ಕಠ್ಮಂಡು: ಭಾರಿ ಮಳೆಯಿಂದಾಗಿ ಪಶ್ಚಿಮ ನೇಪಾಳದಲ್ಲಿ ಸಂಭವಿಸಿದ ಎರಡು ಪ್ರತ್ಯೇಕ ಭೂಕುಸಿತಗಳಲ್ಲಿ ಎರಡು ಕುಟುಂಬಗಳ ಏಳು ಮಂದಿ ಮೃತಪಟ್ಟಿದ್ದಾರೆ ಎಂದು ಪೊಲೀಸರು ಸೋಮವಾರ ತಿಳಿಸಿದರು.
ಬಝಾಂಗ್ ಜಿಲ್ಲೆಯ ಬುಂಗಲ್ ಎಂಬಲ್ಲಿ ಭಾನುವಾರ ರಾತ್ರಿ ಭೂಕುಸಿತ ಆದದ್ದರಿಂದ ಒಂದೇ ಕುಟುಂಬದ ನಾಲ್ವರು ಮಣ್ಣಿನಲ್ಲಿ ಹೂತುಹೋದರು. ಮೃತರಲ್ಲಿ ಮೂರು ಹಾಗೂ ಆರು ವರ್ಷದ ಇಬ್ಬರು ಮಕ್ಕಳೂ ಇದ್ದರು. ಅದೇ ಕುಟುಂಬದ ಆರು ಮಂದಿ ಅವಘಡದಿಂದ ಪಾರಾದರು ಎಂದು ಪೊಲೀಸರು ಮಾಹಿತಿ ನೀಡಿದರು.
ಜಾಜರಕೋಟ್ ಜಿಲ್ಲೆಯ ಮಝಾಗ್ರಾಮದ ತಾತ್ಕಾಲಿಕ ಶಿಬಿರವೊಂದು ಇದ್ದ ಭೂಭಾಗವೂ ಕುಸಿದಿದ್ದು, ಒಂದೇ ಕುಟುಂಬದ ಮೂವರು ಮೃತಪಟ್ಟಿದ್ದಾರೆ ಎಂದು ಹೇಳಿದರು.
ಮಳೆಯ ಪರಿಣಾಮದಿಂದ ಆಗಿರುವ ಅವಘಡಗಳಲ್ಲಿ ಈ ವರ್ಷ ಸುಮಾರು 400 ಮಂದಿ ನಾಪತ್ತೆಯಾಗಿದ್ದು, 1500ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ ಎಂದು ತಿಳಿಸಿದರು.