ವಾಷಿಂಗ್ಟನ್: ನವೆಂಬರ್ 1ರಿಂದ ಜಾರಿಗೆ ಬರುವಂತೆ ಚೀನಾದಿಂದ ಆಮದು ಮಾಡಿಕೊಳ್ಳುವ ಸರಕುಗಳ ಮೇಲೆ ಹೆಚ್ಚುವರಿಯಾಗಿ ಶೇ 100ರಷ್ಟು ಸುಂಕ ಹೇರುವುದಾಗಿ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಶುಕ್ರವಾರ ಹೇಳಿದ್ದಾರೆ.

ಚೀನಾವು ವಿರಳ ಲೋಹಗಳ ರಫ್ತಿನ ಮೇಲೆ ಹೇರಿರುವ ನಿರ್ಬಂಧಗಳಿಗೆ ಪ್ರತಿಯಾಗಿ ಅಮೆರಿಕವು ಹೆಚ್ಚುವರಿ ಸುಂಕದ ಬೆದರಿಕೆ ಒಡ್ಡಿದೆ.

ಅಮೆರಿಕದೊಂದಿಗಿನ ಸುಂಕ ಸಮರ ಮತ್ತು ಜಾಗತಿಕ ಮಾರುಕಟ್ಟೆಯಲ್ಲಿನ ಬೆಳವಣಿಗೆಗಳಿಂದಾಗಿ ಚೀನಾ, 17ಕ್ಕೂ ಹೆಚ್ಚು ವಿರಳ ಲೋಹಗಳು ಮತ್ತು ಅವುಗಳ ಮೌಲ್ಯವರ್ಧಿತ ಉತ್ಪನ್ನಗಳ ರಫ್ತಿನ ಮೇಲೆ ಕೆಲವು ನಿರ್ಬಂಧಗಳನ್ನು ಹೇರಿದೆ. ಚೀನಾದಿಂದ ವಿರಳ ಲೋಹ ಆಮದು ಮಾಡಿಕೊಳ್ಳಲು ಕಂಪನಿಗಳು ವಿಶೇಷ ಅನುಮತಿ ಪಡೆಯುವುದನ್ನು ಅ.9ರಿಂದ ಕಡ್ಡಾಯಗೊಳಿಸಲಾಗಿದೆ.

ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ಟ್ರಂಪ್, ‘ಚೀನಾದ ಕ್ರಮ ಆಘಾತಕಾರಿ ಮತ್ತು ಅನಿರೀಕ್ಷಿತ. ಇದು ಇತರೆ ದೇಶಗಳೊಂದಿಗೆ ಹಗೆತನಕ್ಕೆ ಕಾರಣವಾಗಿದೆ. ಮುಂಬರುವ ದಕ್ಷಿಣ ಕೊರಿಯಾ ಪ್ರವಾಸದ ವೇಳೆ, ಚೀನಾದ ಅಧ್ಯಕ್ಷ ಷಿ ಜಿನ್ಪಿಂಗ್ ಅವರನ್ನು ಭೇಟಿಯಾಗಲು ಯಾವುದೇ ಸಕಾರಣವಿಲ್ಲ’ ಎಂದು ಹೇಳಿದ್ದಾರೆ.|

ಅಮೆರಿಕದ ಸುಂಕ ಏರಿಕೆ ಕುರಿತು, ವಾಷ್ಟಿಂಗ್ಟನ್ನಲ್ಲಿರುವ ಚೀನಾದ ರಾಯಭಾರಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ಜಾಗತಿಕ ಆರ್ಥಿಕ ಹಿಂಜರಿತ:

ಪದೇ ಪದೇ ಸುಂಕ ಏರಿಕೆಯಿಂದಾಗಿ ಅಮೆರಿಕದಲ್ಲಿ ಹಣದುಬ್ಬರ ದರ ಹೆಚ್ಚಿದ್ದು, ಆರ್ಥಿಕ ಅನಿಶ್ಚಿತತೆ ಮುಂದುವರಿದಿದೆ. ಇದು ಏಪ್ರಿಲ್ ವೇಳೆಗೆ ಮತ್ತೊಂದು ಸುತ್ತಿನ ಜಾಗತಿಕ ಆರ್ಥಿಕ ಹಿಂಜರಿತಕ್ಕೂ ಇದು ಕಾರಣವಾಗಬಹುದು ಎಂಬ ವಿಶ್ಲೇಷಣೆಗಳು ನಡೆಯುತ್ತಿವೆ.

