ಬ್ಯುನೋಸ್ ಐರಿಸ್: ಕಡಿಮೆ ಸೊಂಕು ಪತ್ತೆ ಪರೀಕ್ಷೆಗಳು ಮತ್ತು ಲಾಕ್ಡೌನ್ ನಿಯಮಗಳ ಸಡಿಲೀಕರಣದ ಪರಿಣಾಮಗಳನ್ನು ಎದುರಿಸುವಂತಾಗಿದೆ ಅರ್ಜೆಂಟಿನಾ.ಅಲ್ಲಿನ ಪ್ರತಿ ಹತ್ತು ಪರೀಕ್ಷೆಗಳಲ್ಲಿ 6 ಮಂದಿಗೆ ಸೋಂಕು ಇರುವುದು ದೃಢವಾಗುತ್ತಿದೆ. ಹೀಗಾಗಿ ಅರ್ಜೆಂಟಿನಾದಲ್ಲಿ ವಿಶ್ವದಲ್ಲೇ ಅತಿ ಹೆಚ್ಚು ಕೋವಿಡ್–19 ಪಾಸಿಟಿವ್ ಪರೀಕ್ಷೆಗಳು ಕಂಡು ಬರುತ್ತಿವೆ.

ಅರ್ಜೆಂಟಿನಾದಲ್ಲಿ ಸೋಮವಾರದ ಹೊತ್ತಿಗೆ 809,728 ಪ್ರಕರಣಗಳು ದಾಖಲಾಗಿವೆ. ಕಳೆದ ಏಳು ದಿನಗಳಿಂದ ದಿನಂಪ್ರತಿ ಸರಾಸರಿ 12,500 ಹೊಸ ಪ್ರಕರಣಗಳು ಪತ್ತೆಯಾಗುತ್ತಿವೆ. ವೈರಸ್ ವಿರುದ್ಧ ಆರಂಭದಲ್ಲಿ ಪ್ರಬಲವಾಗಿ ಹೋರಾಡಿದ್ದ ದೇಶದಲ್ಲಿ ಈಗ ಸೋಂಕು ಉಲ್ಬಣವಾಗುತ್ತಿದ್ದು, ಈ ವರೆಗೆ 21,468 ಸಾವುಗಳನ್ನು ಕಂಡಿದೆ.

ಇನ್ನು, ಜಗತ್ತಿನಲ್ಲಿ ಕೊರೊನಾ ವೈರಸ್ ಸೋಂಕು ಪ್ರಕರಣಗಳ ಸಂಖ್ಯೆ ಸೆ. 6ರ ಹೊತ್ತಿಗೆ 3.5 ಕೋಟಿ ಮೀರಿದೆ. (3,53,66,134), ಇದೇ ವೇಳೆ ವಿಶ್ವದಲ್ಲಿ 10,39,802 ಮಂದಿ ಮೃತಪಟ್ಟಿದ್ದಾರೆ.

ವಿಶ್ವದಲ್ಲೇ ಅತಿಹೆಚ್ಚು ಸೋಂಕು ಪ್ರಕರಣಗಳನ್ನು ಹೊಂದಿರುವ ರಾಷ್ಟ್ರಗಳ ಪಟ್ಟಿಯಲ್ಲಿ ಅಮೆರಿಕ ಎಂದಿನಂತೆ ಅಗ್ರ ಸ್ಥಾನದಲ್ಲಿ ಮುಂದುವರಿದಿದೆ. ಅಲ್ಲಿ 74,53,829 ಮಂದಿಗೆ ಸೋಂಕು ತಗುಲಿದ್ದರೆ, 2,10,127 ಮಂದಿ ಈ ವರೆಗೆ ಮೃತಪಟ್ಟಿದ್ದಾರೆ.

ಅತಿ ಹೆಚ್ಚು ಸೋಂಕಿತರನ್ನು ಹೊಂದಿರುವ ಎರಡನೇ ರಾಷ್ಟ್ರ ಭಾರತವಾಗಿದ್ದು, ಇಲ್ಲಿ, ಈ ವರೆಗೆ 66,23,815 ಮಂದಿಗೆ ಸೋಂಕು ತಗಲಿದೆ. 1,02,685 ಮಂದಿ ಮೃತಪಟ್ಟಿದ್ದಾರೆ.

ಮೂರನೇ ಸ್ಥಾನದಲ್ಲಿ ಬ್ರೆಜಿಲ್ ಇದೆ. ಬ್ರೆಜಿಲ್ನಲ್ಲಿ 49,15,289 ಕೋವಿಡ್ ಪ್ರಕರಣಗಳಿದ್ದು, ಅಲ್ಲಿ 1,46,352 ಮಂದಿ ಮೃತಪಟ್ಟಿದ್ದಾರೆ.

ಇನ್ನುಳಿದಂತೆ ರಷ್ಯಾದಲ್ಲಿ 12,19,796 (ಸಾವು–21,375), ಕೊಲಂಬಿಯಾದಲ್ಲಿ 8,62,158 (26,844) ಪ್ರಕರಣಗಳಿವೆ. ಈ ಮಾಹಿತಿ ಅಮೆರಿಕದ ಜಾನ್ಸ್ ಹಾಪ್ಕಿನ್ಸ್ ವಿಶ್ವವಿದ್ಯಾಲಯದ ಕೋವಿಡ್ ಟ್ರ್ಯಾಕರ್ ವೆಬ್ಸೈಟ್ನಲ್ಲಿ ಲಭ್ಯವಿದೆ.

ವಿಶ್ವದಲ್ಲಿ ಈ ವರೆಗೆ 2,68,59,709 ಮಂದಿ ಗುಣಮುಖರಾಗಿದ್ದಾರೆ. 77,88,332 ಸಕ್ರಿಯ ಪ್ರಕರಣಗಳಿವೆ. 66,792 ಮಂದಿಯ ಆರೋಗ್ಯ ಚಿಂತಾಜನಕವಾಗಿದ್ದು, ಅವರಿಗೆ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಕೋವಿಡ್ ಟ್ರ್ಯಾಕರ್ ವೆಬ್ಸೈಟ್– ವರ್ಲ್ಡೋಮೀಟರ್ನಲ್ಲಿ ಹೇಳಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.