ಜೆರುಸಲೇಂ: ಪ್ಯಾಲೆಸ್ಟೀನ್‌ನ ಮಾನವ ಹಕ್ಕುಗಳ ಗುಂಪುಗಳು ಮತ್ತು ಅಂತರರಾಷ್ಟ್ರೀಯ ಭಯೋತ್ಪಾದಕ ಸಂಘಟನೆಯ ನಡುವೆ ಸಂಪರ್ಕ ಇದೆ ಎಂಬ ಆರೋಪಗಳ ಕುರಿತು ಇಸ್ರೇಲ್‌ನ ಗೌಪ್ಯ ದಾಖಲೆ ಕೆಲ ಪ್ರಬಲ ಪುರಾವೆಗಳನ್ನು ಹೊಂದಿವೆ. ಆದರೆ, ಈ ಭಯೋತ್ಪಾದಕ ಗುಂಪುಗಳಿಗೆ ಹಣಕಾಸು ನೆರವು ನೀಡುವುದನ್ನು ತಡೆಯುವಂತೆ ಐರೋಪ್ಯ ರಾಷ್ಟ್ರಗಳಿಗೆ ಮನವರಿಕೆ ಮಾಡಿಕೊಡುವಲ್ಲಿ ಈ ದಾಖಲೆಗಳು ವಿಫಲವಾಗಿವೆ ಎಂದು ವಿಶ್ಲೇಷಿಸಲಾಗುತ್ತಿದೆ.

ಇಸ್ರೇಲ್‌ನ ಶಿನ್ ಬೆಟ್ ಆಂತರಿಕ ಭದ್ರತಾ ಸೇವಾ ವಿಭಾಗ 74 ಪುಟಗಳ ಈ ದಾಖಲೆಗಳನ್ನು ಸಿದ್ಧಪಡಿಸಿದ್ದು, ಮೇ ತಿಂಗಳಲ್ಲಿ ಐರೋಪ್ಯ ಸರ್ಕಾರದೊಂದಿಗೆ ಹಂಚಿಕೊಂಡಿದೆ. ಇವುಗಳನ್ನು ‘+972 ಮ್ಯಾಗಜಿನ್’ ಎಂಬ ಆನ್‌ಲೈನ್ ನಿಯತಕಾಲಿಕದಿಂದ ಪಡೆದಿರುವುದಾಗಿ ‘ಅಸೋಸಿಯೇಟೆಡ್ ಪ್ರೆಸ್’ ಸುದ್ದಿಸಂಸ್ಥೆ ತಿಳಿಸಿದೆ.

ಓದಿ:ಜಮ್ಮು–ಕಾಶ್ಮೀರ: ಉಗ್ರರಿಗಾಗಿ ಮುಂದುವರಿದ ಶೋಧ ಕಾರ್ಯಾಚರಣೆ

ಭಯೋತ್ಪಾದಕ ಸಂಘಟನೆಗಳು ಹಾಗೂ ಪ್ಯಾಲೆಸ್ಟೀನ್‌ನ ಮಾನವ ಹಕ್ಕುಗಳ ಗುಂಪುಗಳ ನಡುವಿನ ಸಂಪರ್ಕದ ಬಗ್ಗೆ ಬಹಿರಂಗಪಡಿಸಲಾಗದ ಇನ್ನಷ್ಟು ಪುರಾವೆಗಳು ಇಸ್ರೇಲ್ ಬಳಿ ಇರಬಹುದು ಎಂದೂ ಸುದ್ದಿಸಂಸ್ಥೆ ತಿಳಿಸಿದೆ.

ಪ್ಯಾಲೆಸ್ಟೀನ್‌ನ ಆರು ನಾಗರಿಕ ಸಂಸ್ಥೆಗಳನ್ನು ಭಯೋತ್ಪಾದಕ ಗುಂಪುಗಳೆಂದು ಇಸ್ರೇಲ್ ಕಳೆದ ತಿಂಗಳು ಗುರುತಿಸಿದೆ. ಆದರೆ, ಈ ಗುಂಪುಗಳ ವಿರುದ್ಧ ಇಸ್ರೇಲ್ ಇನ್ನೂ ಕ್ರಮ ತೆಗೆದುಕೊಳ್ಳಬೇಕಾಗಿದೆ. ಈ ವಿಷಯಕ್ಕೆ ಸಂಬಂಧಿಸಿದಂತೆ ರಕ್ಷಣಾ ಸಚಿವಾಲಯ ಮತ್ತು ಶಿನ್ ಬೆಟ್ ಸಂಸ್ಥೆಗಳು ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.