.ಸುಂಕ ಸಮರ: ಅಮೆರಿಕದ ಬೋಯಿಂಗ್ ವಿಮಾನ ಸ್ವೀಕರಿಸದಂತೆ ಚೀನಾ ಆದೇಶ.
‘ಕಾದು ನೋಡೋಣ’

ಶನಿವಾರ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಟ್ರಂಪ್ ‘ಚೀನಾದ ಸುಂಕ ಬೆದರಿಕೆಗೆ ತಡೆ ಹಾಕಲು ನಮಗೆ ಇದು ಸಕಾಲ. ಹಾಗಾಗಿಯೇ ನಾನು ಅವರಿಗೆ ಶೇ 100 ಹೆಚ್ಚುವರಿ ಸುಂಕ ಜಾರಿಗೊಳಿಸಲು ನ.1ರ ಗಡುವು ನಿಗದಿಪಡಿಸಿದ್ದೇನೆ. ಅಲ್ಲಿಯವರೆಗೆ ಏನಾಗುತ್ತದೆ ಕಾದು ನೋಡೋಣ’ ಎಂದು ಹೇಳಿದ್ದಾರೆ.

ಷಿ ಜಿನ್ಪಿಂಗ್ ಭೇಟಿಯ ಕುರಿತು ಪ್ರಶ್ನೆ ಬಂದಾಗ ‘ಭೇಟಿಯನ್ನು ರದ್ದುಪಡಿಸಿಲ್ಲ. ಆದರೆ ಈ ಭೇಟಿಯಿಂದ ಅಮೆರಿಕಕ್ಕೆ ಏನು ಪ್ರಯೋಜನವಾಗತ್ತದೆ ಎನ್ನುವುದು ನನಗೆ ತಿಳಿದಿಲ್ಲ’ ಎಂದಿದ್ದಾರೆ.

ಆರೋಗ್ಯ ತಪಾಸಣೆ ‘ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಆರೋಗ್ಯ ಅತ್ಯುತ್ತಮ ಮಟ್ಟದಲ್ಲಿದೆ’ ಎಂದು ಅವರ ವೈದ್ಯ ಸೀನ್ ಬಾರ್ಬಬೆಲಾ ಹೇಳಿದ್ದಾರೆ. ಟ್ರಂಪ್ ಅವರು ಶುಕ್ರವಾರ ರಾತ್ರಿ ಇಲ್ಲಿನ ವಾಲ್ಟರ್ ರೀಡ್ ನ್ಯಾಷನಲ್ ಮಿಲಿಟರಿ ಆಸ್ಪತ್ರೆಯಲ್ಲಿ ನಿಗದಿತ ಆರೋಗ್ಯ ತಪಾಸಣೆಗೆ ಒಳಗಾದರು. ಅವರಿಗೆ ಕೋವಿಡ್–19 ಬೂಸ್ಟರ್ ಲಸಿಕೆ ಮತ್ತು ವಾರ್ಷಿಕ ಜ್ವರದ ಚುಚ್ಚುಮದ್ದು ನೀಡಲಾಯಿತು ಎಂದು ಆಸ್ಪತ್ರೆ ವೈದ್ಯಕೀಯ ವರದಿ ಉಲ್ಲೇಖಿಸಿ ಶ್ವೇತಭವನ ಪ್ರಕಟಣೆಯಲ್ಲಿ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.