ಬುಧವಾರ, 27 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಿಗೋಷಿನ್‌ ಸಾವು: ವಿಮಾನ ಅಪಘಾತಕ್ಕೆ ಉದ್ದೇಶಪೂರ್ವಕ ತಪ್ಪುಗಳೂ ಕಾರಣ- ರಷ್ಯಾ

Published 30 ಆಗಸ್ಟ್ 2023, 13:35 IST
Last Updated 30 ಆಗಸ್ಟ್ 2023, 13:35 IST
ಅಕ್ಷರ ಗಾತ್ರ

ಮಾಸ್ಕೊ (ಎಪಿ): ವ್ಯಾಗ್ನರ್‌ ಮುಖ್ಯಸ್ಥ ಯೆವ್ಗೆನಿ ಪ್ರಿಗೋಷಿನ್‌ ಅವರಿದ್ದ ವಿಮಾನವು ಅಪಘಾತಕ್ಕೀಡಾದ ಸಂಭಾವ್ಯ ಕಾರಣಗಳಲ್ಲಿ ‘ಉದ್ದೇಶಪೂರ್ವಕವಾಗಿ ಮಾಡಿದ ತಪ್ಪುಗಳು’ ಕೂಡಾ ಇರಬಹುದು ಎಂದು ಕ್ರೆಮ್ಲಿನ್ (ರಷ್ಯಾ ಆಡಳಿತ) ಬುಧವಾರ ತಿಳಿಸಿದೆ.

ಅಪಘಾತ ಹೇಗೆ ಸಂಭವಿಸಿತು ಎಂಬುದಕ್ಕೆ ಹಲವಾರು ಆಯಾಮಗಳಿಗೆ ಮತ್ತು ಆ ಎಲ್ಲಾ ಆಯಾಮಗಳನ್ನೂ ಪರಿಗಣಿಸಲಾಗುತ್ತಿದೆ ಎಂದು ಕ್ರೆಮ್ಲಿನ್‌ ವಕ್ತಾರ ಡಿಮಿಟ್ರಿ ಪೆಸ್ಕೋವ್‌ ಅವರು ಸುದ್ದಿಗಾರರೊಂದಿಗೆ ಹೇಳಿದ್ದಾರೆ. 

ಅಪಘಾತಕ್ಕೆ ಸಂಬಂಧಿಸಿ ರಷ್ಯಾ ತನಿಖಾ ಸಂಸ್ಥೆ ನಡೆಸುತ್ತಿರುವ ತನಿಖೆ ಮುಕ್ತಾಯವಾಗುವವರೆಗೂ ಕಾಯುವಂತೆ ಅವರು ಸುದ್ದಿಗಾರರಿಗೆ ಹೇಳಿದರು. ಜೊತೆಗೆ, ಈ ಕುರಿತು ಅಂತರರಾಷ್ಟ್ರೀಯ ಮಟ್ಟದ ತನಿಖೆ ನಡೆಸಲು ಸಾಧ್ಯವಿಲ್ಲ ಎಂದರು.

ಮಾಸ್ಕೊದಿಂದ ಸೇಂಟ್ ಪೀಟರ್ಸ್‌ಬರ್ಗ್‌ಗೆ ಪ್ರಯಾಣಿಸುತ್ತಿದ್ದ ಖಾಸಗಿ ಎಂಬ್ರೇಯರ್ ಲೆಗಸಿ ವಿಮಾನವು ಟಿವೆರ್ ಪ್ರದೇಶದ ಕುಜೆಂಕಿನೋ ಗ್ರಾಮದ ಬಳಿ ಆಗಸ್ಟ್‌ 23ರಂದು ಅಪಘಾತಕ್ಕೀಡಾಗಿತ್ತು. ರಷ್ಯಾ ಸೇನೆಯ ವಿರುದ್ಧದ ದಂಗೆಯ ನೇತೃತ್ವ ವಹಿಸಿದ್ದ ಖಾಸಗಿ ಸೇನಾ ಗುಂಪು ವ್ಯಾಗ್ನರ್‌ ಮುಖ್ಯಸ್ಥ ಪ್ರಿಗೋಷಿನ್‌ ಅಪಘಾತದಲ್ಲಿ ಮೃತರಾಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT