ಕೊಲಂಬೊ: ತನ್ನ ಜಲಪ್ರದೇಶದಲ್ಲಿ ಮೀನುಗಾರಿಕೆ ಮಾಡುತ್ತಿದ್ದ ಎಂಟು ಭಾರತೀಯ ಮೀನುಗಾರರನ್ನು ಬಂಧಿಸಿದ್ದಾಗಿ ಶ್ರೀಲಂಕಾ ಜಲಸೇನೆ ಭಾನುವಾರ ಹೇಳಿದೆ. ಅಲ್ಲದೆ ಅವರಿಂದ ಎರಡು ದೋಣಿಗಳನ್ನು ಜಪ್ತಿ ಮಾಡಿದ್ದಾಗಿ ಮಾಹಿತಿ ನೀಡಿದೆ.

ಮನ್ನಾರ್ನ ಉತ್ತರ ಭಾಗದಲ್ಲಿ ಶನಿವಾರ ನಡೆಸಿದ ವಿಶೇಷ ಕಾರ್ಯಾಚರಣೆ ವೇಳೆ ಬಂಧಿಸಲಾಗಿದೆ ಎಂದು ಜಲಸೇನೆಯ ಪತ್ರಿಕಾ ಪ್ರಕಟಣೆಯಲ್ಲಿ ಹೇಳಲಾಗಿದೆ.
.ಶ್ರೀಲಂಕಾ: ದೋಣಿ ತಂಗುದಾಣ ಅಭಿವೃದ್ಧಿಗೆ ಭಾರತ ₹8 ಕೋಟಿ ನೆರವು.
ಇದರೊಂದಿಗೆ ಒಟ್ಟು 18 ಭಾರತೀಯ ಮೀನುಗಾರರನ್ನು ಬಂಧಿಸಿದಂತಾಗಿದೆ. ಜಪ್ತಿ ಮಾಡಿದ ದೋಣಿಗಳ ಸಂಖ್ಯೆ 3ಕ್ಕೆ ಏರಿಕೆಯಾಗಿದೆ ಎಂದು ಪ್ರಕಟಣೆ ತಿಳಿಸಿದೆ.

‘ಶ್ರೀಲಂಕಾದ ಜಲ ಪ್ರದೇಶದಲ್ಲಿ ಅಕ್ರಮವಾಗಿ ಮೀನುಗಾರಿಕೆ ಮಾಡುತ್ತಿದ್ದ ಭಾರತದ ಮೀನುಗಾರಿಕಾ ದೋಣಿಗಳನ್ನು ಪತ್ತೆ ಮಾಡಲಾಯಿತು. ಕಾರ್ಯಾಚರಣೆಯಲ್ಲಿ 2 ಭಾರತೀಯ ಮೀನುಗಾರಿಕಾ ಬೋಟ್ಗಳನ್ನು ಜಪ್ತಿ ಮಾಡಿ 8 ಭಾರತೀಯ ಮೀನುಗಾರರನ್ನು ಬಂಧಿಸಲಾಗಿದೆ’ ಎಂದು ಪ್ರಕಟಣೆಯಲ್ಲಿ ಉಲ್ಲೇಖವಿದೆ.
.ಶ್ರೀಲಂಕಾ: ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷರ ನಿರಾಶ್ರಿತರ ಭೇಟಿಗೆ ನಿರಾಕರಣೆ.
ಬಂಧಿತ ಮೀನುಗಾರರು ಹಾಗೂ ಅವರ ದೋಣಿಗಳನ್ನು ಇರಾನ್ವಟಿವು ದ್ವೀಪಕ್ಕೆ ಕರೆತರಲಾಗಿದ್ದು, ಮುಂದಿನ ಕಾನೂನು ಪ್ರಕ್ರಿಯೆಗಳಿಗೆ ಅವರನ್ನು ಕಿಲಿನೊಚ್ಚಿಯ ಸಹಾಯಕ ಮೀನುಗಾರಿಕೆ ನಿರ್ದೇಶನಾಲಯಕ್ಕೆ ಹಸ್ತಾಂತರಿಸಲಾಗುವುದು ಎಂದು ಅದು ಹೇಳಿದೆ.
.ಶ್ರೀಲಂಕಾ: ಅಭಿವೃದ್ಧಿ ಚಟುವಟಿಕೆಗಳಿಗಾಗಿ ಭಾರತದಿಂದ ₹230 ಕೋಟಿ ನೆರವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.