ಕ್ಯಾಸ್ಟೈಕ್ (ಅಮೆರಿಕ): ಲಾಸ್ ಏಂಜಲೀಸ್ನ ಉತ್ತರ ಭಾಗದಲ್ಲಿ ಬುಧವಾರ ಮತ್ತೆ ಭಾರಿ ಪ್ರಮಾಣ ಕಾಳ್ಗಿಚ್ಚು ಉಂಟಾಗಿದ್ದು, ಸಾವಿರಾರು ಜನರನ್ನು ಸ್ಥಳಾಂತರಿಸಲಾಗುತ್ತಿದೆ.

ಕಾಸ್ಟೈಕ್ ನದಿ ಸಮೀಪದ ಬೆಟ್ಟವನ್ನು ಆವರಿಸಿದ ಕಾಳ್ಗಿಚ್ಚು, ಕೆಲವೇ ಗಂಟೆಗಳಲ್ಲಿ 9,400 ಎಕರೆ ಪ್ರದೇಶದಲ್ಲಿ ವ್ಯಾಪಿಸಿದೆ. ಪ್ರಬಲ ‘ಸಂತಾ ಅನಾ’ ಮಾರುತಗಳಿಂದಾಗಿ ಬೆಂಕಿಯ ತೀವ್ರತೆ ಹೆಚ್ಚಿದೆ. ನದಿಯ ಸುತ್ತಮುತ್ತಲಿನ ಪ್ರದೇಶದಲ್ಲಿರುವ 31 ಸಾವಿರ ಜನರನ್ನು ಸ್ಥಳಾಂತರಿಸಲು ಆದೇಶಿಸಲಾಗಿದೆ.

‘ಪರಿಸ್ಥಿತಿ ತುಂಬಾ ಕಠಿಣವಾಗಿದೆ. ಅಗ್ನಿಶಾಮಕದ ಸುಮಾರು 4,000 ಸಿಬ್ಬಂದಿ ಹೆಲಿಕಾಪ್ಟರ್ ಮತ್ತು ಬುಲ್ದೋಜರ್ಗಳ ಮೂಲಕ ಬೆಂಕಿ ನಂದಿಸಲು ಪ್ರಯತ್ನಿಸುತ್ತಿದ್ದಾರೆ’ ಎಂದು ಲಾಸ್ ಏಂಜಲೀಸ್ನ ಅಗ್ನಿಶಾಮಕ ಮುಖ್ಯಸ್ಥ ಆ್ಯಂಟೋನಿ ಮರೋನೆ ಅವರು ತಿಳಿಸಿದ್ದಾರೆ.

‘ಕ್ಯಾಸ್ಟೈಕ್ ಕಾರಾಗೃಹದಲ್ಲಿನ 500 ಕೈದಿಗಳನ್ನು ನೆರೆಯ ಪ್ರದೇಶಕ್ಕೆ ಸ್ಥಳಾಂತರಿಸಲಾಗಿದೆ. ಸಮೀಪದ ಇತರ ಜೈಲುಗಳಲ್ಲಿ 4,600 ಕೈದಿಗಳಿದ್ದು, ಪರಿಸ್ಥಿತಿ ಕೈಮೀರಿದರೆ ಅವರನ್ನೂ ಸ್ಥಳಾಂತರಿಸಲು ವ್ಯವಸ್ಥೆ ಮಾಡಲಾಗಿದೆ’ ಎಂದು ಲಾಸ್ ಏಂಜಲೀಸ್ನ ಕೌಂಟಿ ಶೆರೀಫ್ ರಾಬರ್ಟ್ ಲೂನಾ ಅವರು ಹೇಳಿದ್ದಾರೆ

ಕ್ಯಾಲಿಫೋರ್ನಿಯಾ ರಾಜ್ಯವು ಕಾಳ್ಗಿಚ್ಚು ಉಂಟಾಗುತ್ತಿರುವ ಪ್ರದೇಶದಲ್ಲಿನ ನೀರಿನ ಹರಿವನ್ನು ಬೇರೆಡೆಗೆ ತಿರುಗಿಸಿದೆ. ಇದರಿಂದ ಸಮಸ್ಯೆಯಾಗುತ್ತಿದೆ. ನೀರಿನ ಹರಿವನ್ನು ಮೂಲ ಸ್ಥಿತಿಗೆ ತರುವವರೆಗೆ ನಾವೂ ಯಾವುದೇ ನೆರವನ್ನು ನೀಡುವುದಿಲ್ಲ’ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಸಂದರ್ಶನವೊಂದರಲ್ಲಿ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.