ಕೈರೊ: ಗಾಜಾಪಟ್ಟಿಯಲ್ಲಿ ಮಂಗಳವಾರ ಕನಿಷ್ಠ 27 ಮಂದಿ ಮೃತಪಟ್ಟಿದ್ದಾರೆ ಎಂದು ಸ್ಥಳೀಯ ಆಸ್ಪತ್ರೆಯ ವರದಿಗಳು ಹೇಳಿವೆ.

ಉತ್ತರ ಮತ್ತು ದಕ್ಷಿಣ ಗಾಜಾವನ್ನು ವಿಭಜಿಸುವ ಇಸ್ರೇಲ್ ನಿಯಂತ್ರಿತ ಕಾರಿಡಾರ್ ನೆಟ್ಜಾರಿಮ್ನಲ್ಲಿ ಮಾನವೀಯ ನೆರವು ಪಡೆಯಲು ಪ್ರಯತ್ನಿಸುತ್ತಿದ್ದಾಗ 17 ಪ್ಯಾಲೆಸ್ಟೀನಿಯನ್ನರು ಮೃತಪಟ್ಟರು. 33 ಮಂದಿ ಗಾಯಗೊಂಡರು ಎಂದು ಅಲ್–ಅವ್ದಾ ಆಸ್ಪತ್ರೆ ತಿಳಿಸಿದೆ.

ಇಸ್ರೇಲ್ ಸೇನೆಯು ಮುವಾಸಿ ಡೇರೆಗಳ ಮೇಲೆ ಕನಿಷ್ಠ ಎರಡು ದಾಳಿಗಳನ್ನು ನಡೆಸಿದ್ದು, ಈ ವೇಳೆ 10 ಮಂದಿ ಮೃತಪಟ್ಟಿದ್ದಾರೆ.

ಗಾಜಾದಲ್ಲಿ ಸುಮಾರು ಎರಡು ವರ್ಷಗಳಿಂದ ನಡೆಯುತ್ತಿರುವ ಸಂಘರ್ಷವನ್ನು ಅಂತ್ಯಗೊಳಿಸಲು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಶಾಂತಿ ಯೋಜನೆ ಪ್ರಸ್ತಾಪಿಸಿರುವ ಸಂದರ್ಭದಲ್ಲಿಯೇ ಈ ಸಾವುಗಳು ಸಂಭವಿಸಿವೆ.

ಗುಂಡಿನ ದಾಳಿ ಬಗ್ಗೆ ಇಸ್ರೇಲ್ ಸೇನೆ ತಕ್ಷಣಕ್ಕೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.