ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಗ್ದಾದ್‌: ಅಮೆರಿಕ ರಾಯಭಾರ ಕಚೇರಿ ಗುರಿಯಾಗಿಸಿ ರಾಕೆಟ್‌ ದಾಳಿ

Published 8 ಡಿಸೆಂಬರ್ 2023, 14:25 IST
Last Updated 8 ಡಿಸೆಂಬರ್ 2023, 14:25 IST
ಅಕ್ಷರ ಗಾತ್ರ

ಬಾಗ್ದಾದ್ (ಎಎಫ್‌ಪಿ): ಬಿಗಿ ಭದ್ರತೆಯುಳ್ಳ, ಬಾಗ್ದಾದ್‌ನಲ್ಲಿರುವ ಅಮೆರಿಕದ ರಾಯಭಾರಿ ಕಚೇರಿಯನ್ನು ಗುರಿಯಾಗಿಸಿಕೊಂಡು ಗುರುವಾರ ರಾಕೆಟ್‌ಗಳ ದಾಳಿ ನಡೆಸಲಾಗಿದೆ.  

ಅಮೆರಿಕ ಮತ್ತು ಮೈತ್ರಿ ರಾಷ್ಟ್ರಗಳ ಸೇನಾಪಡೆ ಗುರಿಯಾಗಿಸಿ ದಾಳಿ ನಡೆಸಲಾಗಿದೆ. ಆದರೆ ಯಾವುದೇ ಹಾನಿ ಸಂಭವಿಸಿಲ್ಲ ಎಂದು ಅಮೆರಿಕದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ದಾಳಿ ಹೊಣೆಯನ್ನು ಯಾವುದೇ ಸಂಘಟನೆ ಹೊತ್ತುಕೊಂಡಿಲ್ಲ.

ಇರಾಕ್‌ ಮತ್ತು ನೆರೆಯ ಸಿರಿಯಾದಲ್ಲಿ ಇರುವ ಜಿಹಾದಿಗಳ ವಿರುದ್ಧ ಹೋರಾಟ ನಡೆಸುತ್ತಿರುವ ಅಂತರರಾಷ್ಟ್ರೀಯ ಮೈತ್ರಿ ಪಡೆಗಳ ನೇತೃತ್ವವನ್ನು ಅಮೆರಿಕ ವಹಿಸಿಕೊಂಡಿದೆ. ಇತ್ತೀಚಿನ ದಿನಗಲ್ಲಿ ಹಲವು ಬಾರಿ ಸೇನೆಯ ಮೇಲೆ ದಾಳಿ ನಡೆದಿದೆ.  

ಇಸ್ರೇಲ್‌ ಮತ್ತು ಇರಾನ್‌ ಬೆಂಬಲಿತ ಪ್ಯಾಲೆಸ್ಟೀನ್ ಇಸ್ಲಾಮಿಸ್ಟ್‌ ಸಮೂಹವಾದ ಹಮಾಸ್ ನಡುವಣ ಯುದ್ಧದ ಹಿನ್ನೆಲೆಯಲ್ಲಿ ಈ ದಾಳಿ ಮಹತ್ವ ಪಡೆದುಕೊಂಡಿದೆ. 

ಇರಾನ್‌ ಜೊತೆಗೆ ಗುರುತಿಸಿಕೊಂಡಿರುವ ಬಂಡುಕೋರರು ದಾಳಿ ನಡೆಸಿರುವ ಸೂಚನೆಗಳಿವೆ. ಇಸ್ರೇಲ್‌ ಸರ್ಕಾರವು ರಾಜತಾಂತ್ರಿಕ ವಿಭಾಗ ಮತ್ತು ಸಿಬ್ಬಂದಿಯ ರಕ್ಷಣೆಗೆ ಎಲ್ಲ ಅಧಿಕಾರ ಬಳಸಿಕೊಳ್ಳಬೇಕು ಎಂದು ಅಮೆರಿಕದ ವಕ್ತಾರರು ಇರಾಕ್‌ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

ಇರಾನ್‌ ಪರ ಗುಂಪುಗಳು ಅಕ್ಟೋಬರ್ ನಂತರ ಅಮೆರಿಕ ಮತ್ತು ಮೈತ್ರಿ ಪಡೆಗಳನ್ನು ಗುರಿಯಾಗಿಸಿ 12ಕ್ಕೂ ಹೆಚ್ಚು ಬಾರಿ ರಾಕೆಟ್, ಡ್ರೋನ್ ದಾಳಿ ನಡೆಸಿವೆ. ಆದರೆ, ರಾಯಭಾರಿ ಕಚೇರಿ ಗುರಿಯಾಗಿಸಿ ರಾಕೆಟ್‌ ದಾಳಿ ನಡೆದಿರುವುದು ಇದೇ ಮೊದಲು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT