2025ರ ‘ಮಿಸೆಸ್ ಯುನಿವರ್ಸ್’ ಕಿರೀಟಕ್ಕೆ ಮುತ್ತಿಟ್ಟು ಶೆರ್ರಿ ಸಿಂಗ್ ಇತಿಹಾಸ ನಿರ್ಮಿಸಿದ್ದಾರೆ. ಮಿಸೆಸ್ ಯುನಿವರ್ಸ್ ಗೆಲ್ಲುವ ಮೂಲಕ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. 48ನೇ ಆವೃತ್ತಿಯ ಸ್ಪರ್ಧೆಯಲ್ಲಿ ಶೆರ್ರಿ ಸಿಂಗ್ ಮಿಸೆಸ್ ಯುನಿವರ್ಸ್ ಕಿರೀಟವನ್ನು ಮುಡಿಗೇರಿಸಿಕೊಂಡಿದ್ದಾರೆ.

ಫಿಲಿಪೈನ್ಸ್ನ ಮನಿಲಾದ ಒಕಾಡಾದಲ್ಲಿ ನಡೆದ ಮಿಸೆಸ್ ಯುನಿವರ್ಸ್ ಕಾರ್ಯಕ್ರಮದಲ್ಲಿ ವಿಶ್ವದಾದ್ಯಂತ 120 ಸ್ಪರ್ಧಿಗಳು ಭಾಗವಹಿಸಿದ್ದರು. ಈ ಪೈಕಿ ಶೆರ್ರಿ ಸಿಂಗ್ ವಿಜೇತರಾಗಿ ಹೊರಹೊಮ್ಮಿದ್ದಾರೆ. ಬೃಹತ್ ವೇದಿಕೆ ಮೇಲೆ ಇಂಡಿಯಾ ಎಂದು ಹೆಸರು ಘೋಷಿಸುತ್ತಿದ್ದಂತೆ ಶೆರ್ರಿ ಸಿಂಗ್ ಅವರ ಖುಷಿಗೆ ಪಾರವೇ ಇಲ್ಲದಂತೆ ಆಗಿತ್ತು. ಶೆರ್ರಿ ಸಿಂಗ್ ಮುಡಿಗೆ ಕಿರೀಟ ಸೇರುತ್ತಿದ್ದಂತೆ ವೇದಿಕೆ ಮೇಲೆ ಭಾವುಕರಾದರು.ಯುನಿವರ್ಸ್
.ಮಂಗಳೂರಿನ ಅಡ್ಲಿನ್ ‘ಮಿಸ್ ದಿವಾ ಯುನಿವರ್ಸ್’.‘ಮಿಸ್ ದಿವಾ-ಯುನಿವರ್ಸ್ ಇಂಡಿಯಾ’ ರೇಸ್ನಲ್ಲಿ ಕನ್ನಡತಿ!.
ಈ ಬಗ್ಗೆ ಶೆರ್ರಿ ಸಿಂಗ್ ತಮ್ಮ ಸಾಮಾಜಿಕ ಮಾಧ್ಯಮದಲ್ಲಿ ಸುದ್ದಿಯನ್ನು ಹಂಚಿಕೊಂಡಿದ್ದಾರೆ. ಅದರ ಜೊತೆಗೆ ‘ದಶಕಗಳ ಕನಸು ಇಂದು ನನಸಾಗಿದೆ. ಭಾರತವು ತನ್ನ ಮೊದಲ ಮಿಸೆಸ್ ಯೂನಿವರ್ಸ್ ಕಿರೀಟವನ್ನು ಅಧಿಕೃತವಾಗಿ ಗೆದ್ದುಕೊಂಡಿದೆ. ಈ ಗೆಲುವು ಕೇವಲ ಶೆರ್ರಿಯದ್ದಲ್ಲ, ಇದು ಕಠಿಣ ಪರಿಶ್ರಮ, ಟೀಮ್ ಇಂಡಿಯಾದ ಅಚಲ ಮನೋಭಾವದ ಸಂಕೇತವಾಗಿದೆ’ ಎಂದು ಬರೆದುಕೊಂಡಿದ್ದಾರೆ.

9 ವರ್ಷದ ಹಿಂದೆ ಶೆರ್ರಿ ಸಿಂಗ್ ಅವರು ಸಿಕಂದರ್ ಸಿಂಗ್ ಎಂಬುವವರನ್ನು ಮದುವೆಯಾಗಿದ್ದರು. ಶೆರ್ರಿ ಸಿಂಗ್ ಸಿಕಂದರ್ ಸಿಂಗ್ ದಂಪತಿಗೆ ಒಬ್ಬ ಮಗ ಇದ್ದಾನೆ. ಶೆರ್ರಿ ಸಿಂಗ್ 2025 ಮಿಸೆಸ್ ಇಂಡಿಯಾ ಗೆಲ್ಲುವುದಕ್ಕೂ ಮುನ್ನ 2024ರಲ್ಲಿ ಮಿಸೆಸ್ ಭಾರತ್ ಯೂನಿವರ್ಸ್ ಅನ್ನು ಪ್ರತಿನಿಧಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.