠ 16 ಮಂದಿ ಸಾವಿಗೀಡಾಗಿದ್ದಾರೆ. ಹಲವರು ಗಾಯಗೊಂಡಿದ್ದಾರೆ ಎಂದು ಪ್ಯಾಲೆಸ್ಟೀನ್‌ನ ವೈದ್ಯಕೀಯ ಅಧಿಕಾರಿಗಳು ತಿಳಿಸಿದ್ದಾರೆ.

ಸ್ಥಳದಿಂದ ಬಿಟ್ಟು ಹೋಗುವಂತೆ ಇಸ್ರೇಲ್ ಪಡೆಗಳು ಆದೇಶಿಸುತ್ತಿದ್ದು, ಹಲವು ಕುಟುಂಬಗಳು ಹಾಗೂ ನಿರಾಶ್ರಿತರು ಅಲ್ಲಿಂದ ತೆರಳುತ್ತಿದ್ದಾರೆ ಎಂದು ಅವರು ಹೇಳಿದ್ದಾರೆ.

ಗಾಜಾದಲ್ಲಿ ಕದನ ವಿರಾಮಕ್ಕೆ ಹಲವು ರಾಷ್ಟ್ರಗಳು ಒತ್ತಾಯಿಸುತ್ತಿದ್ದರೂ, ಇಸ್ರೇಲ್ ದಾಳಿ ಮುಂದುವರಿಸಿದೆ.

2023ರ ಅಕ್ಟೋಬರ್‌ನಲ್ಲಿ ಇಸ್ರೇಲ್ ದಾಳಿ ನಡೆಸಿದ ಬಳಿಕ 39,897 ಪ್ಯಾಲೆಸ್ಟೀನಿಯನ್ನರು ಸಾವಿಗೀಡಾಗಿದ್ದಾರೆ. 92,152 ಮಂದಿ ಗಾಯಗೊಂಡಿದ್ದಾರೆ ಎಂದು ಗಾಜಾದ ಆರೋಗ್ಯ ಸಚಿವಾಲಯ ಸೋಮವಾರ ಬಿಡುಗಡೆ ಮಾಡಿರುವ ಟಿಪ್ಪಣಿಯಲ್ಲಿ ಹೇಳಿದೆ.

ಕಳೆದ 48 ಗಂಟೆಯಲ್ಲಿ 107 ಪ್ಯಾಲೆಸ್ಟೀನಿಯನ್ನರು ಸಾವಿಗೀಡಾಗಿದ್ದಾರೆ. ಶನಿವಾರ ಗಾಜಾ ನಗರದಲ್ಲಿರುವ ಶಾಲೆಯ ಮೇಲೆ ಇಸ್ರೇಲ್ ಮಾಡಿದ ದಾಳಿಯಿಂದಾಗಿ ಸುಮಾರು 100 ಜನ ಸಾವಿಗೀಡಾಗಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT