ವಾಷಿಂಗ್ಟನ್: ರಷ್ಯಾದಿಂದ ಉಕ್ರೇನ್ಗೆ ರಕ್ಷಣೆ ನೀಡಲು ಸೇನೆಯನ್ನು ಕಳುಹಿಸುವುದಿಲ್ಲ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭರವಸೆ ನೀಡಿದ್ದಾರೆ.

‘ನಾನು ಅಧ್ಯಕ್ಷ. ಹಾಗಾಗಿ ಭರವಸೆ ನೀಡುತ್ತೇನೆ. ಉಕ್ರೇನ್ಗೆ ಸೇನೆಯನ್ನು ಕಳುಹಿಸುವುದಿಲ್ಲ’ ಎಂದು ಟ್ರಂಪ್ ಮಂಗಳವಾರ ನೀಡಿದ ಸಂದರ್ಶನವೊಂದರಲ್ಲಿ ಹೇಳಿದ್ದಾರೆ.

ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಮತ್ತು ಇತರ ನಾಯಕರೊಡನೆ ಸೋಮವಾರ ಸಭೆ ನಡೆಸಿದ ಬಳಿಕ ಪ್ರತಿಕ್ರಿಯಿಸಿದ್ದ ಟ್ರಂಪ್ ಉಕ್ರೇನ್ಗೆ ಸೇನಾ ನೆರವು ನೀಡುವ ವರದಿಗಳನ್ನು ನಿರಾಕರಿಸಿರಲಿಲ್ಲ.

ರಷ್ಯಾ ಮತ್ತು ಉಕ್ರೇನ್ ನಡುವಿನ ಶಾಂತಿ ಸ್ಥಾಪನೆ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿದ ಟ್ರಂಪ್, ‘ನ್ಯಾಟೊಕ್ಕೆ ಸೇರುವ ಮತ್ತು ರಷ್ಯಾದಿಂದ ಕ್ರಿಮಿಯಾವನ್ನು ಮರಳಿ ಪಡೆಯುವ ಉಕ್ರೇನ್ ಆಶಯ ಈಡೇರುವುದಿಲ್ಲ’ ಎಂದು ಹೇಳಿದರು.

ರಜೆ ರದ್ದುಪಡಿಸಿಕೊಂಡ ಟ್ರಂಪ್

ರಷ್ಯಾ ಮತ್ತು ಉಕ್ರೇನ್ ನಡುವೆ ಶಾಂತಿಸ್ಥಾಪನೆ ಕುರಿತ ಮಾತುಕತೆಗಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ತಮ್ಮ ಸಾಂಪ್ರದಾಯಿಕ ಬೇಸಿಗೆ ರಜೆಯನ್ನು ರದ್ದುಗೊಳಿಸಿದ್ದಾರೆ ಎಂದು ಶ್ವೇತಭವನ ತಿಳಿಸಿದೆ. ‘ಟ್ರಂಪ್ ಅವರು ಬೇಸಿಗೆ ರಜೆಯಲ್ಲಿ ನ್ಯೂಜೆರ್ಸಿಗೆ ತೆರಳಬೇಕಿತ್ತು. ಆದರೆ ಟ್ರಂಪ್ ತಮ್ಮ ರಜೆಯನ್ನೇ ರದ್ದುಗೊಳಿಸಿದ್ದಾರೆ’ ಎಂದು ಶ್ವೇತಭವನದ ಮಾಧ್ಯಮ ಕಾರ್ಯದರ್ಶಿ ಕರೋಲಿನ್ ಲೆವಿಟ್ ಅವರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.