ಬೀಜಿಂಗ್: ಅಮೆರಿಕದ ಸುಂಕ ಬೆದರಿಕೆಗೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿರುವ ಚೀನಾ, 'ಅಮೆರಿಕ ದ್ವಂದ್ವ ನೀತಿ ಅನುಸರಿಸುತ್ತಿದೆ' ಎಂದು ಆರೋಪಿಸಿದೆ.

ನವೆಂಬರ್ 1ರಿಂದ ವಿಶ್ವದ ಎರಡನೇ ಅತಿ ದೊಡ್ಡ ಆರ್ಥಿಕತೆ ಆಗಿರುವ ಚೀನಾದಿಂದ ಆಮದು ಮಾಡಿಕೊಳ್ಳುವ ಸರಕುಗಳ ಮೇಲೆ ಹೆಚ್ಚುವರಿಯಾಗಿ ಶೇ 100ರಷ್ಟು ಸುಂಕ ಹೇರುವುದಾಗಿ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಶುಕ್ರವಾರ ಘೋಷಿಸಿದ್ದರು.

'ಈ ನಿಲುವು ಅಮೆರಿಕದ ದ್ವಂದ್ವ ನೀತಿಗೆ ವಿಶಿಷ್ಟ ಉದಾಹರಣೆಯಾಗಿದೆ' ಎಂದು ಎಂದು ಚೀನಾದ ವಾಣಿಜ್ಯ ಸಚಿವಾಲಯದ ವಕ್ತಾರ ಪ್ರತಿಕ್ರಿಯಿಸಿದ್ದಾರೆ.

'ಚೀನಾ ಹಿತಾಸಕ್ತಿಗೆ ವಿರುದ್ಧ ಅಮೆರಿಕ ನಿಲುವು ತೆಗೆದುಕೊಳ್ಳುತ್ತಿದೆ. ಇದರಿಂದ ವ್ಯಾಪಾರ ಮಾತುಕತೆಗೆ ಹಿನ್ನೆಡೆ ಉಂಟಾಗುವ ಭೀತಿಯಿದೆ. ಸುಂಕ ಹೆಚ್ಚಿಸುವುದು ಸರಿಯಾದ ನೀತಿಯಲ್ಲ' ಎಂದಿದ್ದಾರೆ.

ಚೀನಾವು ವಿರಳ ಲೋಹಗಳ ರಫ್ತಿನ ಮೇಲೆ ಹೇರಿರುವ ನಿರ್ಬಂಧಗಳಿಗೆ ಪ್ರತಿಯಾಗಿ ಅಮೆರಿಕವು ಹೆಚ್ಚುವರಿ ಸುಂಕದ ಬೆದರಿಕೆ ಒಡ್ಡಿದೆ. ಈ ತಿಂಗಳಾಂತ್ಯದಲ್ಲಿ ಚೀನಾದ ಅಧ್ಯಕ್ಷ ಷಿ ಜಿನ್ಪಿಂಗ್ ಅವರನ್ನು ಭೇಟಿಯಾಗುವ ಅಗತ್ಯವಿಲ್ಲ ಎಂದೂ ಟ್ರಂಪ್ ಹೇಳಿಕೆ ನೀಡಿದ್ದರು.
.ಚೀನಾಕ್ಕೆ ಶೇ 100ರಷ್ಟು ಹೆಚ್ಚುವರಿ ಸುಂಕ: ಟ್ರಂಪ್ ಬೆದರಿಕೆ.ಅಮೆರಿಕ ಸರ್ಕಾರ ಸ್ಥಗಿತ: ಟ್ರಂಪ್ ಆಡಳಿತ ಯಂತ್ರ ನಿಂತಿದ್ದರಿಂದ ಪರಿಣಾಮಗಳೇನು?.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.