ಲಂಡನ್: ಯುರೋಪ್ನಲ್ಲಿ ಕೊರೊನಾ ವೈರಸ್ನ ಎರಡನೇ ಅಲೆ ವಿಸ್ತರಿಸುತ್ತಿರುವ ಬಗ್ಗೆ ಬ್ರಿಟಿಷ್ ಆಡಳಿತ ಕಳವಳ ವ್ಯಕ್ತಪಡಿಸಿದೆ. ಕೋವಿಡ್ ಸಾಂಕ್ರಾಮಿಕ ನಿಯಂತ್ರಿಸುವ ನಿಟ್ಟಿನಲ್ಲಿ ಮತ್ತಷ್ಟು ಕ್ವಾರಂಟೈನ್ ಕ್ರಮಗಳನ್ನು ಜಾರಿಗೆ ತರಲು ಹಿಂದೇಟು ಹಾಕುವುದಿಲ್ಲ ಎಂದು ಆರೋಗ್ಯ ಕಾರ್ಯದರ್ಶಿ ಮ್ಯಾಟ್ ಹ್ಯಾನ್ಕಾಕ್ ಗುರುವಾರ ಹೇಳಿದ್ದಾರೆ.

ಸ್ಪೇನ್ನಿಂದ ಬ್ರಿಟನ್ ಪ್ರವೇಶಿಸುವವರಿಗೆ 14 ದಿನಗಳ ಕ್ವಾರಂಟೈನ್ ಅವಧಿಯನ್ನು ಮತ್ತೆ ಜಾರಿಗೊಳಿಸಲಾಗಿದೆ. ಪ್ರವಾಸಕ್ಕೆ ಮುಕ್ತಗೊಳಿಸಲು ಉದ್ದೇಶಿಸಲಾಗಿದ್ದ ಯೋಜನೆಗಳು ಕೊರೊನಾ ವೈರಸ್ನ ಎರಡನೇ ಅಲೆಯಿಂದಾಗಿ ತಲೆಕೆಳಗಾಗಿವೆ.

'ಕೋವಿಡ್ ಎರಡನೇ ಅಲೆಯು ಕಳವಳ ಉಂಟು ಮಾಡಿದೆ. ಯುರೋಪಿನಾದ್ಯಂತ ಎರಡನೇ ಅಲೆ ವಿಸ್ತರಿಸಿಕೊಳ್ಳುತ್ತಿರುವುದನ್ನು ನೀವು ಕಾಣಬಹುದಾಗಿದೆ, ಅದು ನಮ್ಮ ತೀರ ತಲುಪುವುದನ್ನು ತಡೆಯಲು ಅಗತ್ಯವಿರುವ ಎಲ್ಲ ಕ್ರಮಗಳನ್ನು ಕೈಗೊಳ್ಳಲು ಸಿದ್ಧರಿದ್ದೇವೆ' ಎಂದು ಸ್ಕೈ ನ್ಯೂಸ್ಗೆ ನೀಡಿರುವ ಸಂದರ್ಶನದಲ್ಲಿ ಹ್ಯಾನ್ಕಾಕ್ ಪ್ರತಿಕ್ರಿಯಿಸಿದ್ದಾರೆ.

ಕೊರೊನಾ ವೈರಸ್ ದೃಢಪಟ್ಟರೆ ಅಥವಾ ಸೋಂಕಿನ ಲಕ್ಷಣಗಳು ಕಂಡು ಬಂದರೆ ವ್ಯಕ್ತಿಯು ಸ್ವಯಂ ಪ್ರತ್ಯೇಕ ವಾಸ ನಡೆಸಬೇಕು, ಇಲ್ಲವೇ 10 ದಿನಗಳು ಕ್ವಾರಂಟೈನ್ ಆಗಬೇಕು ಎಂದು ಬ್ರಿಟನ್ನ ಮುಖ್ಯ ವೈದ್ಯಾಧಿಕಾರಿಗಳು ಮಾರ್ಗಸೂಚಿಯಲ್ಲಿ ತಿಳಿಸಿದ್ದಾರೆ.

ಈವರೆಗೂ ಬ್ರಿಟನ್ನಲ್ಲಿ ಕೊರೊನಾ ಸೋಂಕು ಲಕ್ಷಣ ಇರುವವರಿಗೆ 7 ದಿನಗಳು ಕ್ವಾರಂಟೈನ್ ಇರುವಂತೆ ಸೂಚಿಸಲಾಗಿತ್ತು. ಯುರೋಪ್ನಲ್ಲಿ ಕೊರೊನಾ ಸೋಂಕಿನಿಂದ ಈವರೆಗೂ 1,81,000 ಜನ ಸಾವಿಗೀಡಾಗಿದ್ದಾರೆ.

‘ಸ್ಪೇನ್ ಮಾತ್ರವಲ್ಲ, ಯುರೋಪ್ನ ಇತರೆ ರಾಷ್ಟ್ರಗಳಲ್ಲಿಯೂ ಕೋವಿಡ್ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿವೆ. ಫ್ರಾನ್ಸ್ನಲ್ಲೂ ದಿನದಿಂದ ದಿನಕ್ಕೆ ಪ್ರಕರಣಗಳ ಸಂಖ್ಯೆ ಏರಿಕೆಯಾಗುತ್ತಿದ್ದು, ದೇಶವನ್ನು ಸಾಂಕ್ರಾಮಿಕದಿಂದ ರಕ್ಷಿಸಲು ಅಗತ್ಯವಿರುವ ತುರ್ತು ಕ್ರಮಗಳನ್ನು ಕೈಗೊಳ್ಳುತ್ತೇವೆ' ಎಂದು ಹ್ಯಾನ್ಕಾಕ್ ಹೇಳಿದ್ದಾರೆ.

ಅಂತರ ಕಾಯ್ದುಕೊಳ್ಳುವ ಮಾರ್ಗ ಸೂಚಿಗಳನ್ನು ಅನುಸರಿಸುವಂತೆ ಜನರಲ್ಲಿ ಕೇಳಿರುವ ಅವರು, ಸ್ಪೇನ್ ಸೇರಿದಂತೆ ಹೊರಗಿನಿಂದ ಬ್ರಿಟನ್ ಪ್ರವೇಶಿಸುವವರಿಗೆ ಕ್ವಾರಂಟೈನ್ ಅವಧಿ ಕಡಿಮೆ ಮಾಡುವ ಕುರಿತು ಚರ್ಚಿಸಲಾಗುತ್ತಿದೆ. ಕ್ವಾರಂಟೈನ್ ಅವಧಿಯಲ್ಲೇ ಅವರಿಗೆ ಪರೀಕ್ಷೆ ನಡೆಸಿ, ಹೊರಗೆ ಬರಲು ಅವಕಾಶ ನೀಡುವುದು ಸುರಕ್ಷಿತವೇ ಎಂಬುದರ ಬಗ್ಗೆಯೂ ಯೋಚಿಸಲಾಗುತ್ತಿದೆ ಎಂದಿದ್ದಾರೆ.

ತಿಂಗಳ ಅಂತರದ ಬಳಿಕ ಸ್ಪೇನ್ನಲ್ಲಿ ಬುಧವಾರ ಒಂದೇ ದಿನ ಕೋವಿಡ್ ದೃಢಪಟ್ಟ 1,400 ಹೊಸ ಪ್ರಕರಣಗಳು ದಾಖಲಾಗಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.