ಮಾಸ್ಕೋ: ಉಕ್ರೇನ್ ಗಡಿಯ ಸಮಿ ಪ್ರದೇಶದ ಕರ್ಸ್ಕ್ನಲ್ಲಿ ರಷ್ಯಾ ನೌಕಾಪಡೆಯ ಉಪ ಮುಖ್ಯಸ್ಥ ಮೇಜರ್ ಜನರಲ್ ಮಿಖಾಯಿಲ್ ಗುಡಕೋವ್ ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪಶ್ಚಿಮ ಕರ್ಸ್ಕ್ನಲ್ಲಿ ಕಾರ್ಯಾಚರಣೆ ನಡೆಯುತ್ತಿತ್ತು ಎಂದು ರಷ್ಯಾ ರಕ್ಷಣಾ ಇಲಾಖೆ ದೃಢಪಡಿಸಿದೆ. ರಷ್ಯನ್ ಫೆಡರೇಷನ್ನ ಹೀರೋ ಎಂದೇ ಕರೆಸಿಕೊಳ್ಳುತ್ತಿದ್ದ ಗುಡಕೋವ್, 155ನೇ ಸಾಗರ ಬ್ರಿಗೇಡ್ನ ಮಾಜಿ ಕಮಾಂಡರ್ ಆಗಿದ್ದರು.

ಗಡಿಯಲ್ಲಿದ್ದ ಮುಂಚೂಣಿ ಪಡೆಗಳನ್ನು ಭೇಟಿ ಮಾಡಿದ್ದ ವೇಳೆ ಗುಡಕೋವ್ ಸಾವನ್ನಪ್ಪಿದ್ದಾರೆ ಎಂದು ಕರ್ಸ್ಕ್ ರಾಜ್ಯಪಾಲ ಅಲೆಕ್ಸಾಂಡರ್ ಖಿನ್ಶೆಟೇನ್ ‘ಟೆಲಿಗ್ರಾಮ್ ಪೋಸ್ಟ್’ಗೆ ತಿಳಿಸಿದ್ದಾರೆ. ಆದರೆ ಸಾವು ಹೇಗೆ ಸಂಭವಿಸಿದೆ ಎಂಬ ಬಗ್ಗೆ ಹೆಚ್ಚಿನ ಮಾಹಿತಿ ನೀಡಿಲ್ಲ.

ಮೂರೂವರೆ ವರ್ಷದಿಂದ ರಷ್ಯಾ ಸೇನೆಯು ಉಕ್ರೇನ್ನಲ್ಲಿ ಕಾರ್ಯಾಚರಣೆ ನಡೆಸುತ್ತಿದೆ. ಈವರೆಗೆ 10 ಸೇನಾ ಜನರಲ್ಗಳು ಸಾವನ್ನಪ್ಪಿರುವುದನ್ನು ಮಾಸ್ಕೋ ಖಚಿತಪಡಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.