ಇಸ್ಲಾಮಾಬಾದ್: ಮೂವರು ರೋಗಿಗಳಲ್ಲಿ ಎಂಪಾಕ್ಸ್ ವೈರಸ್ ಸೋಂಕು ಪತ್ತೆಯಾಗಿದೆ ಎಂದು ಖೈಬರ್ ಪಖ್ತುಂಖ್ವಾ ಪ್ರಾಂತ್ಯದ ಆರೋಗ್ಯ ಇಲಾಖೆ ಶುಕ್ರವಾರ ತಿಳಿಸಿದೆ.
ಸೋಂಕಿತರು ಯುಎಇಯಿಂದ ಬಂದಿದ್ದರು ಎಂದೂ ಹೇಳಲಾಗಿದೆ.
ಪಾಕಿಸ್ತಾನದಲ್ಲಿ ಈ ಹಿಂದೆಯೂ ಎಂಪಾಕ್ಸ್ ಪ್ರಕರಣಗಳು ವರದಿಯಾಗಿದ್ದವು. ಆದರೆ, ಪ್ರಸ್ತುತ ರೋಗಿಗಳಲ್ಲಿ ಕಂಡು ಬಂದಿರುವುದು ಯಾವ ತಳಿಯ ವೈರಸ್ ಎಂಬುದು ಇನ್ನಷ್ಟೇ ಖಚಿತವಾಗಬೇಕಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ವೈರಸ್‌ನ ಹೊಸ ರೂಪಾಂತರ ತಳಿ ಪತ್ತೆಯಾದ ಬಳಿಕ ಎಂಪಾಕ್ಸ್ ಸೋಂಕನ್ನು ಜಾಗತಿಕ ಸಾರ್ವಜನಿಕ ಆರೋಗ್ಯ ತುರ್ತುಸ್ಥಿತಿ ಎಂದು ವಿಶ್ವ ಆರೋಗ್ಯ ಸಂಸ್ಥೆಯು (ಡಬ್ಲ್ಯೂಎಚ್‌ಒ) ಎಂದು ಘೋಷಿಸಿದೆ
ಎಂಪಾಕ್ಸ್ ಅನ್ನು ಈ ಮೊದಲು 'ಮಂಕಿಪಾಕ್ಸ್' ಎನ್ನಲಾಗುತ್ತಿತ್ತು. ವರ್ಣಭೇದ ಹಾಗೂ ತಾರತಮ್ಯ ಧೋರಣೆಯ ಆರೋಪಗಳು ಕೇಳಿಬಂದ ಕಾರಣ ಡಬ್ಲ್ಯುಎಚ್‌ಒ 2022ರಲ್ಲಿ 'ಎಂಪಾಕ್ಸ್' ಎಂದು ಮರುನಾಮಕರಣ ಮಾಡಿದೆ.