ಗುರುವಾರ, 30 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಾಜಾ: ಕದನ ವಿರಾಮಕ್ಕೆ ಆಗ್ರಹಿಸಿ ರಸ್ತೆ ತಡೆ

Published 16 ಏಪ್ರಿಲ್ 2024, 14:42 IST
Last Updated 16 ಏಪ್ರಿಲ್ 2024, 14:42 IST
ಅಕ್ಷರ ಗಾತ್ರ

ಷಿಕಾಗೊ: ಪ್ಯಾಲೆಸ್ಟೀನ್ ಪರ ಹೋರಾಟಗಾರರು ಸೋಮವಾರ ಇಲಿನಾಯ್ಸ್, ಕ್ಯಾಲಿಫೋರ್ನಿಯಾ, ನ್ಯೂಯಾರ್ಕ್‌ ಸೇರಿದಂತೆ ಅಮೆರಿಕದ ವಿವಿಧ ನಗರಗಳಲ್ಲಿ ರಸ್ತೆ ತಡೆ ಪ್ರತಿಭಟನೆ ನಡೆಸಿದರು. 

‘ಪ್ಯಾಲೆಸ್ಟೀನ್‌ ಮುಕ್ತಿಗಾಗಿ ಆರ್ಥಿಕತೆಗೆ ತಡೆ’ ಪ್ರತಿಭಟನೆಯ ಭಾಗವಾಗಿ ಈ ರಸ್ತೆತಡೆ ನಡೆಯಿತು. ಇಸ್ರೇಲ್‌–ಹಮಾಸ್‌ ನಡುವಿನ ಯುದ್ಧ ತಡೆಯಬೇಕು. ಕದನ ವಿರಾಮ ಘೋಷಿಸಬೇಕು ಎಂಬುದು ಬೇಡಿಕೆಯಾಗಿತ್ತು.

ಗೋಲ್ಡನ್‌ ಗೇಟ್, ಬ್ರೂಕ್ಲಿನ್ ಸೇತುವೆ, ಸಂಚಾರ ದಟ್ಟಣೆಯ ವೆಸ್ಟ್ ಕೋಸ್ಟ್ ಹೆದ್ದಾರಿಯಲ್ಲಿ ರಸ್ತೆ ತಡೆಯಿಂದಾಗಿ ಕೆಲ ಪ್ರಮುಖ ವಿಮಾನನಿಲ್ದಾಣಗಳಲ್ಲಿ ವಿಮಾನಗಳ ಸಂಚಾರವು ವಿಳಂಬವಾಯಿತು.

ಷಿಕಾಗೊದಲ್ಲಿ ಪ್ರಮುಖ ಓಹಾರೆ ಅಂತರರಾಷ್ಟ್ರೀಯ ವಿಮಾನನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ಪ್ರತಿಭಟಿಸಿದರು. ಸ್ಯಾನ್‌ಫ್ರಾನ್ಸಿಸ್ಕೊದಲ್ಲಿ ಗೋಲ್ಡನ್‌ ಗೇಟ್‌ ಬ್ರಿಡ್ಜ್‌ನಲ್ಲಿ ದಟ್ಟಣೆ ಕಂಡುಬಂತು.

ಷಿಕಾಗೊದಲ್ಲಿ ಯದ್ಧ ವಿರೋಧಿ ಹೋರಾಟಗಾರರು ಕಳೆದ ವರ್ಷ ಅಕ್ಟೋಬರ್‌ 7ರಿಂದ ನಿರಂತರವಾಗಿ ಪ್ರತಿಭಟನೆ ನಡೆಸುತ್ತಿದ್ದಾರೆ. ಹಮಾಸ್‌ ದಾಳಿಯಿಂದಾಗಿ ಇಸ್ರೇಲ್‌ನಲ್ಲಿ 1,200 ಜನರು ಸತ್ತಿದ್ದರೆ, ಇಸ್ರೇಲ್‌ನ ಪ್ರತಿ ದಾಳಿಯಿಂದಾಗಿ ಈವರೆಗೆ ಸುಮಾರು 33,700 ಪ್ಯಾಲೆಸ್ಟ್ರೀನಿಯರು ಮೃತಪಟ್ಟಿದ್ದಾರೆ.

ಪ್ರತಿಭಟನೆ ಹಿನ್ನೆಲೆಯಲ್ಲಿ ವಾಹನ ಸಂಚಾರ ಅಸ್ತವ್ಯಸ್ತಗೊಂಡಿತು. ಸಂಚಾರ ದಟ್ಟಣೆಯಲ್ಲಿ ಸಿಲುಕಿದ ಕೆಲ ಪ್ರಯಾಣಿಕರು ಕಾರು ಬಿಟ್ಟು ನಡೆದುಕೊಂಡೇ ವಿಮಾನನಿಲ್ದಾಣವನ್ನು ತಲುಪಿದರು.

ರಸ್ತೆ ತಡೆ ಪ್ರತಿಭಟನೆಯು ವಿಮಾನಗಳ ಸಂಚಾರದ ಮೇಲೂ ಪರಿಣಾಮ ಬೀರಿತು. ಕೆಲ ವಿಮಾನಗಳ ಸಂಚಾರ 15 ನಿಮಿಷ ತಡವಾಯಿತು ಎಂದು ಷಿಕಾಗೊದ ವೈಮಾನಿಕ ಸಚಿವಾಲಯವು ತಿಳಿಸಿದೆ.

ವಾಹನ ಸಂಚಾರವನ್ನು ಸಹಜಸ್ಥಿತಿಗೆ ತರುವ ಕ್ರಮವಾಗಿ ಪೊಲೀಸರು ನ್ಯೂಯಾರ್ಕ್‌ನಲ್ಲಿ 150 ಜನರನ್ನು ಬಂಧಿಸಿದರು. ವಿವಿಧ ನಗರಗಳಲ್ಲಿ ಪ್ರತಿಭಟನಕಾರರ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT