ಮಂಗಳವಾರ, 18 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

3 ದಿನದಲ್ಲಿ ಪೆಟ್ರೋಲ್ ಸಿಗಲಿದೆ: ಲಂಕಾ ಜನರಿಗೆ ಸರ್ಕಾರ ಭರವಸೆ, ಭಾರತಕ್ಕೆ ಮೊರೆ

Last Updated 16 ಜೂನ್ 2022, 11:13 IST
ಅಕ್ಷರ ಗಾತ್ರ

ಕೊಲಂಬೊ: ಹಣ ಪಾವತಿಸುವ ಬಗ್ಗೆ ಬ್ಯಾಂಕ್‌ ಖಾತರಿ (ಕ್ರೆಡಿಟ್‌ ಲೈನ್) ಆಧಾರದಲ್ಲಿ ಭಾರತದಿಂದ ಹೊಸದಾಗಿ ಪೆಟ್ರೋಲ್‌ ಎದುರುನೋಡುತ್ತಿರುವ ಶ್ರೀಲಂಕಾ, ಇನ್ನು ಮೂರು ದಿನಗಳಲ್ಲಿ ದೇಶಕ್ಕೆ ಮತ್ತಷ್ಟು ಪೆಟ್ರೋಲ್‌ ಲಭ್ಯವಾಗಲಿದೆ ಎಂದು ನಾಗರಿಕರಿಗೆ ಭರವಸೆ ನೀಡಿದೆ.

‘ಮಿತಿ ಮೀರಿ ಬಾಕಿ ಉಳಿಸಿಕೊಂಡಿರುವುದರಿಂದ ಪೂರೈಕೆದಾರರಿಂದ ತೈಲ ಪಡೆಯಲು ನಾವು ಹೆಣಗಾಡುತ್ತಿದ್ದೇವೆ’ ಎಂದು ವಿದ್ಯುತ್ ಮತ್ತು ಇಂಧನ ಸಚಿವ ಕಾಂಚನ ವಿಜೆಶೇಖರ ಸುದ್ದಿಗಾರರಿಗೆ ತಿಳಿಸಿದರು.

ತೀವ್ರ ಆರ್ಥಿಕ ಬಿಕ್ಕಟ್ಟು ಅನುಭವಿಸುತ್ತಿರುವ ಶ್ರೀಲಂಕಾ ಇಂಧನಕ್ಕೆ ಹಣ ಪಾವತಿಸಲು ಒದ್ದಾಡುತ್ತಿದೆ. ನಾಗರಿಕರು ಪೆಟ್ರೋಕ್‌, ಡೀಸೆಲ್‌ ಸಿಗದೆ ಪರಿತಪಿಸುತ್ತಿದ್ದಾರೆ. ಪೆಟ್ರೋಲ್‌ ಪಂಪ್‌ಗಳ ಎದುರು ವಾಹನಗಳು ಕಿಲೋಮೀಟರ್‌ಗಟ್ಟಲೆ ಸಾಲು ನಿಲ್ಲುವುದು ಶ್ರೀಲಂಕಾದಲ್ಲಿ ಸಾಮಾನ್ಯವಾಗಿದೆ.

ಈ ಮಧ್ಯೆ ಗುರುವಾರ, ಪೆಟ್ರೋಲ್‌ಗಾಗಿ ಸಾಲಿನಲ್ಲಿ ನಿಂತಿದ್ದ ಆಟೋಚಾಲಕರೊಬ್ಬರು ಹೃದಯಘಾತಕ್ಕೀಡಾಗಿ ಮೃತಪಟ್ಟಿದ್ದಾರೆ.

ಭಾರತವು 500 ದಶಲಕ್ಷ ಡಾಲರ್‌ (₹3,904 ಕೋಟಿ) ಕ್ರೆಡಿಟ್‌ ಲೈನ್ ಆಧಾರದಲ್ಲಿ ಈ ವರೆಗೆ ಎರಡು ಬಾರಿ ಇಂಧನ ಪೂರೈಕೆ ಮಾಡಿ ಸ್ಪಂದಿಸಿದೆ. ಭಾರತದ ಕ್ರಮವನ್ನು ಚೀನಾ ಕೂಡಾ ಕೊಂಡಾಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT