ನ್ಯೂಯಾರ್ಕ್: ಆಸ್ತಿಗಳ ಮೌಲ್ಯಗಳನ್ನು ಹೆಚ್ಚು ತೋರಿಸಿ ವಂಚನೆ ಎಸಗಿದ ಪ್ರಕರಣದಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಕೆಳನ್ಯಾಯಾಲಯ ವಿಧಿಸಿದ್ದ $ 500 ಮಿಲಿಯನ್ ಡಾಲರ್ ದಂಡವನ್ನು ಮೇಲ್ಮನವಿ ನ್ಯಾಯಾಲಯ ರದ್ದುಗೊಳಿಸಿದೆ.
.ಉಕ್ರೇನ್ಗೆ ಸೇನೆ ಕಳುಹಿಸುವುದಿಲ್ಲ: ಟ್ರಂಪ್.
ದಂಡವನ್ನು ರದ್ದು ಮಾಡಿದ್ದರೂ, ಟ್ರಂಪ್ ಹಾಗೂ ಅವರ ಇಬ್ಬರು ಪುತ್ರರಿಂದ ಕಂಪನಿಯ ನಾಯಕತ್ವದಲ್ಲಿ ಮುಂದುವರಿಯುವುದಕ್ಕೆ ಕೆಲವು ವರ್ಷಗಳು ನಿರ್ಬಂಧ ವಿಧಿಸಿದೆ.

ಸಾಲ ಪಡೆಯಲು ಆಸ್ತಿಗಳ ಮೌಲ್ಯವನ್ನು ಹೆಚ್ಚು ತೋರಿಸಿದ್ದಾರೆ ಎಂದು ನ್ಯೂಯಾರ್ಕ್ ಅಟಾರ್ನಿ ಜನರಲ್ ಲೆಟಿಟಿಯಾ ಜೇಮ್ಸ್ ಮೊಕದ್ದಮೆ ಹೂಡಿದ್ದರು.
.ಪುಟಿನ್–ಝೆಲೆನ್ಸ್ಕಿ ಸಭೆಗೆ ಸಿದ್ಧತೆ: ಡೊನಾಲ್ಡ್ ಟ್ರಂಪ್.
ನ್ಯೂಯಾರ್ಕ್ ಸುಪ್ರೀಂ ಕೋರ್ಟ್ನ ಮೇಲ್ಮನವಿ ವಿಭಾಗದ ಗುರುವಾರ ತೀರ್ಪಿನ ದೀರ್ಘ ಪ್ರತಿ ಬಿಡುಗಡೆಯಾಗಿದ್ದು, ವಂಚನೆಗೆ ಟ್ರಂಪ್ ಹೊಣೆಗಾರರಾಗಿದ್ದರೂ, ಸುಮಾರು ಅರ್ಧ ಶತಕೋಟಿ ಡಾಲರ್ ದಂಡ ವಿಧಿಸುವುದು ಅತಿಯಾಗಿದೆ ಎಂದು ಅಭಿಪ್ರಾಯಪಟ್ಟಿತು.

ಈ ತೀರ್ಪು ‘ಸಂಪೂರ್ಣ ಗೆಲುವು’ ಎಂದು ಟ್ರಂಪ್ ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯಿಸಿದ್ದಾರೆ.
.ಟ್ರಂಪ್ ಜತೆಗಿನ ಅಲಾಸ್ಕ ಸಭೆ ಕುರಿತು ಪ್ರಧಾನಿ ಮೋದಿಗೆ ಮಾಹಿತಿ ನೀಡಿದ ಪುಟಿನ್.
‘ನ್ಯೂಯಾರ್ಕ್ ರಾಜ್ಯದಾದ್ಯಂತ ವ್ಯವಹಾರಕ್ಕೆ ಹಾನಿ ಮಾಡುತ್ತಿದ್ದ ಈ ಕಾನೂನುಬಾಹಿರ ಮತ್ತು ಅವಮಾನಕರ ನಿರ್ಧಾರವನ್ನು ತಳ್ಳಿಹಾಕಲು ನ್ಯಾಯಾಲಯವು ಧೈರ್ಯ ತೋರಿದೆ’ ಎಂದು ಅವರು ಬರೆದುಕೊಂಡಿದ್ದಾರೆ.

ಕೆಳ ನ್ಯಾಯಾಲಯದ ನ್ಯಾಯಾಧೀಶ ಅರ್ಥೂರ್ ಎಂಗೊರನ್ ಅವರು ಟ್ರಂಪ್ಗೆ $355 ಮಿಲಿಯನ್ ಡಾಲರ್ ದಂಡ ವಿಧಿಸಿದ್ದರು. ಬಡ್ಡಿ ಸೇರಿ $527 ಮಿಲಿಯನ್ ಆಗಿತ್ತು.
.ಚೆನ್ನಾಗಿ ಕಾಣುತ್ತಿದ್ದೀರಿ: ಟ್ರಂಪ್ ಎದುರು ಝೆಲೆನ್ಸ್ಕಿ ಉಡುಪು ಹೊಗಳಿದ ವರದಿಗಾರ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.