ಕೇಪ್ ಕೆನವೆರಾಲ್ (ಅಮೆರಿಕ): ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ (ಐಎಸ್ಎಸ್) ಸಿಲುಕಿರುವ ನಾಸಾದ ಗಗನಯಾನಿಗಳಾದ ಭಾರತ ಮೂಲದ ಸುನಿತಾ ವಿಲಿಯಮ್ಸ್ ಹಾಗೂ ಬುಚ್ ವಿಲ್ಮೋರ್ ಅವರನ್ನು ಶೀಘ್ರವೇ ಭೂಮಿಗೆ ವಾಪಸ್ ಕರೆತರುವ ನಿಟ್ಟಿನಲ್ಲಿ ‘ಸ್ಪೇಸ್ ಎಕ್ಸ್’ ಸಿಇಒ ಇಲಾನ್ ಮಸ್ಕ್ ಅವರೊಂದಿಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಾತುಕತೆ ನಡೆಸಿದ್ದಾರೆ.

ಟ್ರಂಪ್ ಅವರ ಮನವಿಯಂತೆ ಸುನಿತಾ ವಿಲಿಯಮ್ಸ್ ಹಾಗೂ ಬುಚ್ ವಿಲ್ಮೋರ್ ಅವರನ್ನು ಶೀಘ್ರವೇ ಭೂಮಿಗೆ ವಾಪಸ್ ಕರೆತರಲು ಇಲಾನ್ ಮಸ್ ಒಪ್ಪಿಗೆ ಸೂಚಿಸಿದ್ದಾರೆ ಎಂದು ವರದಿಯಾಗಿದೆ.

ಬೋಯಿಂಗ್ ಸಂಸ್ಥೆಯ ಸ್ಟಾರ್ಲೈನರ್ ಗಗನನೌಕೆಯಲ್ಲಿ ಸುನಿತಾ ಹಾಗೂ ವಿಲ್ಮೋರ್ ಅವರು 2024ರ ಜೂನ್ 5ರಂದು ಐಎಸ್ಎಸ್ನತ್ತ ಪ್ರಯಾಣ ಬೆಳೆಸಿದ್ದರು. ಗಗನನೌಕೆಯಲ್ಲಿ ಕಂಡುಬಂದ ತಾಂತ್ರಿಕ ದೋಷದಿಂದಾಗಿ ಭೂಮಿಗೆ ಮರಳಲು ಸಾಧ್ಯವಾಗಿಲ್ಲ.

‘ಈ ಇಬ್ಬರು ಗಗನಯಾನಿಗಳು ಭೂಮಿಗೆ ಮರಳುವುದು ಇನ್ನಷ್ಟು ತಡವಾಗಲಿದೆ. ಮಾರ್ಚ್ ಅಂತ್ಯಕ್ಕೆ ವಾಪಸಾಗಬಹುದು’ ಎಂದು ಡಿಸೆಂಬರ್ನಲ್ಲಿ ನಾಸಾ ಘೋಷಿಸಿತ್ತು.
.ಸುನಿತಾ ವಿಲಿಯಮ್ಸ್, ಬುಚ್ ವಿಲ್ಮೋರ್ ಮಾರ್ಚ್ ಅಂತ್ಯಕ್ಕೆ ಭೂಮಿಗೆ ವಾಪಸ್?.ಸುನಿತಾ ವಿಲಿಯಮ್ಸ್ ಸಿಲುಕಿಕೊಂಡಿರುವ ಬಾಹ್ಯಾಕಾಶ ನಿಲ್ದಾಣದೊಳಗೆ ಜೀವನ ಹೇಗೆ?.ನಾಸಾ ಪೈಲಟ್ ಸುನಿತಾ ವಿಲಿಯಮ್ಸ್ ಆರೋಗ್ಯದ ಬಗ್ಗೆ ಎದ್ದಿದ್ದ ವದಂತಿ ನಿಜವೇ?.ಶ್ವೇತಭವನದಲ್ಲಿ ದೀಪಾವಳಿ: ಬೈಡನ್ಗೆ ಸುನಿತಾ ವಿಲಿಯಮ್ಸ್ ಧನ್ಯವಾದ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.