ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೀವ್ ತೊರೆಯುತ್ತಿದ್ದ ವೇಳೆ ಗುಂಡಿನ ದಾಳಿಗೊಳಗಾದ ಭಾರತದ ವಿದ್ಯಾರ್ಥಿ: ವಿಕೆ ಸಿಂಗ್

Last Updated 4 ಮಾರ್ಚ್ 2022, 7:50 IST
ಅಕ್ಷರ ಗಾತ್ರ

ಕೀವ್‌:ಉಕ್ರೇನ್ ರಾಜಧಾನಿ ಕೀವ್‌ ಮೇಲೆ ರಷ್ಯಾ ಪಡೆಗಳು ದಾಳಿ ನಡೆಸುತ್ತಿರುವುದರ ಮಧ್ಯೆಯೂ, ಅಲ್ಲಿಂದ ತೆರಳಲು ಯತ್ನಿಸಿದ ಭಾರತದ ವಿದ್ಯಾರ್ಥಿಯೊಬ್ಬರು ಗುಂಡಿನ ದಾಳಿಗೊಳಗಾಗಿದ್ದಾರೆ ಎಂದು ನಾಗರಿಕ ವಿಮಾನಯಾನ ಸಚಿವ ವಿ.ಕೆ. ಸಿಂಗ್ ತಿಳಿಸಿದ್ದಾರೆ.

'ಕೀವ್‌ನಿಂದ ಬರುತ್ತಿದ್ದ ವಿದ್ಯಾರ್ಥಿಯೊಬ್ಬರು ಗುಂಡಿನ ದಾಳಿಗೆ ಒಳಗಾಗಿರುವ ಸುದ್ದಿ ಬಂದಿದೆ. ತಕ್ಷಣವೇ ಅವರನ್ನು ಕೀವ್‌ನ ಆಸ್ಪತ್ರೆಗೆ ದಾಖಲಿಸಲಾಗಿದೆ.ಹೆಚ್ಚು ಸಾವುನೋವು ಸಂಭವಿಸದಂತೆ, ಸಾಧ್ಯವಾದಷ್ಟು ಜನರನ್ನು ಸ್ಥಳಾಂತರಿಸುವ ಪ್ರಯತ್ನ ಮಾಡುತ್ತಿದ್ದೇವೆ' ಎಂದು ಸಿಂಗ್ ಹೇಳಿದ್ದಾರೆ.

ಯುದ್ಧಪೀಡಿತ ಉಕ್ರೇನ್‌ನಿಂದ ಜನರನ್ನು ಸ್ಥಳಾಂತರಿಸುವ ಪ್ರಕ್ರಿಯೆಯ ಮೇಲ್ವಿಚಾರಣೆ ಸಲುವಾಗಿ, ಉಕ್ರೇನ್‌ನ ನೆರೆಹೊರೆ ರಾಷ್ಟ್ರಗಳಿಗೆ ತೆರಳಿರುವ ಕೇಂದ್ರದ ನಾಲ್ವರು ಸಚಿವರ ನಿಯೋಗದಲ್ಲಿ ಸಿಂಗ್‌ ಅವರೂ ಇದ್ದಾರೆ.

ಕರ್ನಾಟಕದ ವೈದ್ಯಕೀಯ ವಿದ್ಯಾರ್ಥಿ ನವೀನ್‌ ಎಸ್.ಜಿ. ಎನ್ನುವವರುಮಾರ್ಚ್ 1ರಂದು ಹಾರ್ಕಿವ್ ನಗರದಲ್ಲಿ ನಡೆದ ಷೆಲ್ ದಾಳಿಯಿಂದಾಗಿ ಮೃತಪಟ್ಟಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT