ಸೋಮವಾರ, 22 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶ್ರೀಲಂಕಾದ ಸರ್ವಪಕ್ಷಗಳ ಸರ್ಕಾರದಲ್ಲಿ ಸಚಿವರಾಗಿ 9 ಮಂದಿ ಪ್ರಮಾಣ

Last Updated 20 ಮೇ 2022, 11:13 IST
ಅಕ್ಷರ ಗಾತ್ರ

ಕೊಲಂಬೊ: ತೀವ್ರ ಆರ್ಥಿಕ ಬಿಕ್ಕಟ್ಟು ಎದುರಿಸುತ್ತಿರುವಶ್ರೀಲಂಕಾದಲ್ಲಿ ಸರ್ವಪಕ್ಷಗಳ ನೇತೃತ್ವದ ಸರ್ಕಾರಕ್ಕೆಶುಕ್ರವಾರ 9 ಹೊಸ ಸಚಿವರ ನೇಮಕವಾಗಿದೆ.

ಶ್ರೀಲಂಕಾ ಫ್ರೀಡಂ ಪಾರ್ಟಿ (ಎಸ್‌ಎಲ್‌ಎಫ್‌ಪಿ) ಪ್ರತಿನಿಧಿಸುವ ಮಾಜಿ ಸಚಿವ ನಿಮಲ್ ಸಿರಿಪಾಲ ಡಿ ಸಿಲ್ವಾ, ಪಕ್ಷೇತರ ಸಂಸದರಾದ ಸುಶಿಲ್ ಪ್ರೇಮಜಯಂತ, ವಿಜಯದಾಸ ರಾಜಪಕ್ಸ, ತಿರಾನ್ ಅಲೆಸ್ ಸೇರಿ ಒಂಬತ್ತು ಮಂದಿಗೆ ಅಧ್ಯಕ್ಷ ಗೊಟಬಯ ರಾಜಪಕ್ಷ ಪ್ರಮಾಣ ವಚನ ಬೋಧಿಸಿದರು.

ಅಧ್ಯಕ್ಷರು ಮತ್ತು ಪ್ರಧಾನಿ ಸೇರಿ ಸಂಪುಟವು 25 ಸಚಿವರಿಗೆ ಸೀಮಿತವಾಗಲಿದೆ ಎಂದು ಮಾಧ್ಯಮ ವರದಿಗಳು ತಿಳಿಸಿವೆ.

ಪ್ರಧಾನಿ ರಾನಿಲ್‌ ವಿಕ್ರಮಸಿಂಘೆ ಕಳೆದ ವಾರ ನಾಲ್ವರು ಸಚಿವರನ್ನು ಸಂಪುಟಕ್ಕೆ ಸೇರಿಸಿಕೊಂಡಿದ್ದರು. ಅಧ್ಯಕ್ಷ ಗೊಟಬಯ ಅವರು ಈವರೆಗೆ ನಾಲ್ಕು ಬಾರಿ ಸಂಪುಟ ಪುನರ್‌ ರಚಿಸಿದಂತಾಗಿದೆ. ಆದರೆ, ಈವರೆಗೆ ಹಣಕಾಸು ಸಚಿವರ ನೇಮಕ ಆಗಿಲ್ಲ.ಸಾಲದ ಸುಳಿಯಲ್ಲಿ ಸಿಲುಕಿರುವ ಶ್ರೀಲಂಕಾ, ವಿದೇಶಿ ವಿನಿಮಯದ ಕೊರತೆಯನ್ನೂ ಎದುರಿಸುತ್ತಿದೆ. ಗೊಟಬಯ ರಾಜಪಕ್ಷ ಅವರ ರಾಜೀನಾಮೆಗೆ ಒತ್ತಾಯಿಸಿ ಜನರು ಪ್ರತಿಭಟನೆ ಮುಂದುವರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT