ಲ್ಯಾನ್ಕೆಸ್ಟರ್: ಬ್ರೆಜಿಲ್ ಮಹಿಳೆಯೊಬ್ಬರು ಇತ್ತೀಚೆಗೆ 7.3 ಕೆ.ಜಿ ತೂಕದ, ಎರಡು ಅಡಿ ಉದ್ದದ ದೈತ್ಯ ಮಗುವೊಂದಕ್ಕೆ ಜನ್ಮ ನೀಡಿದ್ದಾರೆ.

ಪಾರಿಂಟಿನ್ಸ್‌ನ ಪಾಡ್ರೆ ಕೊಲಂಬೊ ಆಸ್ಪತ್ರೆಯಲ್ಲಿ ಸಿಸೇರಿಯನ್ ಮೂಲಕ ಮಗುವಿಗೆ ಜನ್ಮ ನೀಡಿದ್ದು, ಆ್ಯಂಗರ್‌ಸನ್ ಸ್ಯಾಂಟೋಸ್ ಎಂದು ಹೆಸರಿಡಲಾಗಿದೆ.

2016ರಲ್ಲಿ ಜನಿಸಿದ 6.8 ಕೆ.ಜಿ ತೂಕದ ಮಗು, ಬ್ರೆಜಿಲ್‌ನಲ್ಲಿ ಈವರೆಗೆ ಜನಿಸಿದ ಅತ್ಯಂತ ತೂಕದ ಮಗು ಎಂಬ ದಾಖಲೆ ಹೊಂದಿತ್ತು. ಆದರೆ, ಆ್ಯಂಗರ್‌ಸನ್ ಸ್ಯಾಂಟೋಸ್ ಆ ದಾಖಲೆ ಮುರಿದಿದೆ.

ಆದರೆ, ವಿಶ್ವದಲ್ಲಿ ಇದಕ್ಕಿಂತ ತೂಕದ ಮಗು ಜನಿಸಿರುವ ಉದಾಹರಣೆ ಇದೆ. 1955ರಲ್ಲಿ ಇಟಲಿಯಲ್ಲಿ 10.2 ಕೆ.ಜಿ ತೂಕದ ಮಗು ಜನಿಸಿತ್ತು.

ಜನನದ ಸಮಯದಲ್ಲಿ ಸಾಮಾನ್ಯವಾಗಿ ಗಂಡು ಮಗುವಿನ ತೂಕ 3.3 ಕೆ.ಜಿ ಮತ್ತು ಹೆಣ್ಣು ಮಗುವಿನ ತೂಕ 3.2 ಕೆ.ಜಿವರೆಗೆ ಇರುತ್ತದೆ ಎಂದು ಹೇಳಲಾಗುತ್ತದೆ.

ಅಧಿಕ ತೂಕದ ದೈತ್ಯ ಶಿಶುಗಳನ್ನು ಮ್ಯಾಕ್ರೋಸೋಮಿಯಾ (ದೈತ್ಯ ದೇಹಕ್ಕೆ ಗ್ರೀಕ್‌ನಲ್ಲಿ) ಶಿಶುಗಳು ಎಂದು ಹೇಳಲಾಗುತ್ತದೆ. 4 ಕೆಜಿಗಿಂತ ಹೆಚ್ಚು ತೂಕವಿರುವ ಯಾವುದೇ ಮಗುವನ್ನು ಹೀಗೆ ಕರೆಯಲಾಗುತ್ತದೆ.

ಜಗತ್ತಿನಲ್ಲಿ ಮ್ಯಾಕ್ರೋಸೋಮಿಯಾ ಶಿಶುಗಳ ಜನನ ಶೇಕಡ 12ರಷ್ಟಿದೆ. ತಾಯಂದಿರಲ್ಲಿ ಗರ್ಭಾವಸ್ಥೆಯ ಮಧುಮೇಹ (ಗರ್ಭಾವಸ್ಥೆಯಲ್ಲಿ ಉಂಟಾಗುವ ಅಧಿಕ ರಕ್ತದ ಸಕ್ಕರೆ) ಸಮಸ್ಯೆಯಿಂದಾಗಿ ಈ ರೀತಿಯ ಮಕ್ಕಳ ಜನನದ ಸಾಧ್ಯತೆ ಶೇಕಡ 15ರಿಂದ 45ರಷ್ಟು ಹೆಚ್ಚಾಗುತ್ತದೆ ಎಂದು ವರದಿ ತಿಳಿಸಿದೆ.

ಸ್ಥೂಲಕಾಯದ ತಾಯಂದಿರು ಮ್ಯಾಕ್ರೋಸೋಮಿಯಾ ಶಿಶುವಿಗೆ ಜನ್ಮ ನೀಡುವ ಸಾಧ್ಯತೆ ಎರಡು ಪಟ್ಟು ಹೆಚ್ಚು ಎಂದು ವೈದ್ಯರು ಅಭಿಪ್ರಾಯಪಟ್ಟಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.